Home ಜಿಲ್ಲೆ ಕಲಬುರಗಿ ಬಸ್ ಪಲ್ಟಿ: ಐವರಿಗೆ ಸಣ್ಣಪುಟ್ಟ ಗಾಯ

ಬಸ್ ಪಲ್ಟಿ: ಐವರಿಗೆ ಸಣ್ಣಪುಟ್ಟ ಗಾಯ

ಕಲಬುರಗಿ,ಜು 31: ಕಮಲಾಪುರ ತಾಲೂಕಿನ ಮಹಾಗಾಂವ್ ಪಟ್ಟಣದ ಸಮೀಪ ಕೆಕೆಆರ್‍ಟಿಸಿ ಬಸ್ ಪಲ್ಟಿಯಾಗಿ
ಚಾಲಕ, ನಿರ್ವಾಹಕ ಸಹಿತ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೀದರ್‍ನಿಂದ ಕಲಬುರಗಿಗೆ ಬರುತ್ತಿದ್ದ ಈ ಕೆಕೆಆರ್‍ಟಿಸಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ತಗ್ಗುಗುಂಡಿಯಲ್ಲಿ ಪಲ್ಟಿಯಾಗಿದೆ.
ಬಸ್‍ನಲ್ಲಿ ಕೇವಲ ಐವರು ಪ್ರಯಾಣಿಕರು ಮಾತ್ರ ಇದ್ದರು ಎಂದು ಗೊತ್ತಾಗಿದೆ.ಮಹಾಗಾಂವ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.