
ನವಲಗುಂದ,ಆ೧ : ರಕ್ತದಾನ ಮತ್ತೊಬ್ಬ ಜೀವಿಯ ಜೀವಉಳಿಸುವ ಮಹಾದಾನವಾಗಿದೆ ಎಂದು ಪಂಚಗೃಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಸ್ವಾಮೀಜಿ ನುಡಿದರು.
ಅವರು ಪಟ್ಟಣದಶ್ರೀ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ದೇವರಾಜ ದಾಡಿಬಾವಿ ಹುಟ್ಟುಹಬ್ಬದ ಅಂಗವಾಗಿ ಗೆಳೆಯರ ಬಳಗದವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಹುಟ್ಟುಹಬ್ಬದ ಕಾರ್ಯಕ್ರಮದ ಆಶೀರ್ವದಿಸಿ ಸಾನಿಧ್ಯವಹಿಸಿ ಮಾತನಾಡಿದರು.
ಹುಟ್ಟುಹಬ್ಬದ ಸಂಭ್ರಮವನ್ನು ದುಂದುವೆಚ್ಚ ಮಾಡದೆ, ಸಮಾಜಕ್ಕೆ ಒಳಿತಾಗುವ ಸತ್ಕಾರ್ಯಗಳೊಂದಿಗೆ ಆಚರಿಸುವ ದೇವರಾಜ ದಾಡಿಬಾವಿ ಅವರು ಹಾಗೂ ಅವರ ಗೆಳೆಯರ ಬಳಗದ ಈ ಮಹತ್ವ ಕಾರ್ಯ ಶ್ಲಾಘನೀಯ. ದೇವರಾಜ ದಾಡಿಬಾವಿ ಅವರು ಸದಾ ಸಮಾಜಮುಖಿ ಚಿಂತನೆ ಹಾಗೂ ಸ್ನೇಹ, ಸೇವಾ ಮನೋಭಾವವನ್ನು ಹೊಂದಿದ ಯುವನಾಯಕ, ಭವಿಷ್ಯದಲ್ಲಿ ಅವರ ಇಷ್ಟಾರ್ಥಗಳು ಈಡೇರಲಿ ಎಂದು ಆಶೀರ್ವದಿಸಿದರು.
ಮಣಕವಾಡ ಮಠದ ಮೃತ್ಯುಂಜಯ ಶ್ರೀಗಳು ಮಾತನಾಡಿ, ದೇವರಾಜ ದಾಡಿಬಾವಿ ಅವರು ಅಣ್ಣಿಗೇರಿಯಲ್ಲಿ ಪಿಎಲ್ ಡಿ ಬ್ಯಾಂಕ್ ಸ್ಥಾಪನೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿದ್ದಾರೆ. ಅವರು ಸಮಾಜಮುಖಿ ಕೆಲಸ ಮೆಚ್ಚುವಂತದ್ದು. ಒಬ್ಬ ವ್ಯಕ್ತಿ ಧನಗಳಿಸಬಹುದು. ಆದರೆ ಜನಗಳಿಸುವುದು ಕಷ್ಟ. ಸಹಸ್ರಾರು ಸಂಖ್ಯೆಯಲ್ಲಿ ಇಷ್ಟೊಂದು ಜನರು ಸೇರಿದ್ದಾರೆ ಅಂದರೆ ನಿಮ್ಮ ಮೇಲಿನ ಪ್ರೀತಿ, ಅಭಿಮಾನ, ಗೌರವ ಕಾರಣ ಎಂದರು.
ಷಣ್ಮುಖ ಗುರಿಕಾರ ಮಾತನಾಡಿ, ಯುವಕರ ಹೊಸ ಭರವಸೆಯಾಗಿ ಹೊರಹೊಮ್ಮಿರುವ ದಾಡಿಬಾವಿ ಅವರ ಸೇವಾ ಗುಣವನ್ನು ಕೊಂಡಾಡಿದರು. ಜನ್ಮದಿನದ ನಿಮಿತ್ತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ಸೇವೆ, ವನಮಹೋತವ ಹಾಗೂ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಮಾರಂಭದಲ್ಲಿ ಪ್ರಮುಖರಾದ ಲಿಂಗರಾಜ ಸರದೇಸಾಯಿ, ಸಿದ್ದಲಿಂಗಪ್ಪ ಮದ್ದೂರು, ಪಿ.ಸಿ. ಲೋಕಾಪುರಮಠ, ಪೂರ್ಣಿಮಾ ಜೋಶಿ, ಪ್ರೇಮಾ ನಾಯ್ಕರ, ಸವಿತಾ ಮೇಗುಂಡಿ, ಶಕುಂತಲಾ ಕರ್ಜಗಿ ಸೇರಿದಂತೆ ದಾಡಿಬಾವಿ ಗೆಳೆಯರ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದು ಯುವ ನಾಯಕನಿಗೆ ಜನ್ಮದಿನದ ಶುಭಾಶಯ ಕೋರಿದರು. ಸರ್ಕಾರಿ ಆಸ್ಪತ್ರೆಯ ರೋಗಿ ಗಳಿಗೆ ಹಣ್ಣುಹಂಪಲ ವಿತರಿಸಲಾಯಿತು. ರಕ್ತದಾನ ಮಾಡಿದವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.






























