Home ಜಿಲ್ಲೆ ಸೈಕಲ್ ಮತ್ತು ಬೈಕ್ ರ‍್ಯಾಲಿ

ಸೈಕಲ್ ಮತ್ತು ಬೈಕ್ ರ‍್ಯಾಲಿ

ಧಾರವಾಡ, ಅ.೪: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ೨೦೨೬ ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ರ್ಯಾಲಿನ್ನು ಜಿಲ್ಲಾ ಸ್ವೀಪ್ ಸಮಿತಿಯಿಂದ ಕರ್ನಾಟಕ ಕಾಲೇಜು ವೃತ್ತದಲ್ಲಿ ಜಿಲ್ಲಾ ಸ್ವೀಪ್ ನೋಡಲ್ ಅಧಿಕಾರಿಗಳಾಗಿರುವ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಚಾಲನೆ ನೀಡಿದರು.


ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಸೈಕಲ್ ಮತ್ತು ಬೈಕ್ ರ‍್ಯಾಲಿ ಯ ಕೆಸಿಡಿ ವೃತ್ತಿದಿಂದ ಸಪ್ತಾಪೂರ ವೃತ್ತ, ಜಯನಗರ ವೃತ್ತ, ಶ್ರೀನಗರ ವೃತ್ತ, ಉದಯಹಾಸ್ಟೇಲ್ ವೃತ್ತ, ಹಿಂದಿ ಪ್ರಚಾರ ಸಭಾ, ಕೋರ್ಟ ವೃತ್ತದಿಂದ ಜುಬ್ಲಿ ಸರ್ಕಲ್‌ದಲ್ಲಿ ಮಾನವ ಸರಪಳಿ ಏರ್ಪಡಿಸಿ, ಮುಕ್ತಾಯವಾಯಿತು.


ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ಎಫ್ ಸಿದ್ಧನಗೌಡರ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಬಿ. ಎಸ್ ರಾಠೋಡ, ಸಮಗ್ರ ಶಿಕ್ಷಣ ಕರ್ನಾಟಕದ ಡಿವಾಯ್‌ಪಿಎಸ್. ಎಂ ಹುಡೇದಮನಿ, ಧಾರವಾಡ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತಾ ತಿಮ್ಮಾಪೂರ, ಮಧ್ಯಾಹ್ನ ಉಪಹಾರ ಯೋಜನೆ ಶಿಕ್ಷಣಾಧಿಕಾರಿ ರೂಪಾ ಪೆರಂಕರ, ಪ್ರೌಢಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ, ಜಿಲ್ಲಾ ನೌಕರರ ಸಂಘದ ಕಾರ್ಯದರ್ಶಿ ಯಡಹಳ್ಳಿ ಹಾಗೂ ಪ್ರೌಢಶಾಲಾ ಶಿಕ್ಷಣ ಸಂಘದ ಅಧ್ಯಕ್ಷ ಬಸೆಟ್ಟಿ ಬಿ.ಜಿ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಸಾರ್ವಜನಿಕರು ಭಾಗವಹಿಸಿದ್ದರು.