Home ಜಿಲ್ಲೆ ಸೆ.೬ ಮತ್ತು ೭ ರಂದು ಭೋಗೇಶ್ವರ ಜಾತ್ರಾ ಮಹೋತ್ಸವ

ಸೆ.೬ ಮತ್ತು ೭ ರಂದು ಭೋಗೇಶ್ವರ ಜಾತ್ರಾ ಮಹೋತ್ಸವ

ತಾಳಿಕೋಟೆ: ತಾಲೂಕಿನ ಹಿರೂರ ಗ್ರಾಮದ ಶ್ರೀ ಭೋಗೇಶ್ವರ ದೇವಸ್ಥಾನದ ಶ್ರೀ ಭೋಗೇಶ್ವರ ಜಾತ್ರಾ ಮಹೋತ್ಸವವು ಸೆ.೬ ಮತ್ತು ೭ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವವು ವಿಜೃಂಭಣೆಯಿAದ ಜರುಗಲಿದೆ.
ಹಿರೂರ ಶ್ರೀ ಅನ್ನದಾನೇಶ್ವರ ಮಠದ ಶ್ರೀ ಗುರುಜಯಸಿದ್ದೇಶ್ವರ ಮಹಾಸ್ವಾಮಿಗಳು, ಗುಂಡಕನಾಳದ ಶ್ರೀ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ದಿವ್ಯ ಸಾನಿದ್ಯದಲ್ಲಿ ನಡೆಯಲಿರುವ ಈ ಜಾತ್ರಾ ಮಹೋತ್ಸವದ ಅಂಗವಾಗಿ ಸೆ.೬ರಂದು ರವಿವಾರರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ಭೋಗೇಶ್ವರ ಭಜನಾ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಜನಾ ಸಂಘದವರಿAದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸೆ.೭ರಂದು ಸೋಮವಾರ ಬೆಳಿಗ್ಗೆ ೮ ಗಂಟೆಯಿAದ ಗಂಗಸ್ಥಳ ಕಾರ್ಯಕ್ರಮವು ಹಾಲಬಾವಿಯಿಂದ ಗ್ರಾಮದ ಪ್ರಮುಖ ಬೀದಿಗಳ ಕುಂಭ ಕಳಸ ವಿವಿಧ ವಾದ್ಯ ವೈಭವಗಳೊಂದಿಗೆ ಮೆರವಣಿಗೆ ಸಾಗಿ ದೇವಸ್ಥಾನ ತಲುಪುವದು. ಬೆಳಿಗ್ಗೆ ೧೧ ಗಂಟೆಗೆ ಶ್ರೀ ಭೋಗೇಶ್ವರ ದೇವರ ಸನ್ನಿಧಿಯಿಂದ ಡೋಣಿ ಭೋಗೇಶ್ವರದ ವರೆಗೆ ಫಲ್ಲಕ್ಕಿ ಉತ್ಸವ ಜರುಗುವದು. ನಂತರ ಅರ್ಚಕರಾದ ವೇ.ಜಗನ್ನಾಥ ಜೋಶಿ, ವೇ.ವೆಂಕಟೇಶ ಜೋಶಿ ಅವರಿಂದ ಶ್ರೀ ಭೋಗೇಶ್ವರ ದೇವರಿಗೆ ರುದ್ರಾಭಿಷೇಕ ಜರುಗುವದು. ನಂತರ ಮಧ್ಯಾಹ್ನ ೧೨ ಗಂಟೆಗೆ ಮಹಾಪ್ರಸಾದ ಜರುಗಲಿದೆ.
ಅದೇ ದಿನ ಸಂಜೆ ೫ ಗಂಟೆಗೆ ಮಹಾರಥೋತ್ಸವ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಜಾತ್ರಾ ಸಮಿತಿ ಮನವಿ ಮಾಡಿದೆ.