Home ಜಿಲ್ಲೆ ಬೆಂಗಳೂರು ಸಾಮಾಜಿಕ ಸಾಮರಸ್ಯ ಬಲವರ್ಧನೆಗೆ ಭಾರತ್ ಜೋಡೊ ಸಂಘ

ಸಾಮಾಜಿಕ ಸಾಮರಸ್ಯ ಬಲವರ್ಧನೆಗೆ ಭಾರತ್ ಜೋಡೊ ಸಂಘ

ಬಂಗಾರಪೇಟೆ.ಸೆ,೬-: ಪ್ರಚಲಿತ ಸನ್ನಿವೇಶದಲ್ಲಿ ಗ್ರಾಮ ಮಟ್ಟದಲ್ಲಿ ಸಾಮಾಜಿಕ ಸಾಮರಸ್ಯ, ಸಹೋದರತ್ವ ಹಾಗೂ ಸಂಘಟನಾತ್ಮಕ ಶಕ್ತಿಯನ್ನು ಬಲಪಡಿಸಲು ಭಾರತ್ ಜೋಡೋ ಸಂಘಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ತಿಳಿಸಿದರು.


ನಗರದ ಕಾಂಗ್ರಸ್ ಕಚೇರಿಯಲ್ಲಿ ನಡೆದ ಭಾರತ್ ಜೋಡೋ ಜಾಗೃತಿ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಸರ್ಕಾರದ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗ ಸಮರ್ಪಕವಾಗಿ ತಲುಪುವಂತೆ ಮಾಡಲು ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಳಹಂತದಿಂದಲೇ ಸಂಘಟನೆಯನ್ನು ಬಲಪಡಿಸುವ ಅಗತ್ಯವಿದೆ ಎಂದರು.


ಸರ್ಕ?ರದ ಜನಕಲ್ಯಾಣ ಗ್ಯ?ರಂಟಿ ಯೋಜನೆಗಳು ಕೇವಲ ಕಾಗದಕ್ಕ ಸೀಮಿತವಾಗದೆ ಪ್ರತಿಯೊಂದು ಬಡ ಕುಟುಂಬಕ್ಕೂ ನೇರವಾಗಿ ತಲುಪಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚನೆಯಾಗುವ ಸಮಿತಿಗಳು ಪಾರದರ್ಶಕತೆ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಪ್ರತಿಯೊಬ್ಬ ಅರ್ಹ ಅರ್ಜಿದಾರನಿಗೂ ಯೋಜನೆಗಳ ಸೌಲಭ್‌ಯ ದೊರಯುವಂತೆ ನೋಡಿಕೊಳ್ಳುವುದು ಸಮಿತಿಗಳ ಪ್ರಮುಖ ಕರ್ತವ್ಯವಾಗಿದೆ ಎಂದು ಹೇಳಿದರು.


ಪ್ರತಿ ಭಾರತ್ ಜೋಡೋ ಯುವ ಸಂಘಕ್ಕ ಸರ್ಕಾರದಿಂದ ರೂ ೧೦ ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಪ್ರತಿಯೊಂದು ಸಂಘದಲ್ಲೂ ೧೦೦ರಿಂದ ೨೫೦ ಸದಸ್ಯರು ಇರಲಿದ್ದಾರ. ಸಂಘಗಳು ಕ್ರಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗ ರಾಷ್ಟ್ರೀಯ ದಿನಗಳ ಮಹತ್ವದ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಿವೆ ಎಂದು ತಿಳಿಸಿದರು.


ಈ ಸಂದರ್ಭದಲ್ಲಿ ಗ್ಯ?ರಂಟಿ ಯೋಜನೆಗಳ ಸಮಿತಿಯ ಅಧ್‌ಯಕ್ಷ ಪಾರ್ಥಸಾರಥಿ,ನಗರಾಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್‌ಯಕ್ಷ ಮುನಿರಾಜು, ಬಂಗಾರಪೇಟೆ ಬ್ಲಾಕ್ ಕಾಂಗ್ರಸ್ ಅಧ್‌ಯಕ್ಷ ಶ್ರೀನಿವಾಸ್, ಬೂದಿಕೋಟೆ ಬ್ಲಾಕ್ ಕಾಂಗ್ರಸ್ ಅಧ್‌ಯಕ್ಷ ನಾಗರಾಜ್, ನಗರ ಬ್ಲಾಕ್ ಅಧ್‌ಯಕ್ಷ ಚಂದು ಕುಮಾರ್, ಪಿ ಎಲ್ ಡಿ ಬ್ಯಾಂಕ್ ಅಧ್‌ಯಕ್ಷ ರಘುನಾಥ್ ಹಾಗೂ ತಾಲೂಕಿನ ಎಲ್ಲಾ ಕಾಂಗ್ರಸ್ ಮುಖಂಡರು ಭಾಗವಹಿಸಿದ್ದರು.