Home ಜಿಲ್ಲೆ ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

ಬೇಡಿಕೆ ಈಡೇರಿಸಲು ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ

ಸಂಜೆವಾಣಿ ವಾರ್ತೆ,
ವಿಜಯಪುರ, ಸೆ. ೧೨: ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆ ಜಾರಿ, ಎಲ್ಲ ವರ್ಗದ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳಿಗೆ ಸಮಾನ ಮತ್ತು ನ್ಯಾಯಸಮ್ಮತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PಐI) ಯೋಜನೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರು ಶುಕ್ರವಾರ ದೇಶವ್ಯಾಪಿ ಮುಷ್ಕರ ನಡೆಸಿದರು. ಇದರ ಭಾಗವಾಗಿ ವಿಜಯಪುರದಲ್ಲಿಯೂ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಬೃಹತ್ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UಈಃU) ಹಾಗೂ ಯುನೈಟೆಡ್ ಫೋರಂ ಆಫ್ ಗ್ರಾಮೀಣ ಬ್ಯಾಂಕ್ ಯೂನಿಯನ್ಸ್ (UಈಉಃU) ಕರೆ ಮೇರೆಗೆ ನಡೆದ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಕೆನರಾ ಬ್ಯಾಂಕ್ ಮುಖ್ಯ ಶಾಖೆಯ ಎದುರು ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳ ೫೦೦ಕ್ಕೂ ಅಧಿಕ ನೌಕರರು ಹಾಗೂ ಅಧಿಕಾರಿಗಳು ಪಾಲ್ಗೊಂಡರು.
ಪ್ರತಿಭಟನಾಕಾರರು ತಮ್ಮ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆಗಳನ್ನು ಕೂಗಿ, ಕೇಂದ್ರ ಸರ್ಕಾರದ ಏಕಪಕ್ಷೀಯ ಧೋರಣೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕ್ ನೌಕರರ ಮುಖಂಡ ಕಾಮ್ರೇಡ್ ಜಿ.ಜಿ. ಗಾಂಧಿ, ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆ ಜಾರಿಗೆ ಸಂಬAಧಿಸಿದAತೆ Iಃಂ ಮತ್ತು UಈಃU ನಡುವೆ ೨೦೨೪ರ ಮಾರ್ಚ್ ೮ರಂದು ನಡೆದ ಒಪ್ಪಂದದAತೆ ಕ್ರಮ ಕೈಗೊಳ್ಳಲು ಕೇಂದ್ರ ಹಣಕಾಸು ಸಚಿವಾಲಯ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸುವ ಬದಲು ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಅದರಲ್ಲೂ ಕೆಲವೇ ಮೇಲಧಿಕಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ PಐI ಯೋಜನೆ ಜಾರಿಗೊಳಿಸಲಾಗಿದ್ದು, ಎಲ್ಲ ವರ್ಗದ ನೌಕರರು ಹಾಗೂ ಅಧಿಕಾರಿಗಳಿಗೆ ಸಮಾನ ಅವಕಾಶ ಮತ್ತು ನ್ಯಾಯಯುತ ಪ್ರೋತ್ಸಾಹಧನ ದೊರೆಯಬೇಕು ಎಂದು ಅವರು ಆಗ್ರಹಿಸಿದರು.
‘ಒಪ್ಪಂದವಾಗಿದ್ದರೂ ಅನುಷ್ಠಾನ ಏಕೆ ವಿಳಂಬ?’ ಎಂಬ ಪ್ರಶ್ನೆಯನ್ನು ಮುಂದಿಟ್ಟ ಪ್ರತಿಭಟನಾಕಾರರು, ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆ ಜಾರಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಡಿಕೆ ಈಡೇರುವವರೆಗೂ ಹೋರಾಟ

ಐದು ದಿನಗಳ ಬ್ಯಾಂಕಿAಗ್ ವ್ಯವಸ್ಥೆ ಜಾರಿ, ಎಲ್ಲ ವರ್ಗದ ನೌಕರರು ಮತ್ತು ಅಧಿಕಾರಿಗಳಿಗೆ ಸಮಾನ ಹಾಗೂ ನ್ಯಾಯಸಮ್ಮತ PಐI, ಸರ್ಕಾರದ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆಗಳು ಈಡೇರುವವರೆಗೂ ಸಂಘಟಿತ ಹೋರಾಟ ಮುಂದುವರಿಯಲಿದೆ ಎಂದು ಮುಖಂಡರು ಎಚ್ಚರಿಸಿದರು.
ಕಾಮ್ರೇಡ್ ಅಶೋಕ್ ಕಟ್ಟಿಮನಿ, ರಾಹುಲ್ ಪೋಳ, ಸುನಿಲ್ ನಾಯಕ್, ಮುಕುಂದ ಜಳಕಿ, ಶ್ರೀಕಾಂತ್, ಕವಿತಾ ಜಾಧವ್, ಐಶ್ವರ್ಯ ವಡಾವಿ, ರಶ್ಮಿ ಕುಲಕರ್ಣಿ, ವೀಣಾ ಹೂಗಾರ್, ಸೌಮ್ಯ ಕೋರಿ ಹಾಗೂ ರೆಣುಕಾ ಕಟ್ಟಾನಿ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಮಾತನಾಡಿದರು.
ಸಾಗರ ಲೋಣಿ, ಸುಶೀಲ್ ಸಿಂಧೆ ಸೇರಿದಂತೆ ವಿವಿಧ ಬ್ಯಾಂಕ್ ಸಂಘಟನೆಗಳ ಮುಖಂಡರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಹಿರಿಯ ಬ್ಯಾಂಕ್ ಕಾರ್ಮಿಕ ಮುಖಂಡರಾದ ಅಶೋಕ್ ಉಪಾಧ್ಯಾಯ, ವಿಠ್ಠಲ ಕಾಳೆ, ಗಂಟೇಪಗೋಳ್, ಕಬಡಗಿ ಹಾಗೂ ಹೊಸೂರು ಅವರು ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳ ಒಗ್ಗಟ್ಟು ಪ್ರದರ್ಶಿಸಿದ ಪ್ರತಿಭಟನೆ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಸಂಘಟಿತ ಹೋರಾಟ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ನೀಡಿತು.
ಕೊನೆಯಲ್ಲಿ ಕಾಮ್ರೇಡ್ ರಾಹುಲ್ ಪೋಳ, ಅಶೋಕ್ ಕಟ್ಟಿಮನಿ ಹಾಗೂ ಶ್ರೀಕಾಂತ್ ವಂದನಾರ್ಪಣೆ ಸಲ್ಲಿಸಿದರು.