Home ಜಿಲ್ಲೆ ಕಲಬುರಗಿ ಬ್ಯಾಡ್ಮಿಟನ್ : ಪೊಲೀಸ್ ಇಲಾಖೆಗೆ ಪ್ರಥಮ ಸ್ಥಾನ

ಬ್ಯಾಡ್ಮಿಟನ್ : ಪೊಲೀಸ್ ಇಲಾಖೆಗೆ ಪ್ರಥಮ ಸ್ಥಾನ

ಸೇಡಂ, ಸೆ,21: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸ್ನೇಹ ಬಳಗದ ವತಿಯಿಂದ ಸೇಡಂನ ಒಳಾಂಗಣ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಿದ್ದ ಡಬಲ್ಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್‍ನಲ್ಲಿ ಡಿಎಸ್ಪಿ ಸಂಗಮನಾಥ ಹಿರೇಮಠ ಹಾಗೂ ಸಿಪಿಐ ಮಹಾದೇವ ದಿಡ್ಡಿಮನಿ ಅವರ ಜೋಡಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಳ್ಳುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.ಅದೇ ರೀತಿ ಫೈನಲ್ ಪಂದ್ಯದಲ್ಲಿ ಪರಾಭವಗೊಂಡ ಶರಣಬಸವ ಹಾಗೂ ಶ್ರೀನಿವಾಸ ಅವರು ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ಭೀಮನಗೌಡ ಹಾಗೂ ಬಾಲಕೃಷ್ಣ ಅವರ ತಂಡ ತೃತೀಯ ಬಹುಮಾನವನ್ನು ಪಡೆದುಕೊಂಡರು.ಪಂದ್ಯಾವಳಿಗೆ ಮುನ್ನ ಕೃಷಿಕ ಸಮಾಜದ ರಾಜ್ಯ ಸಮಿತಿ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ಪಾಟೀಲ್ ಉಡಗಿ ಅವರು ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.ಕ್ರೀಡಾಕೂಟದ ರೋಚಕ ಸಮಿಪೈನಲ್ :ಡಿಎಸ್ಪಿ ಸಂಗಮನಾಥ ಹಿರೇಮಠ ಹಾಗೂ ಸಿಪಿಐ ಮಹಾದೇವ ದಿಡ್ಡಿಮನಿ ರವರ ತಂಡ ಹಾಗೂ ಭೀಮನಗೌಡ ಹಾಗೂ ಬಾಲಕೃಷ್ಣ ರವರ ನಡುವೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಡಿಎಸ್ಪಿ ತಂಡ ಮೇಲುಗೈ ಸಾಧಿಸಿದ್ದು ಗಮನಸೆಳೆಯಿತು.ಪಂದ್ಯಾವಳಿಯಲ್ಲಿ ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಉತ್ಸಾಹದಿಂದ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆ ಪ್ರದರ್ಶಿಸಿದರು. ಒಟ್ಟು ಪಂದ್ಯಗಳು ಆರಂಭದಿಂದ ಅಂತ್ಯದವರೆಗೂ ರೋಚಕವಾಗಿ ನಡೆದವು.ಪ್ರಥಮ ಬಹುಮಾನ: 3,000 ನಗದು ಹಾಗೂ ಕಪ್,ದ್ವಿತೀಯ ಬಹುಮಾನ: 2,000 ನಗದು ಹಾಗೂ ಕಪ್, ತೃತೀಯ ಬಹುಮಾನ: 1,000 ನಗದು ಹಾಗೂ ಕಪ್ ನೀಡಿ ಗೌರವಿಸಲಾಯಿತು.ಪಂದ್ಯಾವಳಿಯ ವಿಶೇಷತೆ ಎಂದರೆ ವಿಜೇತರು ತಾವು ಪಡೆದ ಬಹುಮಾನ ಮೊತ್ತವನ್ನು ವೈಯಕ್ತಿಕವಾಗಿ ಬಳಸಿಕೊಳ್ಳದೆ ಸೇಡಂ ಒಳಾಂಗಣ ಕ್ರೀಡಾಂಗಣದ ನಿರ್ವಹಣೆಗೆ ನೀಡಿದರು.ವಿಜೇತರ ಈ ನಡೆ ಕ್ರೀಡಾಂಗಣದ ಅಭಿವೃದ್ಧಿ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಅವರ ಬದ್ಧತೆಯನ್ನು ತೋರಿಸಿತು. ಸರ್ಕಾರಿ ನೌಕರರಲ್ಲಿ ಕ್ರೀಡಾಸಕ್ತಿ ಬೆಳೆಸುವುದು,ಪರಸ್ಪರ ಸ್ನೇಹ, ಸೌಹಾರ್ದತೆ ಹಾಗೂ ಸಹೋದರತ್ವವನ್ನು ವೃದ್ಧಿಸುವ ಉದ್ದೇಶದಿಂದ ಸೇಡಂ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.ಕಾರ್ಯಕ್ರಮದಲ್ಲಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ದಿಡ್ಡಿಮನಿ, ತಾಲೂಕು ಪಂಚಾಯಿತಿ ಇಒ ಸೈಯದ್ ಪಟೇಲ್, ಬಿಇಒ ಮಾರುತಿ ಹುಜರಾತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಜೈಭೀಮ್ ಉಡಗಿ, ಜಗನ್ನಾಥ ಚಿಂತಪಳ್ಳಿ, ಆಶೋಕರಡ್ಡಿ ಚಿಲುಮೆ, ಉಮಾಪತಿರಾಜು, ಡಿಎಸ್ಪಿ ಉಮಾಕಾಂತ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಆಯೋಜಕರಾದ ಬಂಡೆಪ್ಪ, ರವಿರಾಜ ಅವಂಟಿ, ಶಿವಲಿಂಗಪ್ಪ ಹಾದಿಮನಿ, ಶರಣು ಕಾಳರ್, ಜಾಫರ್ ಅಲಿ, ನೀಲಪ್ಪ ತಂಬಾಕೆ, ಹಾಗೂ ಒಳಾಂಗಣ ಕ್ರೀಡಾಂಗಣದ ನಿರ್ವಹಣಾ ತಂಡದ ಮೋಹನಕುಮಾರ್, ಆದಿತ್ಯ ಮಳಗಿ, ಪ್ರಕಾಶ್, ಮಿರ್ಜಾ ಬೇಗ್, ಸಂತೋಷರೆಡ್ಡಿ, ಶಶಿ, ರಮೇಶ್ , ಭೀಮನಗೌಡ ಹಾಗೂ ಜೈಲರ್ ವೀರಪ್ಪ ನಾಯಕ ಇದ್ದರು.ದೇವರಾಜ ಕೋರಿ ನಿರೂಪಿಸಿದರು. ರವಿರಾಜ ಅವಂಟಿ ವಂದಿಸಿದರು.