Home ಜಿಲ್ಲೆ ಆಯುಷ್ ಆರೋಗ್ಯ ಶಿಬಿರ

ಆಯುಷ್ ಆರೋಗ್ಯ ಶಿಬಿರ

ಧಾರವಾಡ,ಜು.೩೦: ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಧಾರವಾಡ ಅವರ ಸಹಯೋಗದೊಂದಿಗೆ ೨೦೨೬-೨೭ ನೇ ಸಾಲಿನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಧಾರವಾಡ ಪೀಠ ಧಾರವಾಡದಲ್ಲಿ ವಿಶೇಷ ಉಚಿತ ಆಯುಷ್ ಆರೋಗ್ಯ ಶಿಬಿರ ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣೆ, ಚಿಕಿತ್ಸೆ, ಫಥ್ಯ, ಯೋಗಾಸನ ಮತ್ತು ಜೀವನ ಶೈಲಿ ಮಾಹಿತಿ ಶಿಬಿರವನ್ನು ಆಯುಷ್ ಇಲಾಖೆಯಿಂದ ಉಚ್ಚ ನ್ಯಾಯಾಲಯ ಧಾರವಾಡ ಪೀಠದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಹಾಗೂ ಜಿಲ್ಲಾಸ್ಪತ್ರೆ ಧಾರವಾಡ ಅವರ ಸಹಯೋಗದಲ್ಲಿ ಉಚಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.


ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರಾದ ಸುನೀಲ್ ದತ್ತ ಯಾದವ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ತಮ್ಮ ವೈಯಕ್ತಿಕ ಅನುಭವಗಳೊಂದಿಗೆ ಆರೋಗ್ಯವನ್ನು ಕಾಪಾಡಲು ಹಾಗೂ ದೈನಂದಿನ ಜೀವನದಲ್ಲಿ ಒತ್ತಡವನ್ನು ನಿರ್ವಹಿಸುವಲ್ಲಿ ಆಯುಷ್ ಪದ್ಧತಿಗಳು ಬೀರಿರುವ ಸಕಾರತ್ಮಕ ಪರಿಣಾಮಗಳನ್ನು ಹಂಚಿಕೊAಡರು. ಎಲ್ಲರೂ ದಿನನಿತ್ಯ ಸೇವಿಸುವ ಆಹಾರದಲ್ಲಿ ಆಯುರ್ವೇದ ಪದ್ಧತಿಯನ್ನು ಒಳಗೊಂಡು ಸಂಪೂರ್ಣ ಸಮತೋಲಿತ ಆಹಾರ ಪದ್ಧತಿ, ಜೀವನ ಶೈಲಿ, ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳನ್ನು ಪಾಲಿಸುವ ಮೂಲಕ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಹೊಂದಬಹುದು ಎಂದು ಹೇಳಿದರು.


ಆಯುಷ್ ಪಂಚಕರ್ಮ ವಿಭಾಗದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಸಂತೋಷ ತಾಡಪತ್ರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶೇಷ ಆರೋಗ್ಯ ಶಿಬಿರದ ಉದ್ದೇಶ ಹಾಗೂ ಉಪಯೋಗ ಮತ್ತು ಉಚಿತ ಆರೋಗ್ಯ ತಪಾಸಣೆಯಲ್ಲಿ ಔಷಧಿ ವಿತರಣೆ ಮಾಡಲಾಗುವುದೆಂದು ತಿಳಿಸಿ ದಿನನಿತ್ಯ ಒತ್ತಡದಿಂದ ಆಗುವ ಆರೋಗ್ಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು.
ಪ್ರಕೃತಿ ಚಿಕಿತ್ಸಾ ವೈದ್ಯಾಧಿಕಾರಿಗಳಾದ ಡಾ. ಶಶಿಧರ ತಳಕಲ್ ಅವರು ಙ-ಃಡಿeಚಿಞ ಙogಚಿ ಮೊಬೈಲ್ ಆಪ್ ಮೂಲಕ ಶಿಬಿರದ ಫಲಾನುಭವಿಗಳಿಗೆ ಸುಲಭ ಯೋಗ ಆಸನಗಳ ಉಪಯುಕ್ತತೆಯನ್ನು ಪ್ರಾತ್ಯೆಕ್ಷಿಕೆ ಮೂಲಕ ತೋರಿಸಿ ಕೊಟ್ಟರು.


ವೇದಿಕೆಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಾದ ಜ||ಕೆ. ಜಿ. ಶಾಂತಿ ಮತ್ತು ಜ||ರಾಜೇಶ್ವರಿ ಹೆಗಡೆ ಅವರು ಹೆಚ್ಚುವರಿ ಅಡ್ವೋಕೇಟ್ ಜನರಲ್‌ರಾದ ಗಂಗಾಧರ ಜೆ. ಎಮ್, ಅಧಿಕ ವಿಲೇಖನಾಧಿಕಾರಿಗಳಾದ ಸುಧ್ರೀಂದ್ರನಾಥ, ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಗಣೇಶ ಕಬಾಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ಸಂಗಪ್ಪ ಗಾಬಿ, ಪ್ರಭಾರಿ ಸ್ಥಾನಿಕ ವೈದ್ಯಾಧಿಕಾರಿಗಳಾದ ಮಮತಾ ಪಾಟೀಲ ಅವರು ಇದ್ದರು.


ಕಾರ್ಯಕ್ರಮದಲ್ಲಿ ಡೆಪ್ಯೂಟಿ ಜನರಲ್ ಗುರುರಾಜ, ನೀಲಪ್ಪ ಬೋವರ್, ಶಶಿಕುಮಾರ ಮತ್ತು ಧಾರವಾಡ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಅನುರಾಧಾ ಬಲ್ಸಾವರ್ ಡಾ. ಸವಿತಾ ಹುಣಶಿಮರದ, ಡಾ. ಸಂತೋಷ ತಾಡಪತ್ರಿ, ಡಾ. ಶಶಿಧರ ತಳಕಲ್ ಡಾ. ಈಶ್ವರಪ್ಪ ಉಗಾರ ಉಪಸ್ಥಿತರಿದ್ದರು.


ಶೇಖನಗೌಡ ಪಾಟೀಲ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ಜರುಗಿದ ಆರೋಗ್ಯ ಶಿಬಿರದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಅನುರಾಧಾ ಬಲ್ಸಾವರ್, ಡಾ. ಸವಿತಾ ಹುಣಶಿಮರದ, ಡಾ. ಸಂತೋಷ ತಾಡಪತ್ರಿ ಹಾಗೂ ಡಾ. ಈಶ್ವರಪ್ಪ ಉಗಾರ ರವರು ಶಿಬಿರಾರ್ಥಿಗಳ ಆರೋಗ್ಯ ಕೈಗೊಂಡು. ಸೂಕ್ತ ಔಷಧಿ, ಫಥ್ಯ ಹಾಗೂ ಆರೋಗ್ಯ ಸಲಹೆಗಳನ್ನು ನೀಡಿದರು. ಶ್ರೀಶೈಲಕುಮಾರ ಚವ್ಹಾಣ ಪಾರ್ಮಸಿ ಅಧಿಕಾರಿಗಳು ಔಷಧಿಗಳನ್ನು ವಿತರಿಸಿದರು.
ಆಯುಷ್ ಇಲಾಖೆಯ ಪ್ರಭಾರಿ ಸಹಾಯಕ ಆಡಳಿತಾಧಿಕಾರಿಗಳಾದ ವೀರಣ್ಣ ನಡುವಿನಮನಿ ಸೇರಿದಂತೆ ಆನಂದ ಹಟ್ಟೇನ್ನವರ, ಮಹಾಲಕ್ಷ್ಮೀ ನಾಯ್ಕ, ಗೀತಾ ಹೊಸಮಠ ಹನುಮಂತ ಕುರಬೆಟ್ಟ ಮತ್ತು ಆಯುಷ್ ಇಲಾಖೆಯ ಸರ್ವ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಶಿಬಿರದಲ್ಲಿ ೨೫೬ ಜನ ಫಲಾನುಭವಿಗಳು ಆಯುಷ್ ಆರೋಗ್ಯ ಸೇವೆಯನ್ನು ಪಡೆದುಕೊಂಡರು. ಎಲ್ಲಾ ಶಿಬಿರಾರ್ಥಿಗಳಿಗೆ ಉತ್ತಮ ಗುಣ ಮಟ್ಟದ ಆಯುರ್ವೇದ ಔಷಧಿಗಳನ್ನು ಮತ್ತು ಆಯುಷ್ ಅರಿವು ಕರಪತ್ರ ಮತ್ತು ಕೈಪಿಡಿಗಳನ್ನು ಉಚಿತವಾಗಿ ವಿತರಿಸಲಾಯಿತು.