Home ಜಿಲ್ಲೆ ಪ್ರಶಸ್ತಿ ಪ್ರದಾನ ಸಂಭ್ರಮ

ಪ್ರಶಸ್ತಿ ಪ್ರದಾನ ಸಂಭ್ರಮ


ಮುನವಳ್ಳಿ,ಸೆ.೭: ಪಟ್ಟಣದ ಶ್ರೀ ಅನ್ನದಾನೇಶ್ವರ ಕಾಲೇಜಿನ ಆವರಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಗುರು ಕಾರುಣ್ಯ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಶನಿವಾರ ಜರುಗಿತು.
ಎಮ್.ಎಲ್.ಇ.ಎಸ್. ಆಂಗ್ಲ ಮಾಧ್ಯಮ ಸಂಸ್ಥೆಯ ಚೇರ್ಮನ ಉಮೇಶ ಬಾಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಆದುನಿಕ ಯುಗದಲ್ಲಿ ಮೌಲ್ಯಯುತ ಶಿಕ್ಷಣದ ಅಗತ್ಯ ಇದೆ ವಿದ್ಯಾರ್ಥಿಗಳಲ್ಲಿ ಜ್ಞಾನದ ಜತೆಗೆ ಸಂಸ್ಕಾರ, ಶಿಸ್ತು, ಮುಖ್ಯವಾಗಿದೆ ಪ್ರತಿ ವಿದ್ಯಾರ್ಥಿ ಗುರುಗಳನ್ನು ಗೌರವಿಸಬೇಕು ಎಂದರು.


ಶ್ರೀ ಸೋಮಶೇಖರಮಠದ ಶ್ರೀ ಮುರುಘೇಂದ್ರ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ ಹರ ಮುನಿದರೂ ಗುರು ನಮ್ಮನ್ನು ಕಾಯುತ್ತಾನೆ ಬದುಕಿನಲ್ಲಿ ಸನ್ಮಾರ್ಗ ತೋರಿಉಸುವ ಶಿಕ್ಷಕರ ವೃತ್ತಿ ಪವಿತ್ರವಾದುದು ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿಗಳು ಎಂದರು.


ಆರ್.ಎಚ್.ಪಾಟೀಲ, ಬಿ.ಎಂ.ಅಪ್ಪೋಜಿ, ವಿ.ಎಸ್.ನರಗುಂದ ಕೆ.ಬಿ.ನಲವಡೆ, ಎಮ್.ಎಸ್.ಹೊಂಗಲ, ಐ.ಪಿ.ಕಿತ್ತೂರ, ಎಫ್.ವೈ.ಮುಶೆನ್ನವರ ಈ ಶಿಕ್ಷಕರಿಗೆ ಗುರು ಕಾರುಣ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದರು.
ಅರುಣ ಪಾಟೀಲ, ಈರಣ್ಣ ಸಂಕಣ್ಣವರ, ಮಂಜುನಾಥ ಭಂಡಾರಿ, ಶಂಕರ ಗಯ್ಯಾಳಿ, ಗಂಗಾಧರ ಗೊರಾಬಾಳ, ಎಮ್.ಬಿ.ಅಷ್ಟಗಿಮಠ, ಪ್ರಾಚಾರ್ಯರಾದ ಎಮ್.ಎಚ್.ಪಾಟೀಲ, ಐ.ಕೆ.ಮಠಪತಿ, ಎಮ್.ಗಿರೀಶ, ಪರಶುರಾಮ ಕದಂ, ಶೇಖರ ಮುಪ್ಪಿನವರಮಠ, ದಾನು ಗದಗಿನ, ವಿಧ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಗಾಯತ್ರಿ ಹಿರೆಮಠ ಸ್ವಾಗತಿಸಿದರು, ಬಿ.ಬಿ.ಹೂಲಿಗೊಪ್ಪ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.