Home ಜಿಲ್ಲೆ ದಲಿತರ ಮೇಲಿನ ದೌರ್ಜನ್ಯ: ರಾಜ್ಯಮಟ್ಟದ ತನಿಖೆಗೆ ಆಗ್ರಹ

ದಲಿತರ ಮೇಲಿನ ದೌರ್ಜನ್ಯ: ರಾಜ್ಯಮಟ್ಟದ ತನಿಖೆಗೆ ಆಗ್ರಹ

ಬೀದರ್: ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು, ಪ್ರಕರಣಗಳ ದಾಖಲಾತಿ, ತನಿಖೆ, ಸಂತ್ರಸ್ತರಿಗೆ ರಕ್ಷಣೆ ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಲ್ಲಿ ಪೆÇಲೀಸ್ ಮತ್ತು ಆಡಳಿತ ವ್ಯವಸ್ಥೆ ವಿಫಲವಾಗಿದೆ ಎಂದು ಆರೋಪಿಸಿರುವ ದಲಿತ ಸಂಘಟನೆಗಳ ಒಕ್ಕೂಟ, ಕಳೆದ ಐದು ವರ್ಷಗಳ ಪ್ರಮುಖ ಪ್ರಕರಣಗಳ ಕುರಿತು ರಾಜ್ಯಮಟ್ಟದ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಇಂದು ನಗರದ ಬುದ್ಧ ಭವನದಿಂದ ಪ್ರತಿಭಟನೆ ಪ್ರಾರಂಭಿಸಿ ಬಸವೇಶ್ವರ್ ವೃತ್ತ, ಭಗತಸಿಂಗ ವೃತ್ತ, ಶಿವಾಜಿ ವೃತ್ತದಿಂದ ಅಂಬೆಡ್ಕರ್ ವೃತ್ತದಲ್ಲಿ ಮನವಿ ಸಲ್ಲಿಸಿದ್ದರು.

ಮುಖ್ಯಮಂತ್ರಿಗಳೆಗೆ ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಿರುವ ಮನವಿಯಲ್ಲಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಜನರ ಮೇಲಿನ ಹಲ್ಲೆ, ಜಾತಿ ನಿಂದನೆ, ಕೊಲೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭೂಮಿ ಹಕ್ಕುಗಳ ಸಮಸ್ಯೆ ಹಾಗೂ ನ್ಯಾಯಕ್ಕಾಗಿ ಹೋರಾಡುವ ದಲಿತ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಲಾಗಿದೆ.

ಭಾಲ್ಕಿ ತಾಲ್ಲೂಕಿನ ಜಿಗ್ರ್ಯಾಳ ಗ್ರಾಮದಲ್ಲಿ ಆ.13ರಂದು ರಾಜಕುಮಾರ್ ಶಿಂಧೆ ಹತ್ಯೆ, ಕಮಲನಗರ ತಾಲ್ಲೂಕಿನ ಬೆಳಕುಣಿ (ಭೋ) ಗ್ರಾಮದಲ್ಲಿ 16 ವರ್ಷದ ದಲಿತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ, ಹುಮನಾಬಾದ್‍ನಲ್ಲಿ ದಲಿತ ವಿದ್ಯಾರ್ಥಿ ಮೇಲಿನ ಹಲ್ಲೆ, ಮಳಚಾಪುರದಲ್ಲಿ ಸಂವಿಧಾನ ಜಾಗೃತಿ ಜಾಥಾಕ್ಕೆ ಅಡ್ಡಿಪಡಿಸಿ ಕಲ್ಲುತೂರಾಟ, ವಿಲಾಸಪುರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ, ತಳವಾಡದಲ್ಲಿ ಜಾತಿ ನಿಂದನೆ, ಚಳಕಾಪುರದಲ್ಲಿ ದಲಿತ ಕಾಲೋನಿಗೆ ನುಗ್ಗಿ ಹಲ್ಲೆ, ರಾಚಪ್ಪಗೌಡಗಾಂವ್‍ನಲ್ಲಿ ದಲಿತ ವೃದ್ಧೆ ಮೇಲಿನ ಹಲ್ಲೆ ಹಾಗೂ ಔರಾದ ತಾಲ್ಲೂಕಿನ ರಕ್ಷ್ಯಾಳ (ಕೆ) ಗ್ರಾಮದಲ್ಲಿ ಸುಮಿತ್ ಕುಮಾರ್ ಮೇಲಿನ ಹಲ್ಲೆ ಮತ್ತು ನಂತರದ ಸಾವು ಸೇರಿದಂತೆ ಹಲವು ಪ್ರಕರಣಗಳನ್ನು ಮರುಪರಿಶೀಲಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.

ಏ.21, 2025ರಂದು ಬೀದರ್‍ನಲ್ಲಿ ಪತ್ರಕರ್ತ ಅವರ ಮೇಲೆ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಯಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಿರುವ ಸಂಘಟನೆ, ಪ್ರಕರಣದಲ್ಲಿ ಎಸ್‍ಸಿ/ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿದ್ದ ಪ್ರಕರಣವನ್ನು ನಂತರ ತೆಗೆದುಹಾಕಿ, ರವಿ ಭೂಸಂಡೆ ಅವರ ವಿರುದ್ಧವೇ ಪ್ರತಿದೂರು ದಾಖಲಿಸಿರುವುದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ.

ಏ.29, 2025ರಂದು ಖುದಾವಂದಾಪುರದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ ಮತ್ತು ಹಲ್ಲೆ ನಡೆದಿದ್ದು, ಈ ಪ್ರಕರಣದಲ್ಲಿ ದಲಿತರ ಮೇಲೆಯೇ ಪ್ರತಿದೂರು ದಾಖಲಿಸಿರುವುದನ್ನು ಪರಿಶೀಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇದೇ ರೀತಿ ಬೆಳಕುಣಿ ಪ್ರಕರಣದಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತಿದ ಕಾರ್ಯಕರ್ತರ ಮೇಲಿರುವ ಪ್ರಕರಣಗಳನ್ನೂ ಮರುಪರಿಶೀಲಿಸಿ, ಸುಳ್ಳು ಪ್ರಕರಣಗಳಿದ್ದರೆ ಕಾನೂನುಬದ್ಧವಾಗಿ ಹಿಂಪಡೆಯಬೇಕು ಎಂದು ಒತ್ತಾಯಿಸಲಾಗಿದೆ.

2015ರಲ್ಲಿ ಭಾಲ್ಕಿ ಪಟ್ಟಣದ ಕೆರೆಯಲ್ಲಿದ್ದ ಬುದ್ಧನ ಮೂರ್ತಿ ತೆರವುಗೊಳಿಸಿದ ಘಟನೆ ಹಾಗೂ ಪ್ರತಿಭಟನೆ ನಡೆಸಿದ ಹೋರಾಟಗಾರರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದೂ ಮನವಿಯಲ್ಲಿ ಆಗ್ರಹಿಸಲಾಗಿದೆ. 2025ರ ಜ.16ರಂದು ಬೀದರ್‍ನ SಃI ಂಖಿಒ ಸಮೀಪ ನಡೆದ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಗಳ ಬಂಧನದ ಬಳಿಕ ಮೃತಪಟ್ಟ SಃI ಂಖಿಒ ಸಿಬ್ಬಂದಿಯ ಘಟನಾ ಸ್ಥಳದಲ್ಲಿ ಪೆÇಲೀಸರು ಸಂಭ್ರಮಾಚರಣೆ ನಡೆಸಿದ್ದಾರೆಂಬ ಆರೋಪದ ಕುರಿತು ಸ್ವತಂತ್ರ ಪರಿಶೀಲನೆ ನಡೆಸಬೇಕು ಎಂದು ಸಂಘಟನೆ ತಿಳಿಸಿದೆ.

ಆಉP & IಉP ನೇತೃತ್ವದಲ್ಲಿ ರಾಜ್ಯಮಟ್ಟದ ತನಿಖಾ ಸಮಿತಿ ರಚಿಸಿ, ಕಳೆದ ಐದು ವರ್ಷಗಳ ಪ್ರಮುಖ ಎಸ್‍ಸಿ/ಎಸ್‍ಟಿ ದೌರ್ಜನ್ಯ ಪ್ರಕರಣಗಳು, ಕೊಲೆ, ಹಲ್ಲೆ, ಜಾತಿ ನಿಂದನೆ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಭೂಮಿ ವಿವಾದಗಳು ಹಾಗೂ ಮೂಲ ಪ್ರಕರಣಗಳ ಜೊತೆಗೆ ದಾಖಲಾಗಿರುವ ಪ್ರತಿಪ್ರಕರಣಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರಸ್ತುತ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ (SP) ಅವರ ಕಾರ್ಯವೈಖರಿ, ಸಂಬಂಧಪಟ್ಟ PSI, ಅPI ಹಾಗೂ ಭಾಲ್ಕಿ ಪೆÇಲೀಸ್ ವೃತ್ತದ ಅಧಿಕಾರಿಗಳ ಕರ್ತವ್ಯಲೋಪದ ಬಗ್ಗೆಯೂ ತನಿಖೆ ನಡೆಸಬೇಕು. ತನಿಖೆಯಲ್ಲಿ ಕರ್ತವ್ಯಲೋಪ ಸಾಬೀತಾದರೆ ಅಮಾನತು ಸೇರಿದಂತೆ ಇಲಾಖಾ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ. ಸಂತ್ರಸ್ತರು ಮತ್ತು ಸಾಕ್ಷಿಗಳಿಗೆ ವಿಶೇಷ ರಕ್ಷಣೆ, ದೌರ್ಜನ್ಯ ಪೀಡಿತ ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮ ಹಾಗೂ ಸರ್ಕಾರ ಕೈಗೊಂಡ ಕ್ರಮಗಳ ಕುರಿತು 30 ದಿನಗಳೊಳಗೆ ಲಿಖಿತ ಂಛಿಣioಟಿ ಖಿಚಿಞeಟಿ ಖeಠಿoಡಿಣ ನೀಡಬೇಕು ಎಂದು ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ರಾಜಕುಮಾರ ಮೂಲಭಾರತಿ, ಕಪಿಲ ಗೊಡಬೋಲೆ, ವಿನೋದ ರತ್ನಾಕರ್, ರವಿಕುಮಾರ ವಾಘಮಾರೆ, ಗೌತಮ ಚವ್ಹಾಣ, ಪ್ರದೀಪ ಭಾವಿಕಟ್ಟಿ, ರಾಜಕುಮಾರ ಸಿಂಧೆ, ಜ್ಞಾನೇಶ್ವರ ಸಿಂಗಾರೆ, ರಾಹುಲ ಖಂದಾರೆ, ರಾಹುಲ ದಲಾಲೆ, ಅಂಬಾದಾಸ ಚಕ್ರವರ್ತಿ, ಶಕ್ತಿಕಾಂತ ಭಾವಿದೊಡ್ಡಿ, ಮಹೇಶ ಭೋಲಾ, ರವಿ ಭೂಸಂಡೆ, ರಾಜಕುಮಾರ ಗುನಳ್ಳಿ, ಪ್ರದೀಪ ಹೆಗಡೆ, ಅಂಬರೀಶ ಕುದರೆ, ಮಾರುತಿ ಸೂರ್ಯವಂಶಿ, ಅಭಿ ಕಾಳೆ, ಸಂತೋಷ ಎಣಕೂರ, ಪ್ರಕಾಶ ಹಳ್ಳಿಖೇಡ, ಮಲ್ಲಿಕಾರ್ಜುನ ಕೌಠಾ, ಹರ್ಷಿತ ದಾಂಡೇಕರ್ ಹಾಗೂ ಜಗನ್ನಾಥ ಹೊನ್ನಾ, ತಾಲೂಕು ಘಟಕಗಳ ಪರವಾಗಿ ವಿಲಾಸ ಎ. ಮೋರೆ (ಭಾಲ್ಕಿ), ಪ್ರವೀಣ ಕರಂಜೆ (ಔರಾದ), ವೈಜಿನಾಥ ಸಿಂಧೆ (ಹುಮನಾಬಾದ್), ಪ್ರಕಾಶ ರಾವಣ (ಬೀದರ್ ಉತ್ತರ), ದಿಲೀಪ ವರ್ಮಾ (ಬೀದರ್ ದಕ್ಷಿಣ) ಹಾಗೂ ಗೌತಮ ಕಾಂಬಳೆ (ಬಸವಕಲ್ಯಾಣ), ಮುಖಂಡರಾದ ಗೌತಮ ಬಗದಲ್, ಅಂಬಾದಾಸ ಸೋನಿ, ಸ್ವಾಮಿದಾಸ ಕೆಂಪೇನೋರ್, ರಜನೀಶ ಮದಾಳೆ, ಸಿದ್ಧಾರ್ಥ ಬಾನೆ, ಬಸವರಾಜ ಮೇತ್ರೆ, ಗೌತಮ ಡಾಕುಳಗಿ ಹಾಗೂ ಅಜಯ ದೀನೆ ಸೇರಿದಂತೆ ಸಂಘಟನೆಯ ಮುಖಂಡರು, ಮಹಿಳೆಯರು ಇದ್ದರು.