
ಕಲಬುರಗಿ: ಕಲಾವಿದರಿಗೆ ಕಲೆಯೇ ಸಂಪತ್ತು. ಕಲೆ ಮತ್ತು ಸಂಸ್ಕøತಿಗಳು ದೇಶದ ಸಂಪತ್ತಾಗಿದ್ದು, ಕಲಾವಿದರು ದೇಶದ ಸಾಂಸ್ಕøತಿಕ ರಾಯಭಾರಿಗಳು ಎಂದು ಹಿರಿಯ ಚಿತ್ರಕಲಾವಿದೆ ಮತ್ತು ಕೃತಿಕಾ ಸಾಂಸ್ಕøತಿಕ ಸಂಸ್ಥೆ ಕಾರ್ಯದರ್ಶಿ ಶ್ರೀಮತಿ. ಮಂಜುಳಾ ಬಿ. ಜಾನೆ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನಸಹಾಯದಲ್ಲಿ ವಿಜಯನಗರ ಕಾಲೋನಿಯಲ್ಲಿರುವ ಅನುಚಂದ್ರ ಆರ್ಟ್ ಸ್ಟೋಡಿಯೋದಲ್ಲಿ ಆಯೋಜಿಸಿದ ಶ್ರೀಮತಿ. ನೀಲಾಂಬಿಕಾ ಹಿರೇಮಠ ಇವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಹಿಂದಿನ ಕಾಲದಲ್ಲಿ ಮಹಿಳೆ ಕೇವಲ ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತಳಾಗಿದ್ದಳು. ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಚಿತ್ರಕಲಾ ಕ್ಷೇತ್ರ ಸೇರಿದಂತೆ ವೃತ್ತಿಯೊಂದಿಗೆ ಅನೇಕ ಸಾಂಸ್ಕøತಿಕ ಕ್ಷೇತ್ರಗಳಲ್ಲಿ ಅಗಾಧ ಸಾಧನೆ ಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಚಿತ್ರಕಲಾವಿದ ಬಿ.ಎನ್. ಪಾಟೀಲ ಮುಖ್ಯ ಅತಿಥಿಯಾಗಿ ಮಾತನಾಡಿ ಕಲೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತದೆ. ಆದರೆ, ಕಲಾ ಕ್ಷೇತ್ರ ಮಾತ್ರ ಕೆಲವನ್ನೂ ಮಾತ್ರ ಆರಿಸಿಕೊಳ್ಳುತ್ತದೆ. ಅದರಂತೆ ಶ್ರೀಮತಿ ನೀಲಾಂಬಿಕ ಅವರ ಕಲಾಕೃತಿಗಳಲ್ಲಿ ರೇಖೆ, ಬಣ್ಣ, ಮೈವಳಿಕೆಗಳ ಸಮತೋಲನವಿದೆ. ಕಲ್ಯಾಣ ಕರ್ನಾಟಕ ಬಾಗದ ಮಹಿಳಾ ಕಲಾವಿದೆಯರು ರಾಜ್ಯದ ಗಡಿ ದಾಟಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿ ಯಶಸ್ವಿಯಾಗಲೆಂದು ಆಶಸಿದರು.
ಕಡಗಂಚಿ ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ವಿನಯಕುಮಾರ್ ರುದ್ರಸ್ವಾಮಿಮಠ ಮಾತನಾಡಿ ಚಿತ್ರಕಲಾ ಕ್ಷೇತ್ರಕ್ಕೆ ಮಹಿಳಾ ಕಲಾವಿದರ ಕೊಡುಗೆ ಅಪಾರವಾಗಿದೆ. ಶ್ರೇಷ್ಠ ಕಲಾವಿದೆಯರಾದ ಅಮೃತ ಶೇರ-ಗಿಲ್, ನಳಿನಿ ಮಳಿನಿ, ಅನುಪಮ ಸೂದ್, ಪುಷ್ಪಮಾಲಾ. ಎನ್ ಸೇರಿದಂತೆ ಇನ್ನು ಅನೇಕರು ಭಾರತೀಯ ಚಿತ್ರಕಲಾ ಲೋಕಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಶ್ರೀಮತಿ ನೀಲಾಂಬಿಕಾ ಅವರ ವರ್ಣ ಚಿತ್ರಗಳಲ್ಲಿ ಆಧುನಿಕತೆಯ ಸ್ಪರ್ಶದ ಜೊತೆಗೆ ರೇಖಾಚಿತ್ರಗಳಲ್ಲಿ ಶೈಕ್ಷಣಿಕ ಕಲಿಕಾ ಶೈಲಿಯನ್ನು ಕಾಣಬಹುದು ಎಂದರು.
ಅನುಚಂದ್ರ ಆರ್ಟ ಸ್ಟುಡಿಯೋ ಮುಖ್ಯಸ್ಥ ಚಂದ್ರಹಾಸ ಜಾಲಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಸವರಾಜ ಜಾನೆ, ನಿಂಗಣ್ಣ ಕೇರಿ, ದಾನಯ್ಯ ಚೌಕಿಮಠ, ಡಾ. ಪರಶುರಾಮ, ಡಾ. ಕೆ. ಎಂ. ಕುಮಾರಸ್ವಾಮಿ, ಮಹೇಶ್ ಎಂ, ಮಲ್ಲಿಕಾರ್ಜುನ ಕೋರಳ್ಳಿ, ಸಂಗಮೇಶ್ ಚಿಲಶೆಟ್ಟಿ, ಕಾವ್ಯ ಗಡ್ಡಿ, ಸೂರ್ಯಕಾಂತ್ ನಂದೂರ, ಶಶಿಕಾಂತ್ ಪಾಟೀಲ್ ಸೇರದಂತೆ ಮುಂತಾದವರಿದ್ದರು. ಕು. ಲಕ್ಷ್ಮಿ ಬೇರೂರು ಪ್ರಾರ್ಥನೆ ಗೀತೆ ಹಾಡಿದರು. ಶ್ರೀಮತಿ ಕವಿತಾ ಕಟ್ಟೆ ಸ್ವಾಗತಿಸಿದರು. ಶ್ರೀಮತಿ ನೀಲಾಂನಿಕಾ ವಂದಿಸಿದರು. ಮಲ್ಲಿಕಾರ್ಜುನ ಮುಗಳಿ ಕಾರ್ಯಕ್ರಮ ನಿರ್ವಹಿಸಿದರು.
ಭಾರತದಲ್ಲಿ 46% ಪ್ರಮಾಣದಷ್ಟು ಮಹಿಳಾ ಕಲಾವಿದೆಯರಿದ್ದು, ಶಿಲ್ಪಕಲೆ, ಪ್ರತಿಷ್ಠಾಪನ ಕಲೆ, ಚಿತ್ರಕಲೆ, ಗ್ರಾಫಿಕ್ ಒಳಗೊಂಡಂತೆ ಇನ್ನಿತರ ಹೊಸ ಮಾಧ್ಯಮಗಳಲ್ಲಿ ಶ್ರೇಷ್ಠವಾದ ಕಲಾಕೃತಿಗಳ ರಚನೆಯಲ್ಲಿ ತೊಡಗಿಸಿಕೊಂಡಿರುವುದು ಆರ್ಟ ಇಂಡಿಯನ್ ಸರ್ವೆಯಿಂದ ತಿಳಿದು ಬಂದಿದೆ. ಕರ್ನಾಟಕ ರಾಜ್ಯದಲ್ಲಿ ಶೇ. 35% ರಷ್ಟು ಮಹಿಳಾ ಕಲಾವಿದರು ಕಲಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಮಹಿಳೆಯರು ಕಲಾ ಕ್ಷೇತ್ರದ ಬಗ್ಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರದರ್ಶನಗಳಲ್ಲಿ ತಮ್ಮ ಕಲೆಗಳನ್ನು ಪ್ರದರ್ಶನ ಮಾಡಲು ಪ್ರೋತ್ಸಾಹ ಅಗತ್ಯವಿದೆ.
- ವಿನಯಕುಮಾರ್ ರುದ್ರಸ್ವಾಮಿಮಠ
ಸಹಾಯಕ ಪ್ರಾಧ್ಯಾಪಕ
ಸಂಗೀತ ಮತ್ತು ಲಲಿತಕಲಾ ವಿಭಾಗ
ಕೇಂದ್ರಿಯ ವಿಶ್ವವಿದ್ಯಾಲಯ






























