
ಕನಕಪುರ.ಸೆ.೧೦ – ತಾಲೂಕಿನ ಬೂದಿಗುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಮಲ್ಲಾರಾಧ್ಯ ಅಧ್ಯಕ್ಷತೆಯಲ್ಲಿ ನಡೆಯಿತು.
೨೦೨೫-೨೬ನೇ ಸಾಲಿನಲ್ಲಿ ಸಂಘದ ವಾರ್ಷಿಕ ವಹಿವಾಟು ೬೭೬೯೩೯ರೂಗಳ ನಿವ್ವಳ ಲಾಭವನ್ನು ಸಂಘವು ಗಳಿಸಿದೆ ಎಂದು ವಿಸ್ತರಣಾಧಿಕಾರಿ ಬಿ ನೇತ್ರಾವತಿ ಸಭೆಗೆ ವಾರ್ಷಿಕ ವರದಿಯನ್ನು ಓದಿ ತಿಳಿಸಿದರು.
ಪ್ರಸ್ತುತ ಸಾಲಿನಲ್ಲಿ ಸಂಘವು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡಿ ೧೩೫೭೦೪೩ ರೂಗಳ ವ್ಯಾಪಾರ ಲಾಭವನ್ನು ಗಳಿಸಿದೆ ಹಾಗೆಯೇ ಪಶು ಆಹಾರ ಲಾಭವಾಗಿ ೧೫೦೫೦ಗಳು ಬಂದಿದೆ ಎಂದು ತಿಳಿಸಿದರು.
ಯುನಿಯನ್ಬ್ಯಾಂಕ್ನ, ಎಸ್.ಬಿ ಖಾತೆ ಇಟ್ಟಿರುವ ಠೇವಣಿ ಮೇಲಿನ ಬಡ್ಡಿಯಾಗಿ ೪೯೦೨೬ ರೂಗಳು ಬಂದಿದ್ದು ಡಿಸಿಸಿ ಬ್ಯಾಂಕ್ಎಸ್. ಬಿ. ಖಾತೆಯ ಮೇಲಿನ ಬಡ್ಡಿಯಾಗಿ ೨೫೨ ರೂಪಾಯಿ ಬಂದಿದೆ.
ಒಕ್ಕೂಟದಲ್ಲಿ ಠೇವಣಿ ಮೇಲಿನ ಬಡ್ಡಿ ೪೫೫ ರೂಪಾಯಿ,ಒಕ್ಕೂಟದ ಷೇರು ಡಿವಿಡೆಂಡ್ನಿಗಮದ ೨೮೧೨ ರೂಪಾಯಿಗಳು, ಸ್ಯಾಪಲ್ಹಾಲು ಬೋನಸ್೪೩೩೫, ಇತರೆ ೧೮೨ ರೂಪಾಯಿಗಳು ಆದಾಯವು ಸಂಘಕ್ಕೆ ಪ್ರಸಕ್ತ ಸಾಲಿನಲ್ಲಿ ಬಂದಿದೆ ಎಂದು ಸಭೆಯ ಗಮನಕ್ಕೆ ತಂದರು.
ಇದೇ ಸಂದರ್ಭದಲ್ಲಿ ಕೆಲವು ಹಾಲು ಉತ್ಪಾದಕರು ಸಂಘದ ಕಾರ್ಯದರ್ಶಿ ನೇಮಕಕ್ಕೆ ಸಂಬಂದಿಸಿದಂತೆ ಇಲ್ಲಿಯವರೆಗೆ ಯಾವುದೇ ನಿರ್ಧಾರ ಬಾರದಿರುವ ಬಗ್ಗೆ ಚರ್ಚಿಸಿದರು. ಇನ್ನೂ ಕೆಲವರು ಹಾಲಿ ಕಾರ್ಯ ನಿರ್ವಾಹಿಸುತ್ತಿರುವ ಕಾರ್ಯನಿರ್ವಾಹಕರು ಸಮರ್ಪಕವಾಗಿ ಕಾರ್ಯನಿರ್ವಾಹಿಸುತ್ತಿರುವುದರಿಂದ ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಕಾರ್ಯನಿರ್ವಾಹಕರಾಗಿ ಕೆಲಸ ಮಾಡುತ್ತಿರುವ ರಂಗಸ್ವಾಮಿಯು ಕಳೆದ ಹಲವು ವರ್ಷಗಳಿಂದ ನಾನು ಕಾರ್ಯನಿರ್ವಹಿಸುತಿದ್ದು ಮುಂದಿನ ದಿನಗಳಲ್ಲಿ ನಾನು ಮುಂದುವರೆಯಲು ಎಲ್ಲಾ ಹಾಲು ಉತ್ಪಾದಕರು ಸಹಕಾರ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ನಾಗರಾಜು, ನಿರ್ದೇಶಕರುಗಳಾದ ಬಿಎಸ್. ನಂಜೇಶ್, ಶಿವಲಿಂಗಯ್ಯ, ಸಾವಿತ್ರಮ್ಮ, ಬಿ.ಎಸ್. ಶಿವು, ಮಹದೇವ, ಶಿವರಾಜು, ಮಹೇವಮ್ಮ, ಶಿವಕುಮಾರ್, ತಿಮ್ಮಯ್ಯ ಹಾಲು ಪರೀಕ್ಷಕ ವಿಜಯ ಕುಮಾರ್, ಸಹಾಯಕ ಬಸವರಾಜು ಒಳಗೊಂಡಂತೆ ಹಾಲು ಉತ್ಪಾದಕರು ಭಾಗವಹಿಸಿದ್ದರು.
































