Home ಜಿಲ್ಲೆ ಬೆಂಗಳೂರು ಯುವಕರಿಗೆ ಜಾಗತಿಕ ಉದ್ಯಮ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಉದ್ದೇಶ: ಆರ್.ಪಿ. ರವಿಶಂಕರ್

ಯುವಕರಿಗೆ ಜಾಗತಿಕ ಉದ್ಯಮ ಕ್ಷೇತ್ರದಲ್ಲಿ ಅವಕಾಶ ಕಲ್ಪಿಸುವ ಉದ್ದೇಶ: ಆರ್.ಪಿ. ರವಿಶಂಕರ್

filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.071899; highlight: 0; algolist: 0; multi-frame: 1; brp_mask: 8; brp_del_th: 0.0011,0.0000; brp_del_sen: 0.1300,0.0000; delta:1; bokeh:1; ispap:1; papproctime: 2026:08:29 11:53:23; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (13, 2);aec_lux: 269.0;aec_lux_index: 0;albedo: ;confidence: ;motionLevel: 0;weatherinfo: null;temperature: 38;zeissColor: bright;

ಕೋಲಾರ.ಆ.೩೧-ಆರ್ಯವೈಶ್ಯ ಸಮುದಾಯದ ಯುವಕರಿಗ ಭವಿಷ್ಯ ರೂಪಿಸಿಕೊಳ್ಳಲು ಅಗತ್ಯ ಮಾರ್ಗದರ್ಶನ,ತರಬೇತಿ ಹಾಗೂ ಜಾಗತಿಕ ಮಟ್ಟದ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಆರ್ಯವೈಶ್ಯ ಮಹಾಸಭಾ ವತಿಯಿಂದ ಡಿ.೨೫, ೨೬ ಮತ್ತು ೨೭ರಂದು ಬಂಗಳೂರಿನ ಅರಮನೆ ಮೈದಾನದಲ್ಲಿ ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ ಆಯೋಜಿಸಲಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಮಹಾಸಭಾದ ರಾಜ್ಯ ಅಧ್ಯಕ್ಷ ಆರ್.ಪಿ. ರವಿಶಂಕರ್ ಮನವಿ ಮಾಡಿದರು


ನಗರದ ಸುವರ್ಣ ಕನ್ನಡ ಭವನದಲ್ಲಿ ಆರ್ಯವೈಶ್ಯ ಮಹಾಸಭಾ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು,ಆರ್ಯವೈಶ್ಯ ಮಹಾಸಭಾ ಪ್ರತಿ ವರ್ಷ ಸುಮಾರು ರೂ ೪೭ ಕೋಟಿ ಮೊತ್ತವನ್ನು ವಿವಿಧ ಸೇವಾ ಕಾರ್ಯಗಳಿಗೆ ವಿನಿಯೋಗಿಸುತ್ತಿದೆ. ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ, ಜಿಲ್ಲೆಯ ೪೩ ವಿಧವೆಯರಿಗೆ ಮಾಸಿಕ ರೂ ೧,೫೦೦ ನೆರವು ಹಾಗೂ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಗತ್ಯವಾದ ಲ್ಯಾಪ್‌ಟಾಪ್‌ಗಳನ್ನು ನೀಡಲಾಗಿದೆ. ಸಮುದಾಯದ ಹಿತದೃಷ್ಟಿಯಿಂದ ಸುಮಾರು ರೂ ೭೦೦ ಕೋಟಿ ಮೌಲ್ಯದ ಆಸ್ತಿಯನ್ನು ರಕ್ಷಿಸಲಾಗಿದೆ. ಸಮುದಾಯದ ಮತ್ತಷ್ಟು ಅಭಿವೃದ್ಧಿಗೆ ಪ್ರತಿಯೊಬ್ಬ ಆರ್ಯವೈಶ್ಯ ಬಂಧುಗಳ ಸಹಕಾರ ಮತ್ತು ಬೆಂಬಲ ಅಗತ್ಯವಿದೆ ಎಂದರು.


ಕರ್ನಾಟಕ ಜೈವಿಕ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಇ. ಸುಧೀಂದ್ರ ಮಾತನಾಡಿ, ಸರ್ಕಾರವು ಸಮಾಜದ ಅಭಿವೃದ್ಧಿಗೆ ಇಬ್ಬರಿಗೆ ಸಂಪುಟ ದರ್ಜೆಯ ನಿಗಮಗಳ ಅಧ್ಯಕ್ಷ ಸ್ಥಾನ ನೀಡಿದೆ ಎಂದರು.
ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ. ರಾಮಪ್ರಸಾದ್ ಮಾತನಾಡಿ, ನಿಗಮದ ವತಿಯಿಂದ ಸಮುದಾಯದ ಅಭಿವೃದ್ಧಿಗಾಗಿ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅರ್ಹರು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು ಮನವಿ ಮಾಡಿದರು.


ಇದೇ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡ ಅನಿಲ್ ತಲ್ಲಂ,ಗ್ಲೋಬಲ್ ಆಕ್ಸಿಲೇಟರ್ ವಿಷನ್ ಸಮಿಟ್ (ಜಿ.ಎ.ವಿ.ಎಸ್.) ೨೦೨೬ ಸಮಾವೇಶದ ಕುರಿತು ಸಮಾಜದ ಬಂಧುಗಳೊಂದಿಗೆ ಸಂವಾದ ನಡೆಸಿದರು.ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜದ ಬಂಧುಗಳನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾ ಜಿಲ್ಲಾಧ್ಯಕ್ಷ ಕೆ.ಆರ್.ಶಿವಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಕೃಷ್ಣ, ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ಮುಳಬಾಗಿಲು ಯೋಜನಾ ಪ್ರಾಧಿಕಾರ ಹಾಗೂ ಆಂಜನೇಯಸ್ವಾಮಿ ದೇವಾಲಯ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಆರ್.ಎಸ್.ಸುಹಾಶ್ ಶೆಟ್ಟಿ, ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಬಿ.ಎಸ್.ನಟರಾಜ್, ಕಾರ್ಯದರ್ಶಿ ಕೆ.ವಿ.ಪ್ರಸನ್ನಕುಮಾರ್, ನಿರ್ದೇಶಕರಾದ ಎನ್.ಸಿ.ಸತೀಶ್, ವೈ.ವಿ.ರಮೇಶ್, ಎಸ್.ಆರ್.ಅಮರನಾಥ್, ಕೋಲಾರ ಜಿಲ್ಲಾ ಉಪಾಧ್ಯಕ್ಷ ಎಂ.ಆರ್.ಆನಂದ್, ಜಿಲ್ಲಾ ಕಾರ್ಯದರ್ಶಿ ದೇವತಾ ವಿಜಯಲಕ್ಷ್ಮಿ, ನಿಕಟಪೂರ್ವ ಕೋಲಾರ ಜಿಲ್ಲಾಧ್ಯಕ್ಷ ವೈ.ಆರ್.ಶಿವಪ್ರಕಾಶ್ ಇದ್ದರು.