
ಕಲಬುರಗಿ: ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ಮಾನಸಿಕ ಒತ್ತಡ, ಭಾವನಾತ್ಮಕ ಸಮಸ್ಯೆಗಳು ಹಾಗೂ ವೈಯುಕ್ತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಕೌಶಲ್ಯಗಳ ಅಗತ್ಯತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶರಣಬಸವ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯ ಹಾಗೂ ಸಮಾಧಾನ ಕೌನ್ಸಲಿಂಗ್ ಸೆಂಟರ್ ಜಂಟಿಯಾಗಿ ಸಾಮಾನ್ಯ ಸಮಾಲೋಚನೆ (ಲೇ ಕೌನ್ಸಲಿಂಗ್) ಕುರಿತಾದ ಪ್ರಮಾಣ ಪತ್ರ ಕೋರ್ಸ್ ಆರಂಭಿಸಿದ್ದು ಈಗಾಗಲೇ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಈ ಕೋರ್ಸ್ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಸಮಾಲೋಚನಾ ಕೌಶಲ್ಯಗಳನ್ನು ಬೆಳೆಸುವುದರ ಜೊತೆಗೆ ಮಾನವನ ನಡವಳಿಕೆ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಸಮಾಲೋಚನಾ ವಿಧಾನಗಳ ಕುರಿತು ಸಮಗ್ರ ಅರಿವು ಮೂಡಿಸಲಾಗುತ್ತದೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಸಮಾಲೋಚನಾ ಸಲಹೆಗಾರರನ್ನು ನೇಮಿಸಬೇಕೆಂದು ಯು.ಜಿ.ಸಿ. ಮಾರ್ಗಸೂಚಿ ಹೊರಡಿಸಿದೆ. ಅದಕ್ಕಾಗಿಯೇ ಶಿಕ್ಷಕರು ಕೂಡ ಸಾಮಾನ್ಯ ಸಮಾಲೋಚನೆ(ಲೇ ಕೌನ್ಸಲಿಂಗ್)ಯನ್ನು ಕಲಿಯುವುದು ಅತ್ಯಗತ್ಯವಾಗಿದೆ. ಇಂದಿನ ವೇಗದ ಯುಗದ, ದೊಡ್ಡ ದೊಡ್ಡ ಕೈಗಾರಿಕೆಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಲೋಚಕರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ಆರಂಭಗೊಂಡಿದೆ.
ಒಟ್ಟು 30 ಗಂಟೆಗಳ ಕಾಲ ನಡೆಯುವ ಈ ಕೋರ್ಸ್ ವಾರಾಂತ್ಯಗಳಲ್ಲಿ ಸಾಯಂಕಾಲ ತರಗತಿಗಳ ಮೂಲಕ ನಡೆಯಲಿದೆ. ಖ್ಯಾತ ಮನೋವಿಜ್ಞಾನಿ ಪದ್ಮಶ್ರೀ ಪುರಸ್ಕøತ ಡಾ. ಸಿ. ಆರ್. ಚಂದ್ರಶೇಖರ ಸೇರಿದಂತೆ ಬೆಂಗಳೂರಿನ ಹಾಗೂ ಇತರ ಕೇಂದ್ರಗಳ ಅನುಭವವುಳ್ಳ ಸಮಾಲೋಚಕರು ತರಗತಿಗಳನ್ನು ನಡೆಸಿಕೊಡಲಿದ್ದಾರೆ. ಈ ಕೋರ್ಸ್ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಕೇವಲ 5,000 ರೂಪಾಯಿ ಶುಲ್ಕ ನಿಗದಿ ಪಡಿಸಲಾಗಿದೆ.
ಸಮಾಲೋಚನಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಹಾಗೂ ಈ ಕ್ಷೇತ್ರದಲ್ಲಿ ತಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಸಾಮಾನ್ಯ ಸಮಾಲೋಚನೆ(ಲೇ ಕೌನ್ಸಲಿಂಗ್) ಕೋರ್ಸ್ಗೆ ಪ್ರವೇಶಾತಿ ಹಾಗೂ ಹೆಚ್ಚಿನ ವಿವರಗಳಿಗಾಗಿ ದೂರವಾಣಿ 9448040792, 9342356222 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆಯೆಂದು ಶರಣಬಸವ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ನಿಕಾಯದ ಪ್ರಕಟಣೆ ತಿಳಿಸಿದೆ.





















