Home ಜಿಲ್ಲೆ ಅರ್ಧ ಶತಕ ಬಾರಿಸಿದ ಅಧ್ಯಾಯ ಪಾಟೀಲ್, ತನಿಷ್ಕಾ ೨೩ ರನ್ ಬಾರಿಸಿ ಆಸರೆತುಮಕೂರು ವಿರುದ್ಧ ರಾಯಚೂರು...

ಅರ್ಧ ಶತಕ ಬಾರಿಸಿದ ಅಧ್ಯಾಯ ಪಾಟೀಲ್, ತನಿಷ್ಕಾ ೨೩ ರನ್ ಬಾರಿಸಿ ಆಸರೆತುಮಕೂರು ವಿರುದ್ಧ ರಾಯಚೂರು ವಲಯ ತಂಡಕ್ಕೆ ಜಯ

ಬೀದರ್: ಬೆಂಗಳೂರಿನ ಆಲೂರು ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ವತಿಯಿಂದ ೧೫ ವರ್ಷದೊಳಗಿನ ಬಾಲಕಿಯರ ವಿಭಾಗದ ಮೊಫೆಸೆಲ್ ಟೂರ್ನಮೆಂಟ್ ನಲ್ಲಿ ಶನಿವಾರ ನಡೆದ ಹಣಾಹಣಿಯಲ್ಲಿ ರಾಯಚೂರು ವಲಯ ತಂಡವು ಗೆಲುವು ಸಾಧಿಸಿದೆ.
ರಾಯಚೂರು ಮತ್ತು ತುಮಕೂರು ವಲಯ ತಂಡದ ಮಧ್ಯೆ ೩೦ ಓವರ್ನ ಪಂದ್ಯ ನಡೆದಿತ್ತು. ಮೊದಲು ಬ್ಯಾಂಟಿAಗ್ ಮಾಡಿದ ತುಮಕೂರು ತಂಡವು, ೩೦ ಓವರ್ನಲ್ಲಿ ಐದು ವಿಕೆಟ್ ಕಳೆದುಕೊಂಡು ಕೇವಲ ೯೩ ರನ್ ಗಳಿಸಿತು. ಅಮೃತು ಮತ್ತು ಸರಾಯು ತಲಾ ೩೩ ರನ್ ಗಳಿಸಿ ತಂಡಕ್ಕೆ ಆಸರೆಯಾದರು.
ರಾಯಚೂರು ತಂಡದ ಕೃಷ್ಣವೇಣಿ ೫ ಓವರ್ನಲ್ಲಿ ೨೩ ರನ್ ನೀಡಿ ೨ ವಿಕೆಟ್ ಪಡೆದರೆ, ವಿಭಾ ೫ ಓವರ್ ನಲ್ಲಿ ೧೦ ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದಾರೆ.
ನಂತರ ಬ್ಯಾಟಿಂಗ್ ಮಾಡಿದ ರಾಯಚೂರು ತಂಡವು, ೧೪.೩ ಓವರ್‌ಗಳಲ್ಲಿ ೧ ವಿಕೆಟ್ ಕಳೆದುಕೊಂಡು ೯೫ ರನ್ ಬಾರಿಸಿ ಭರ್ಜರಿ ಜಯಗಳಿಸಿತು. ಅಧ್ಯಾಯ ಪಾಟೀಲ್ ೫೦ ರನ್, ತನಿಷ್ಕಾ ೨೩ ರನ್ ಬಾರಿಸಿ
ತಂಡವನ್ನು ದಡಕ್ಕೆ ಸೇರಿಸಿದರು.
ರಾಯಚೂರು ತಂಡದ ಬಾಲಕಿಯರ ಸಾಧನೆಗೆ ವಲಯದ ಅಧ್ಯಕ್ಷ ಚಂದ್ರಶೇಖರ ಮೈಲಾರೆ, ಸಂಚಾಲಕ ಕುಶಾಲ ಪಾಟೀಲ್ ಗಾದಗಿ, ಕೋಚ್ ನಿತೀಶ್ ಪಿ.ದೇಶಮುಖ, ವಲಯದ ವ್ಯವಸ್ಥಾಪಕಿ
ಮೇಘನಾ, ಮಾಧ್ಯಮ ಸಂಚಾಲಕ ಅನೀಲಕುಮಾರ ದೇಶಮುಖ ಹರ್ಷ ವ್ಯಕ್ತಪಡಿಸಿದ್ದಾರೆ