Home ಜಿಲ್ಲೆ ರೈತ ಪ್ರಭುಗೌಡ ಗೌಡರಡ್ಡಿಗೆ ಧಾರವಾಡ ಕೃಷಿ ವಿವಿಯಿಂದ ಸಾಧಕ ರೈತ ಪ್ರಶಸ್ತಿ

ರೈತ ಪ್ರಭುಗೌಡ ಗೌಡರಡ್ಡಿಗೆ ಧಾರವಾಡ ಕೃಷಿ ವಿವಿಯಿಂದ ಸಾಧಕ ರೈತ ಪ್ರಶಸ್ತಿ

ತಾಳಿಕೋಟೆ: ತಾಲೂಕಿನ ಬಿ. ಸಾಲವಾಡಗಿ ಗ್ರಾಮದ ಪ್ರಗತಿಪರ ರೈತ ಹಾಗೂ ಸಾವಯವ ಕೃಷಿಕರಾದ ಪ್ರಭುಗೌಡ ಬಿ. ಗೌಡರಡ್ಡಿ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ-೨೦೨೬ರಲ್ಲಿ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ನೀಡಿ ಗೌರವಿಸಿದೆ.
ಈ ಪ್ರಶಸ್ತಿಯೊಂದಿಗೆ ಪ್ರಭುಗೌಡ ಬಿ. ಗೌಡರಡ್ಡಿ ಅವರಿಗೆ ಒಟ್ಟು ಐದು ಪ್ರಶಸ್ತಿಗಳು ಲಬಿಸಿದಂತಾಗಿದೆ ಸೆ.೨೭ರಂದು ಧಾರವಾಡದಲ್ಲಿ ನಡೆದ ಕೃಷಿ ಮೇಳದಲ್ಲಿ ೧೦ ಎಕರೆ ಬಂಜರು ಭೂಮಿಯನ್ನು ಕೆಲವೇ ವರ್ಷಗಳಲ್ಲಿ ಹಸಿರು ಪರಿಸರ ಹಾಗೂ ಜೀವವೈವಿಧ್ಯದಿಂದ ಕೂಡಿದ ಮಾದರಿ ತೋಟವನ್ನಾಗಿ ಪರಿವರ್ತಿಸಿದ ಸಾಧನೆಗಾಗಿ ಪ್ರಭುಗೌಡ ಗೌಡರಡ್ಡಿ ಅವರನ್ನು ಸನ್ಮಾನಿಸಲಾಯಿತು.
ಎಂಜಿನಿಯರ್ ವೃತ್ತಿಯಿಂದ ಸಾವಯವ ಕೃಷಿಯತ್ತ
೧೯೮೦ರ ಜೂನ್ ೧ರಂದು ಜನಿಸಿದ ಪ್ರಭುಗೌಡ ಗೌಡರಡ್ಡಿ ಅವರು ಮೆಕ್ಯಾನಿಕಲ್ ಎಂಜಿನಿಯರಿAಗ್‌ನಲ್ಲಿ ಡಿಪ್ಲೊಮಾ ಪಡೆದಿದ್ದಾರೆ. ಸುಮಾರು ೧೬ರಿಂದ ೨೦ ವರ್ಷಗಳ ಕಾಲ ಸುಡಾನ್, ಓಮನ್, ಬಹರೇನ್, ಶಾರ್ಜಾ, ಇರಾಕ್, ಅಬುಧಾಬಿ, ಕತಾರ್, ಈಜಿಪ್ಟ್ ಹಾಗೂ ನಾರ್ತ್ ಸುಡಾನ್ ಸೇರಿದಂತೆ ವಿವಿಧ ದೇಶಗಳಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಪ್ಲಾನಿಂಗ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.
೨೦೨೦ರಲ್ಲಿ ತಮ್ಮ ಹುಟ್ಟೂರಾದ ಬಿ. ಸಾಲವಾಡಗಿಗೆ ಮರಳಿದ ಅವರು ೧೦ ಎಕರೆ ಬಂಜರು ಭೂಮಿಯಲ್ಲಿ ಸಾವಯವ ಕೃಷಿಗೆ ಚಾಲನೆ ನೀಡಿದರು. ಜೀವಾಮೃತ, ಘನಜೀವಾಮೃತ, ಬೀಜಾಮೃತ, ಕೃಷಿ ಹೊಂಡ, ಹನಿ ನೀರಾವರಿ ಹಾಗೂ ಮುಚ್ಚಿಗೆ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಆರಂಭಿಸಿದರು.
ಇಂದು ಅವರ ತೋಟದಲ್ಲಿ ತೆಂಗು, ಮಾವು, ಬಾಳೆ, ತೇಗ, ಮಹಾಗನಿ, ಶ್ರೀಗಂಧ, ಬೇವು, ಹಲಸು ಸೇರಿದಂತೆ ೩೦ಕ್ಕೂ ಹೆಚ್ಚು ಬಗೆಯ ಬೆಳೆಗಳು ಮತ್ತು ಮರಗಳು ಬೆಳೆಸಲಾಗುತ್ತಿವೆ. ಗಿರ್ ಹಾಗೂ ಸಾಹಿವಾಲ್ ತಳಿಯ ದೇಸಿ ಹಸುಗಳ ಸಾಕಣೆ ಮತ್ತು ಜೇನು ಸಾಕಣೆಯನ್ನೂ ಕೈಗೊಂಡಿದ್ದಾರೆ. ಗಿಡ ನೆಡುವುದರಿಂದ ಹಿಡಿದು ಕೊಯ್ಲಿನವರೆಗೂ ರಾಸಾಯನಿಕ ಮುಕ್ತ ಪದ್ಧತಿಯನ್ನು ಅನುಸರಿಸುತ್ತಿರುವುದು ಅವರ ಕೃಷಿಯ ವಿಶೇಷತೆಯಾಗಿದೆ.
ಐದು ಪ್ರಶಸ್ತಿಗಳ ಗೌರವ
ಪ್ರಭುಗೌಡ ಗೌಡರಡ್ಡಿ ಅವರಿಗೆ ಇದಕ್ಕೂ ಮುನ್ನ ವಿವಿಧ ಕ್ಷೇತ್ರಗಳ ಸಾಧನೆಗಾಗಿ ನಾಲ್ಕು ಪ್ರಶಸ್ತಿಗಳು ಲಭಿಸಿವೆ. ೨೦೨೪ರ ಆಗಸ್ಟ್ ೧ರಂದು (ಕರ್ನಾಟಕ ಚಾಪ್ಟರ್) ಹಾಗೂ ಕರ್ನಾಟಕ ಪಶುವೈದ್ಯಕೀಯ ಇಲಾಖೆಯಿಂದ ಉತ್ತಮ ಪಶುಪಾಲಕ ಪ್ರಶಸ್ತಿ, ೨೦೨೪ರ ಆಗಸ್ಟ್ ೧೫ರಂದು ತಾಳಿಕೋಟಿ ತಾಲೂಕು ಆಡಳಿತದಿಂದ ಶ್ರೇಷ್ಠ ರೈತ ಪ್ರಶಸ್ತಿ, ೨೦೨೬ರ ಜೂನ್ ೫ರಂದು ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ ಪಾಲಕ ಪ್ರಶಸ್ತಿ ದೊರೆತಿದೆ. ೨೦೨೩-೨೪ನೇ ಸಾಲಿನಲ್ಲಿ ಮಹಾರಾಷ್ಟçದ ಕೊಲ್ಲಾಪುರ ಜಿಲ್ಲೆಯ ಕನೇರಿ ಶ್ರೀ ಕ್ಷೇತ್ರ ಸಿದ್ಧಗಿರಿ ಮಹಾಸಂಸ್ಥಾನದಿAದ ಅತ್ಯುತ್ತಮ ಸಾವಯವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಇದೀಗ ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ದೊರೆತ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿ ಅವರ ಸಾಧನೆಗೆ ಮತ್ತೊಂದು ಗೌರವ ಸೇರ್ಪಡೆಯಾಗಿದೆ.
ಬಂಜರು ಭೂಮಿಯನ್ನು ಹಸಿರಾಗಿಸಿ, ಸಾವಯವ ಕೃಷಿ, ಪಶುಪಾಲನೆ, ಜಲಸಂರಕ್ಷಣೆ ಮತ್ತು ಜೀವವೈವಿಧ್ಯ ಸಂರಕ್ಷಣೆಯನ್ನು ಸಮನ್ವಯಗೊಳಿಸಿರುವ ಅವರ ಮಾದರಿ ತೋಟವು ಸುಸ್ಥಿರ ಕೃಷಿಗೆ ಪ್ರೇರಣಾದಾಯಕವಾಗಿದೆ.
ಮಣ್ಣು ತಾಯಿ, ವಿಷ ಹಾಕಬೇಡಿ, ಮುಚ್ಚಿಗೆ ಹಾಕಿ, ನೀರು ಉಳಿಸಿ ಎಂಬುದು ಪ್ರಭುಗೌಡ ಗೌಡರಡ್ಡಿ ಅವರ ಕೃಷಿ ಮಂತ್ರವಾಗಿದೆ.