
ಕಲಬುರಗಿ, ಕೆಬಿಎನ್ ವಿವಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ವಿವಿಯ ಇತಿಹಾಸ, ರಾಜ್ಯಶಾಸ್ತ್ರ ಮತ್ತು ಕಾನೂನು ವಿಭಾಗಗಳು ಜಂಟಿಯಾಗಿ ಆಚರಿಸಿದವು. ಈ ಸಂದರ್ಭವನ್ನು ಗುರುತಿಸಲು ಪ್ರಬಂಧ ಸ್ಪರ್ಧೆ, ಪೋಸ್ಟರ್ ತಯಾರಿಕೆ, ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಒಟ್ಟು ೯೩ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
ಕಾನೂನು ನಿಕಾಯದ ಮುಖ್ಯಸ್ಥರಾದ ಡಾ. ಪ್ರವೀಣ್ ನಾಯಕ್ ಅವರು ದಿನದ ಮಹತ್ವದ ಕುರಿತು ಮಾತನಾಡಿದರು. ಇತಿಹಾಸ ವಿಭಾಗದ ಡಾ. ಅಸ್ಲಂ ವಾಲಿಖಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಣ ನಿಕಾಯದ ಡೀನ್ ಆದ ಪ್ರೊ. ಇಕ್ಬಾಲ್ ಮಟ್ಟೂ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ವಿತರಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ತಾಜುದ್ದೀನ್ ಎಂ.ಡಿ. ವಂದನಾರ್ಪಣೆ ಸಲ್ಲಿಸಿದರು.






















