ಕೋಲಾರ : ೪- ಬೆಂಗಳೂರು ಉತ್ತರ ವಿವಿಯಲ್ಲಿ ನಡೆಯುತ್ತಿರುವ ಅಕ್ರಮ ಭ್ರಷ್ಟಾಚಾರ ದ ವಿರುದ್ಧ ಆಗಸ್ಟ್ ೧ ರ ಒಳಗೆ ವಿವಿಯಲ್ಲಿನ ವೈಫಲ್ಯಗಳನ್ನು ಸರಿಪಡಿಸಿ ಹಾಗೂ ಸಮಗ್ರ ತನಿಖೆ ನಡೆಸಿ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದು ಎಬಿವಿಪಿ ಮುಖಂಡರು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎದುರು ಪ್ರತಿಭಟನೆಯನ್ನು ನಡೆಸಿ ಆಕ್ರೋಶವ್ಯಕ್ತಪಡಿಸಿದರು.
ಬೆಂಗಳೂರು ಉತ್ತರ ವಿವಿ ಮುಂದೆ ಎಬಿವಿಪಿ ಕಾರ್ಯಕರ್ತರ ಪ್ರತಿಭಟನೆ ಕಿಡಿ ಜೋರಾಗುತ್ತಿದ್ದಂತೆ, ಮದ್ಯ ಪ್ರವೇಶ ಮಾಡಿದ ಪೊಲೀಸರು ಪ್ರತಿಭಟನಾಕಾರರನ್ನು ಸಮಾಧಾನಪಡಿಸುವ ಮೂಲಕ ಮನವಿಯನ್ನು ಬೆಂಗಳೂರು ಉತ್ತರ ವಿವಿಯ ಉಪಕುಲಪತಿಗಳಿಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಜಿಲ್ಲಾ ಸಂಚಾಲಕ ಮಯೂರ್ ಮಾತನಾಡಿ, ಬೆಂಗಳೂರು ಉತ್ತರ ವಿವಿಯ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಪರೀಕ್ಷೆಯ ಹಾಲ್ ಟಿಕೆಟ್ ಪಡೆಯಲು ಬಂದರೆ, ಹೆಚ್ಚುವರಿಯಾಗಿ ಹಣ ನೀಡಬೇಕು ಎಂದು ಅಲ್ಲಿನ ವಿವಿಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ. ಅದಕ್ಕೆ ವಿದ್ಯಾರ್ಥಿಯ ಫೋಷಕರು ೪ ಸಾವಿರ ಹಣದ ಜತೆಗೆ ಹೆಚ್ಚುವರಿ ೧೦ ಸಾವಿರ ರೂ. ಗಳನ್ನು ನೀಡಿದ್ದು, ಈ ವಿಚಾರ ಬೆಂಗಳೂರು ಉತ್ತರ ವಿವಿಯ ಅಧಿಕೃತ ಸಿಂಡಿಕೆಟ್ ವಾಟ್ಸ್ ಆಪ್ ಗ್ರೂಪ್ ನ ಸಿಂಡಿಕೇಟ್ ಸದಸ್ಯರೊಬ್ಬರು ಈ ಕುರಿತು ಮಾಹಿತಿ ನೀಡಿ ಮತ್ತು ಹಣ ವರ್ಗಾವಣೆ ಆಗಿರುವ ಫೋನ್ ಪೇ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿ ದ್ದಾರೆ. ಭಷ್ಟಚಾರ ಮಾಡಿದ ವ್ಯಕ್ತಿಯ ಹೆಸರನ್ನು ಸಹ ತಿಳಿಸಿದ್ದು, ಆದರೆ ಅ ವ್ಯಕ್ತಿಯ ವಿರುದ್ಧ ಯಾವ ಕ್ರಮವನ್ನು ವಿವಿಯಿಂದ ಕ್ರಮ ಕೈಗೊಂಡಿರುವ ಮಾಹಿತಿ ಇದುವರೆಗೂ ಸಹ ನೀಡಿಲ್ಲ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಉತ್ತರ ವಿವಿಯಲ್ಲಿನ ಆಡಳಿತಾತ್ಮಕ ವೈಫಲ್ಯಗಳ ಸಮಗ್ರ ತನಿಖೆಯನ್ನು ಆಗಸ್ಟ್ ೧ ರೊಳಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಬೇಕು, ಇಲ್ಲದ ಪಕ್ಷದಲ್ಲಿ ಎಬಿವಿಪಿ ಸಂಘಟನೆಯಿಂದ ಬೆಂಗಳೂರು ಉತ್ತರ ವಿವಿಯ ವ್ಯಾಪ್ತಿಗೆ ಒಳಪಡುವ ತಾಲೂಕು ಕೇಂದ್ರಗಳಲ್ಲಿ ಉಗ್ರ ಮತ್ತು ಬೃಹತ್ ಪ್ರತಿಭಟನೆಯನ್ನು ನಡೆಸಲಾಗುವುದೆಂದು ಎಚ್ಚರಿಸಿದರು.
ವಿವಿಯಲ್ಲಿ ಪತ್ರಿಕೋದ್ಯಮ ಕೋರ್ಸ್ ಅನ್ನು ಅಡ್ಮಿಶನ್ ಇಲ್ಲದ ಕಾರಣ ನೀಡಿ, ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗವನ್ನು ಕೈ ಬಿಡಲಾಗಿತ್ತು, ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮತ್ತೆ ಪತ್ರಿಕೋದ್ಯಮ ವಿಭಾಗವನ್ನು ಸ್ಥಾಪಿಸಿಬೇಕು, ಮತ್ತು ವಿದ್ಯಾರ್ಥಿಗಳು ಅಡ್ಮಿಶನ್ ಆಗಲು ಹೆಚ್ಚು ಒತ್ತು ನೀಡಿ ಪ್ರಚಾರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
































