Home ಜಿಲ್ಲೆ ಗುರುವಾಕ್ಯ ಶಕ್ತಿಯ ಆಗರ: ಹಾರಕೂಡ ಶ್ರೀ

ಗುರುವಾಕ್ಯ ಶಕ್ತಿಯ ಆಗರ: ಹಾರಕೂಡ ಶ್ರೀ

ಬಸವಕಲ್ಯಾಣ: ಬ್ರಹ್ಮಾಂಡದ ಪರಮ ಸತ್ಯದ ದರ್ಶನವನ್ನು ಮಾಡಿಸುವಂತಹ ಗುರುವಿನ ವಾಕ್ಯ ಅದ್ಭುತವಾದ ಶಕ್ತಿಯ ಆಗರವಾಗಿರುತ್ತದೆ ಎಂದು ಹಾರಕೂಡದ ಸಹಸ್ರ ತುಲಾಭಾರ ಸಂತ ಡಾ. ಚನ್ನವೀರ ಶಿವಾಚಾರ್ಯರು ನುಡಿದರು.
ತಾಲೂಕಿನ ಉರ್ಕಿ ಗ್ರಾಮದಲ್ಲಿ ಶುಕ್ರವಾರ ಜರುಗಿದ ಶ್ರೀ ನಂದಿ ಬಸವಣ್ಣ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮನುಷ್ಯರನ್ನು ಹೊಯ್ದಾಡುವ ಮನಸ್ಸಿನ ಸುಳಿಯಿಂದ ದಾಟಿಸಿ, ದೇಹಭಾವದಿಂದ ದೇವ ಭಾವದೆಡೆಗೆ ಕೊಂಡೊಯ್ಯುವ ಶಕ್ತಿ ಗುರುವಿನಲ್ಲಿರುತ್ತದೆ.
ಅಚಲವಾದ ಶ್ರದ್ಧೆ ಮತ್ತು ನಿಷ್ಠೆಯಿಂದ ಗುರುವಿನ ಕೃಪೆ ದೊರಕುತ್ತದೆ.
ಗುರುವಿನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ನಿರ್ಭೀತಿಯಿಂದ ಬದುಕಿನ ದಡ ಸೇರಬಲ್ಲರು ಎಂದು ಹೇಳಿದ ಪೂಜ್ಯರು ಸರ್ವರ ಬಾಳಲ್ಲಿ ಹಾರಕೂಡಧೀಶನ ಕೃಪಾರಶ್ಮಿ ಚಿರಂತನವಾಗಿರಲಿ ಎಂದು ಶುಭ ಹಾರೈಸಿದರು.
ಜಗನ್ನಾಥ ಪಾಟೀಲ ಮಂಠಾಳ, ಪುಷ್ಪರಾಜ ಹಾರಕೂಡೆ, ಅನಿಲ ಕಾರಭಾರಿ ಮಾತನಾಡಿದರು.
ಅಂದಪ್ಪ ಖಸಗೆ, ರಾಮಲಿಂಗ ಪಾಟೀಲ, ತಾನಾಜಿ ಬಿರಾದಾರ, ಬಸವರಾಜ ಭಾವಿ, ಭದ್ರಯ್ಯ ಸ್ವಾಮಿ, ಸಿದ್ರಾಮ ಪಾಟೀಲ ಪಾಲ್ಗೊಂಡಿದ್ದರು.
ಸಂಗಮೇಶ ನಂದಿ ಮುಂತಾದವರು ಉಪಸ್ಥಿತರಿದ್ದರು.
ಸಂಗಮೇಶ ನಂದಿ ಸ್ವಾಗತಿಸಿದರು.
ಕಾರ್ತಿಕ ಸ್ವಾಮಿ ಯಲದಗುಂಡಿ ಪ್ರಾರ್ಥನಾ ಗೀತೆ ಹಾಡಿದರು.
ಜಗನ್ನಾಥ ಮುಗಳೆ ನಿರೂಪಣೆ ಮಾಡಿದರು.
ಉರ್ಕಿ ಗ್ರಾಮದ ವತಿಯಿಂದ ಹಾರಕೂಡ ಶ್ರೀಗಳ 1029ನೇ ತುಲಾಭಾರ ಜರುಗಿತು.
ಕಾರ್ಯಕ್ರಮಕ್ಕೂ ಮೊದಲು ಅಲಂಕೃತ ಸಾರೋಟಿನಲ್ಲಿ ಹಾರಕೂಡ ಶ್ರೀಗಳ ಭವ್ಯ ಮೆರವಣಿಗೆ ಜರುಗಿತು.