
ಕೆಆರ್ ಪುರ, ಅ.೧೯- ವಿಜಿನಾಪುರ ವಾರ್ಡ್ ನಲ್ಲಿ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದು ಶಾಸಕ ಬೈರತಿ ಬಸವರಾಜ ತಿಳಿಸಿದರು.
ಕೆಆರ್ ಪುರದ ವಿಜಿನಾಪುರದಲ್ಲಿ ಬಿಜೆಪಿ ಮುಖಂಡ ಪ್ರದೀಪ್ ಗೌಡ ಅವರು ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಸೇವಾ ಸಂಕಲ್ಪದಲ್ಲಿ ಪೌರ ಕಾರ್ಮಿಕರಿಗೆ ಸೀರೆಗಳನ್ನು ವಿತರಿಸಿ ಗೌರವಿಸಿ ಮಾತನಾಡಿದರು.
ಪ್ರಧಾನಿ ಮೋದಿ ಅವರ ಹುಟ್ಟುಹಬ್ಬಕ್ಕೆ ಒಂದು ತಿಂಗಳುಗಳ ಕಾಲ ಸೇವಾ ಸಂಕಲ್ಪ ಹಮ್ಮಿಕೊಂಡಿದ್ದು, ಆರೋಗ್ಯ ಶಿಬಿರ, ಪೌರ ಕಾರ್ಮಿಕರಿಗೆ ಸೀರೆ ವಿತರಣೆ, ಸ್ವಚ್ಛತೆ, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಸೇರಿದಂತೆ ಹಲವು ಸೇವೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಮೋದಿ ಅವರು ವಿಶ್ವಕಂಡ ಮಹಾನ್ ನಾಯಕ, ಕೋವಿಡ್ ನಲ್ಲಿ ಅವರ ಸೇವೆ ಇಡೀ ದೇಶವೇ ಸ್ಮರಿಸುವಂತದ್ದು ಎಂದು ಹೇಳಿದರು.
ದೂರವಾಣಿ ನಗರ ವಾರ್ಡನ ಪ್ರಬಲ ಆಕಾಂಕ್ಷಿ ಪ್ರದೀಪ್ ಗೌ ಅವರು ಮಾತನಾಡಿ, ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ವಿಜಿನಾಪುರ ವಾರ್ಡ್ ಹಾಗೂ ದೂರವಾಣಿ ನಗರ ವಾರ್ಡ್ ನಲ್ಲಿ ಹಲವು ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದರು.
ಶಾಸಕ ಬೈರತಿ ಬಸವರಾಜ ಅವರ ಸಮಾಜ ಸೇವೆ ಇತರರಿಗೆ ಮಾದರಿಯಾಗಿದ್ದು ಅದೇ ಮಾದರಿ ನಾವು ಸಹ ಹಲವು ಸೇವೆಗಳನ್ನು ಮಾಡಿಕೊಂಡು ಬಂದಿದ್ದೇವೆ ಎಂದು ಹೇಳಿದರು.
ಈಗಾಗಲೇ ಶಾಲಾ ಮಕ್ಕಳಿಗೆ ನೋಟ್ ಬುಕ್ , ಸಮವಸ್ತ್ರಗಳನ್ನು ನೀಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲೋಕಸಭಾ ಸದಸ್ಯರಾದ ಲೆಹರ್ ಸಿಂಗ್ ಸಿರೋಯ, ವಾರ್ಡ್ ಅಧ್ಯಕ್ಷ ರಮೇಶ್ ಗೌಡ, ಮುಖಂಡರಾದ ಬಾಬು ಸೆಲ್ವಂ, ಪಿ.ರಮೇಶ್, ಪ್ರವೀಣ್, ರಾಜಣ್ಣ, ಎಂಎಲ್ ಡಿಸಿ ಮುನಿರಾಜು, ನಾಗರಾಜ್ ಮತ್ತಿತರರಿದ್ದರು.

























