Home ಜಿಲ್ಲೆ ಕಲಬುರಗಿ ಒಬ್ಬ ಶ್ರೇಷ್ಠ ಶಿಕ್ಷಕ ಒಂದು ಸರ್ವಶ್ರೇಷ್ಠ ಗ್ರಂಥಾಲಯವಿದ್ದಂತೆ : ಬಿ. ಪಿ. ಬಂದಗಾರ್

ಒಬ್ಬ ಶ್ರೇಷ್ಠ ಶಿಕ್ಷಕ ಒಂದು ಸರ್ವಶ್ರೇಷ್ಠ ಗ್ರಂಥಾಲಯವಿದ್ದಂತೆ : ಬಿ. ಪಿ. ಬಂದಗಾರ್

ಕಲಬುರಗಿ: ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿಯಂತೆ ಒಬ್ಬ ಅತ್ಯುತ್ತಮ ಶಿಕ್ಷಕ ಸರ್ವಶ್ರೇಷ್ಠ ಗ್ರಂಥಾಲಯವಿದ್ದಂತೆ. ಜ್ಞಾನದ ಮಹಾಶಕ್ತಿ ವಿದ್ಯಾರ್ಥಿಗಳ ದಾರಿದೀಪವಾಗುತ್ತದೆ. ಒಬ್ಬ ಅತ್ಯುತ್ತಮ ಶಿಕ್ಷಕ ಒಂದು ಸರ್ವಶ್ರೇಷ್ಠ ಗ್ರಂಥಾಲಯವಿದ್ದಂತೆ. ಜ್ಞಾನದ ಹಸಿವು ನೀಗಿಸುವ ಶಿಕ್ಷಕ ಸಮುದಾಯ ವಿದ್ಯಾರ್ಥಿಗಳ ಬದುಕಿನಲ್ಲಿ ಸದಾ ಪ್ರಜ್ವಲಿಸುವ ಬೆಳಕಿನಂತೆ ಪೆÇ್ರ. ಆನಂದ್ ಆರ್. ಸೌಂದನೆ ನೂರಾರು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಸೋಲಾಪುರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಬಿ. ಪಿ. ಬಂದಗಾರ್ ಹೇಳಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಸ್ಯಾಶಾಸ್ತ್ರ ವಿಭಾಗದ ಬೋಸ್ ಸಭಾಂಗಣದಲ್ಲಿ ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪೆÇ್ರ. ಆನಂದ್ ಆರ್. ಸೌಂದನೆ ಅವರ ನಿವೃತ್ತಿ ನಿಮಿತ್ತ ಬೋಧಕ ಸಿಬ್ಬಂದಿ, ವಿದ್ಯಾರ್ಥಿ ಬಳಗ ಆಯೋಜಿಸಿದ ‘ಗುರು ವಂದನಾ’ ಸಮಾರಂಭವನ್ನು ಸಸಿಗೆ ನೀರು ಹಾಕಿ ಉದ್ಘಾಟಿಸಿ ಮಾತನಾಡಿ ನಿಸರ್ಗ ಇಡೀ ಜಗತ್ತನ್ನು ಕಾಪಾಡುತ್ತಿದೆ. ಶಿಕ್ಷಕರು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಮಾತ್ರವಲ್ಲ ಇಡೀ ಭವಿಷ್ಯವನ್ನು ರೂಪಿಸುವ ಶಿಲ್ಪಿಯಾಗಿರುತ್ತಾರೆ. ಉತ್ಕøಷ್ಠ ಸಂಶೋಧಕರಾಗಿ, ಗುಣಮಟ್ಟದ ಬೋಧನೆ ಮತ್ತು ಮಾರ್ಗದರ್ಶನದಿಂದ ವಿದ್ಯಾರ್ಥಿ ಸಮುದಾಯ ಉತ್ತಮ ಸ್ಥಾನಗಳನ್ನಮು ಅಲಂಕರಿಸಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೆ, ಗುರುವಿನ ಬೆಂಬಲ ಮತ್ತು ಸನ್ಮಾರ್ಗದಿಂದ ಮಾತ್ರ ಉತ್ತಮ ಪ್ರತಿಭೆಗಳು ಹೊರಬರಲು ಸಾಧ್ಯ ಎಂದರು.
ಬೆಂಗಳೂರು ನಗರದ ಡಾ. ಮನಮೋಹನ್ ಸಿಂಗ್ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಭಾರ ಕುಲಪತಿ ಪೆÇ್ರ. ಎಸ್. ಹರಿಪ್ರಸಾದ್ ಮಾತನಾಡಿ ಪ್ರಸ್ತುತ ಜಗತ್ತು ಪ್ರಗತಿ ಸಾಧಿಸಿದಂತೆ ಸ್ಪರ್ಧಾತ್ಮಕತೆ, ಹೊಸ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸುವ ದೈರ್ಯ, ಆತ್ಮವಿಶ್ವಾಸ ಮತ್ತು ಚೈತನ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ ಬಹುಮುಖ ಪ್ರತಿಭೆಯಾಗಿ ರೂಪಿಸುವ ಶಿಕ್ಷಕ ಶ್ರೇಷ್ಠ ಗುರುವಾಗಿರುತ್ತಾನೆ. ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಪ್ರೊ. ಆನಂದ ಸೌಂದಾನೆ ಅವರು ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಮಾರ್ಗದರ್ಶಕ ಮತ್ತು ವಿದ್ವಾಂಸ ಎಂದು ಹೇಳಿದರು.
ರಸಾಯನಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಆನಂದ ಆರ್. ಸೌಂದಾನೆ ಮಾತನಾಡಿ ನನ್ನ ಶೈಕ್ಷಣಿಕ ಮತ್ತು ಬೋಧನಾ ವೃತ್ತಿ ಸೇವೆಯಲ್ಲಿ ಶಿಕ್ಷಕ ಮತ್ತು ಶಿಕ್ಷಕೇತರ ವರ್ಗದವರ ಸಹಕಾರ ನೀಡಿದ್ದಾರೆ. ವಾಣಿಜ್ಯಶಾಸ್ತ್ರ ಕಲಿಯುವ ಆಸಕ್ತಿಯಿತ್ತು. ಆದರೆ, ಮನೆಯವರ ಸಲಹೆಯಂತೆ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡು ನನ್ನ ಕುಟುಂಭದ ಪ್ರೋತ್ಸಾಹ ನನಗೆ ಹೆಚ್ಚು ಸಿಕ್ಕಿದೆ. ಪದವಿ, ಪಿಎಚ್.ಡಿ, ಯುಜಿಸಿ ಫೆಲೋಶಿಪ್ ಪಡೆದು ಖಾಯಂ ಬೋಧಕನಾಗಲು ಸಾಧ್ಯವಾಯಿತು. ವಿದ್ಯಾರ್ಥಿಗಳು ಯಶಸ್ಸು ಕಾಣಲು ಸತತ ಪ್ರಯತ್ನ, ಕಠಿಣ ಪರಿಶ್ರಮ ಮತ್ತು ಕಲಿಕೆಯಲ್ಲಿ ಹೊಸತನ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಹಿರಿಯ ಪ್ರಾಧ್ಯಾಪಕ ಪ್ರೊ. ಕೆ. ಸಿದ್ದಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಶ್ರೀಮತಿ ಜಯಾಂಬಿಕ, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ ಡೀನ್ ಪೆÇ್ರ. ಟಿ. ಶಂಕರಪ್ಪ, ಶ್ರೀಮತಿ ಸುನಿತಾ ಸೌಂದನೆ, ಪೆÇ್ರ. ವಿ. ಟಿ. ಕಾಂಬ್ಳೆ, ಪೆÇ್ರ. ಸಂಗಾಪುರೆ, ಉಪಸ್ಥಿತರಿದ್ದರು. ಸೋಲಾಪುರ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪೆÇ್ರ. ಎನ್.ಎನ್. ಮಲ್ದಾರ್ ಅವರ ಸಂದೇಶವನ್ನು ಡಾ. ವೈಜನಾಥ್ ಎ. ವರ್ಮಾ ವಾಚಿಸಿದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಬೋಧಕೇತರ ಸಿಬ್ಬಂದಿ, ನಿವೃತ್ತ ಸಿಬ್ಬಂದಿಗಳು, ಪ್ರೊ. ಆನಂದ ಸೌಂದಾನೆ ಕುಟುಂಭ ವರ್ಗ, ರಸಾಯನಶಾಸ್ತ್ರ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಮಹಾ ವಿದ್ಯಾಲಯಗಳ ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಹಳೆಯ ವಿದ್ಯಾರ್ಥಿಗಳ ಬಳಗ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ನಗರದಿಂದ ಆಗಮಿಸಿದ ಗಣ್ಯರು ಭಾಗವಹಿಸಿದ್ದರು. ಡಾ. ಪ್ರಭಾಕರ್ ಚೌವಣ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಕು. ಮಹೇಶ್ವರಿ, ಪ್ರಿಯಾಂಕಾ, ಸಫಿಯಾ ಕಾರ್ಯಕ್ರಮ ನಿರ್ವಹಿಸಿದರು. ಕು. ಪೂಜಾ ವಂದಿಸಿದರು.