Home ಜಿಲ್ಲೆ ಅರ್ಹ ವ್ಯಕ್ತಿಯು ಅಧಿಕಾರವಿಲ್ಲದಿದ್ದರೂ ಮಾನ್ಯನೆ:ಬಸವರಾಜ ಜಾಲವಾದಿ

ಅರ್ಹ ವ್ಯಕ್ತಿಯು ಅಧಿಕಾರವಿಲ್ಲದಿದ್ದರೂ ಮಾನ್ಯನೆ:ಬಸವರಾಜ ಜಾಲವಾದಿ

ಕೊಲ್ಹಾರ: ಒಟ್ಟು ಮೂರು ವರ್ಗದ ಜನರನ್ನು ಕಾಣುತ್ತೇವೆ ತೊಂದರೆ ಆತಂಕಗಳ ಭಯದಿಂದಾಗಿ ಕಾರ್ಯವನ್ನೇ ಮಾಡದಿರುವವರು, ಕಾರ್ಯಾರಂಭ ಮಾಡಿದರೂ ಅಡ್ಡಿಯಾದೊಡನೆ ಹೆದರಿ ಕಾರ್ಯವನ್ನು ಅಲ್ಲಿಗೇ ನಿಲ್ಲಿಸುವವರು,ಅದೆಷ್ಟೇ ಅಡ್ಡಿ ಆತಂಕಗಳು,ತೊಂದರೆಗಳು ಬಂದರೂ ಅವುಗಳನ್ನು ಧೈರ್ಯದಿಂದ ಎದುರಿಸಿ ಕಾರ್ಯವನ್ನು ಪೂರ್ತಿಗೊಳಿಸುವವರು ಇದರಲ್ಲಿ ವಿದ್ಯಾರ್ಥಿಗಳಾದವರು ಮೂರನೇ ವರ್ಗದವರಾಗಬೇಕೆಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಮಲಘಾಣದ ಪ್ರಾಚಾರ್ಯ ಬಸವರಾಜ ಜಾಲವಾದಿ ಹೇಳಿದರು.
ಅವರು ಮಂಗಳವಾರ ನೂತನವಾಗಿ ಆರಂಭಗೊಂಡ ಕಾಲೇಜಿನಲಿ ಕ್ರೀಡೆ,ಸಾಂಸ್ಕøತಿಕ ಕಾರ್ಯಕ್ರಮ,ಹಾಗೂ ಸಂಸತ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಅವರು ಮಾತನಾಡುತ್ತಿದ್ದರು.

ಅಧಿಕಾರ ಸಂಪತ್ತು ದೊಡ್ಡದಲ್ಲ ವ್ಯಕ್ತಿಯ ಸಾಧನೆಗಳು ಮಾತ್ರ ಮುಖ್ಯ. ಅಂತಹ ಅರ್ಹ ವ್ಯಕ್ತಿಯು ಯಾವ ಅಧಿಕಾರ ಸ್ಥಾನವಿಲ್ಲದಿದ್ದರೂ ಮಾನ್ಯನೆನಿಸಿಕೊಳ್ಳುತ್ತಾನೆ. ಎಲ್ಲಿದ ನಂದನ? ಎಲ್ಲಿದೆ ಬಂಧನ? ಎಲ್ಲಾ ಇವೆ ಈ ನಮ್ಮೊಳಗೆ….
ಒಳಗಿನ ತಿಳಿಯಲು ಕಲಕದೆ ಹೋದರೆ ಅಮೃತದಾ ಸವಿ ಇದೆ ನಾಲಗೆಗೆ ಎಂದು ಕವಿ ಜಿ.ಎಸ್ ಶಿವರುದ್ರಪ್ಪನವರ ಕವನದ ಸಾಲಗಳನು ಉಲ್ಲೇಖಿಸಿ ಉಪದೇಶಿಸಿದರು.

ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಗ್ರಾಮದ ಗಣ್ಯರಾದ ರಮೇಶ ನಿಂಗನೂರ ಸ್ವಂತ ಊರಲ್ಲಿ ವಾಣಿಜ್ಯ ವಿಭಾಗ ಕಾಲೇಜು ಆರಂಭಗೊಂಡಿದೆ ಪರ ಊರಿಗೆ ಹೋಗಿ ಮೋಟಾರು ಕಾಯುವ ಪ್ರಮೇಯವೇ ಇಲ್ಲ.ವಾಣಿಜ್ಯ ವಿಭಾಗವಿರಲಿ ಯಾವುದೇ ವಿಭಾಗವಿದ್ದರೂ ಓದುವ ಮನಸ್ಥಿತಿ ಮುಖ್ಯ. ಕಲಾ ವಿಜ್ಞಾನ ವಾಣಿಜ್ಯ ಯಾವುದೇ ವಿಭಾಗವಿದ್ದರೂ ಆಸಕ್ತಿ ಅಭಿರುಚಿಯಿಂದ ಗಮನ ಕೊಟ್ಟು ಓದಿನಲ್ಲಿ ತಲ್ಲಿನರಾಗಬೇಕೆಂದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಣ್ಣ ನಾವಿ ಮಾತನಾಡಿ, ಉನ್ನತೀಕರಿಸಿದ ಕಾಲೇಜು ನಮ್ಮದಾಗಿರುವುದರಿಂದ ನಾವೆಲ್ಲರೂ ಇನ್ನು ಮುಂದೆ ಪ್ರಾಚಾರ್ಯರ ಆಧೀನದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಿಂದಾಗಿ ನಾವೆಲ್ಲರೂ ಅನಿವಾರ್ಯವಾಗಿ ಹೊಂದಾಣಿಕೆ ಮನೋಭಾವ ಬೆಳೆಸಿಕೊಳ್ಳಬೇಕಾಗುತ್ತದೆ. ಗ್ರಾಮದ ಗಣ್ಯರ ಸಹಕಾರ ಪಡೆದು ಕುಡಿಯುವ ನೀರು ಹಾಗೂ ಶೌಚಾಲಯದ ರಿಪೇರಿಗಾಗಿ ಪ್ರಾಚಾರ್ಯರು ಹಾಜರಾದಂದಿನಿಂದ ಪ್ರಯತ್ನಿಸುತ್ತಿರುವುದು ಹಾಗೂ ಅತ್ಯಂತ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವುದು ನಮಗೆಲ್ಲಾ ಮಾದರಿಎಂದರು.
ಸುರೇಶ್ ವಠಾರ ಹಾಗೂ ಅಶೋಕ ನಿಂಗನೂರ ಕಾರ್ಯಕ್ರಮ ಉದ್ಘಾಟಿಸಿದರು.

ಕಾಲೇಜು ವಿದ್ಯಾರ್ಥಿಗಳ ಶುಲ್ಕ, ವೈಟ್ ಬೋರ್ಡ್ ಹಾಗೂ ಡಯಾಸ್ ಕಾಣಿಕೆಯಾಗಿ ಕೊಟ್ಟ ಶ್ರೀ ಸುರೇಶ್ ವಠಾರ,ಶ್ರೀ ಅಶೋಕ ನಿಂಗನೂರ,ರಮೇಶ ನಿಂಗನೂರ ಮುಂತಾದವರನ್ನು ಸತ್ಕರಿಸಲಾಯಿತು.
ವೇದಿಕೆಯ ಮೇಲೆ ಸುರೇಶ ವಠಾರ, ಅಶೋಕ ನಿಂಗನೂರ, ರಮೇಶ ನಿಂಗನೂರ,ಪ್ರೌಢಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಸವರಾಜ ಕೋರಿ, ವಿಠಲ ಮಾದರ, ಶಿವಾನಂದ ಅಮಲಜೇರಿ, ಪಾಂಡುರಂಗ ಕರಾಬಿ, ಮಂಜುಳಾ ಚಂದ್ರಪ್ಪಗೋಳ, ನಿಸರ್ಗ ಖಾಸ್ತರ್, ಮುಂತಾದವರು ಹಾಜರಿದ್ದರು.ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ನೀಡುವುದರ ಮೂಲಕ ಹೂ ಹಾಕಿ ಹಾರೈಸಿದರು.
ಲಕ್ಷ್ಮಿ, ರಶ್ಮಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು.ಅಕ್ಷತಾ, ಸೌಮ್ಯ ಸುಧಾ ಹಾಗೂ ರೇಣುಕಾ ಸ್ವಾಗತ ಗೀತೆ ಹಾಡಿದರು. ಅತಿಥಿ ಉಪನ್ಯಾಸಕ ಯಲ್ಲಪ್ಪ ಹಳಬರು ಕಾರ್ಯಕ್ರಮ ನಿರ್ವಹಿಸಿದರು ದುರ್ಗೇಶ್ ಮಲಗಾಣ ಸ್ವಾಗತ ಮತ್ತು ಪ್ರಾಸ್ತಾವಿಕ ಮಾತಗಳನ್ನಾಡಿದರು.