
ಕೆಆರ್ ಪುರ, ನ.೧೯- ತಾಂತ್ರಿಕ ಸಮಸ್ಯೆಯಿಂದ ಕೂಡಿದ್ದ ಗೆದ್ದಲಹಳ್ಳಿ ರೈಲ್ವೆ ವೆಂಟ್ ಅನ್ನು ಉದ್ಘಾಟನೆ ಮಾಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೂರು ಬಾರಿ ಇಲ್ಲಿಗೆ ಭೇಟಿ ಕೊಟಿದ್ವಿ, ಸಿದ್ದರಾಮಯ್ಯ ಅವರೊಂದಿಗೆ ಹಾಗೂ ನಾನು ಸಪರೇಟ್ ಆಗಿ ಎರಡು ಬಾರಿ ಭೇಟಿ ಕೊಟ್ಟು ಇಲ್ಲಿನ ಅವ್ಯವಸ್ಥೆ ಕಂಡು ಅನುದಾನ ನೀಡಿ ಕೂಡಲೇ ಕೆಲಸ ಆರಂಭಿಸಲು ತಿಳಿಸಿದ್ದೆ ಎಂದರು.
ಟೆಕ್ನಿಕಲ್ ಅಗಿ ಸಮಸ್ಯೆ ಇರುವ ಜಾಗ ಇದಾಗಿದ್ದು ಹೆಬ್ಬಾಳದಿಂದ ನೀರು ಇಲ್ಲಿಗೆ ಹರಿದು ಬರುತ್ತದೆ, ಮಳೆ ಬಂದಾಗ ೨೦ ಅಡಿಯಷ್ಟು ನೀರು ಹರಿಯುತ್ತದೆ. ರೈಲ್ವೆ ವೆಂಟ್ ಅನ್ನು ಉದ್ಘಾಟಿಸುವ ಮೂಲಕ ಈ ಭಾಗದ ಜನರ ಸಮಸ್ಯೆ ಈಡೇರಿಸಲಾಗಿದೆ, ರೈಲ್ವೆ ಬ್ರಿಡ್ಜ್ ಅಗಲೀಕರಣಕ್ಕೂ ಸಹ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
೨೦ ಕಿ.ಮೀ ಮೇಲ್ ಸೇತುವೆ
ಈ ಭಾಗದಲ್ಲಿ ಟ್ರಾಫಿಕ್ ನಿಯಂತ್ರಣ ಮಾಡುವ ಉದ್ದೇಶದಿಂದ ಏರ್ಪೋರ್ಟ್ ಗೆ ತಲುಪಲು ಸುಮಾರು ೨೦ ಕಿ.ಮೀ ಮೇಲ್ ಸೇತುವೆ ಮಾಡೋದಕ್ಕೆ ತೀರ್ಮಾನ ಮಾಡಿದ್ದೀವಿ, ಹೆಬ್ಬಾಳದಿಂದ ಏರ್ ಪೋರ್ಟ್ ವರೆಗಿನ ಸೇತುವೆ ಮಾದರಿ ಇಲ್ಲಿ ನಿರ್ಮಾಣ ಮಾಡುತ್ತೇವೆ ಇದರಿಂದ ಟ್ರಾಫಿಕ್ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ದಾಖಲೆಗಳನ್ನು ಸರಿಪಡಿಸುವ ಕೆಲಸ ಮಾಡಿ ಆಸ್ತಿ ಭದ್ರ ಮಾಡಿಕೊಳ್ಳಿ , ಸ್ಥಳೀಯ ಶಾಸಕ ಬೈರತಿ ಬಸವರಾಜ ಅವರು ಅಭಿವೃದ್ಧಿ ಗೆ ಸಹಕಾರ ನೀಡಿದ್ದಾರೆ ಎಂದರು.
ಸಚಿವ ಕೃಷ್ಣಬೈರೇಗೌಡ ಮಾತನಾಡಿ, ಕಳೆದ ಮೂರು ವರ್ಷದಲ್ಲಿ ಈ ಕಾಮಗಾರಿಗೆ ಬೇಕಾದ ಹಣ ಡಿ.ಕೆ. ಶಿವಕುಮಾರ್ ಬಿಡುಗಡೆ ಮಾಡಿ ಕೆಲಸ ಮಾಡಿಕೊಟ್ಟಿದ್ದಾರೆ. ಇದಕ್ಕೆ ಮಾಜಿ ಸಚಿವರು, ಹಾಲಿ ಶಾಸಕರಾದ ಬೈರತಿ ಬಸವರಾಜ ಸಹ ಸಹಕಾರ ನೀಡಿದ್ದಾರೆಎಂದು ಹೇಳಿದರು.
ಶಾಸಕ ಬೈರತಿ ಬಸವರಾಜ ಮಾತನಾಡಿ, ಜನರ ಸಮಸ್ಯೆ ಈಡೇರಲು, ಅಭಿವೃದ್ಧಿ ವಿಚಾರದಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ, ಇಲ್ಲಿನ ಜನರ ಕಷ್ಟ ನಿವಾರಣೆಯಾದರೆ ಸಾಕು ಎಂದು ಹೇಳಿದರು.
ಬೊಮ್ಮಾಯಿ ಅವರು ಸರ್ಕಾರದಲ್ಲಿ ಈ ರೈಲ್ವೆ ವೆಂಟ್ ಕಾಮಾಗರಿಗೆ ಅನುಮೋದನೆ ಮಾಡಿ ಟೆಂಡರ್ ಆಗಿ ಅಪ್ರುವಲ್ ಆಗಿತ್ತು.ಸಿಎಂ ಡಿ.ಕೆ.ಶಿವಕುಮಾರ್ ರವರು ಬಂದು ಹಣ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿ ಯಾರೇ ಮಾಡಿದರೂ ಜನರ ಸಮಸ್ಯೆ ಆಲಿಸುವುದು ಜನಪ್ರತಿನಿದಿಯ ಕರ್ತವ್ಯ ಆ ಕೆಲಸವನ್ನು ಚಾಚೂ ತಪ್ಪದೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಿ.ಕೆ.ಮೋಹನ್, ಮಂಡಲಅಧ್ಯಕ್ಷ ಮುನೇಗೌಡ, ಹೊರಮಾವು ವಿಡಿಎಸ್ ಪ್ರದೀಪ್, ಸಿ.ವೆಂಕಟೇಶ್, ಅಗರ ಪ್ರಕಾಶ್ ,ಸುರೇಶ್, ಬಚ್ಚೇಗೌಡ, ಪ್ರಸನ್ನ ಮತ್ತಿತರರಿದ್ದರು.





















