
ಯಡ್ರಾಮಿ:ನಾಡು ಅನ್ನ ಜ್ಞಾನ ದಾಸೋಹ ನಾಡಾಗಿದ್ದು ಈ ನಾಡಿನಲ್ಲಿ ನ್ಯಾಯ ದಾಸೋಹ ಮಾಡುವ ಉದ್ದೇಶ ದಿಂದ ಈ ಹೊಸ ತಾಲೂಕು ಆದ ಯಡ್ರಾಮಿಯಲ್ಲಿ ಸಂಚಾರಿ ನ್ಯಾಯಾಲಯ ಪ್ರಾರಂಭ ಮಾಡಲಾಗಿದ್ದು.
ಯಡ್ರಾಮಿ ಪಟ್ಟಣದ ಯತ್ನಾಳ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬಾಡಿಗೆ ನ್ಯಾಯಾಲಯದ ಕಚೇರಿ ಉದ್ಘಾಟನೆ ಮಾಡಿ ಜನನಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಉದೇಶಿಸಿ ಮಾನ್ಯ ಶ್ರೀ ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಮತ್ತು ಕಲಬುರಗಿ ಜಿಲ್ಲೆಯ ಆಡಳಿತ ನ್ಯಾಯಾಧೀಶರು ಮಾತನಾಡಿದರು.
ಈ ಭಾಗದಿಂದ ಕಲಬುರಗಿ ಸುಮಾರು 80 ಕಿ.ಲೋ.ಇರುವದರಿಂದ ಈ ಭಾಗದ ಜನರಿಗೆ ಅನುಕೂಲ ಆಗಬೇಕು ಎಂದು ಸಂಚಾರಿ ನ್ಯಾಯಾಲಯ ಪ್ರಾರಂಭ ಮಾಡಿದ್ದು.ಇಲ್ಲಿ ಮೂರು ದಿನ ಹಾಗೂ ಜೇವರ್ಗಿಯಲ್ಲಿ ಮೂರು ದಿನ ನ್ಯಾಯಾಲಯ ಕಚೇರಿ ನಡೆಯುತ್ತದೆ.
ಆದರೆ ಸಂಪೂರ್ಣ ತಾಲೂಕು ನ್ಯಾಯಾಲಯ ಆಗಬೇಕು ಅಂದ್ರೆ ಸರ್ಕಾರ ಮನಸು ಮಾಡಬೇಕು.ಆಗ ಮಾತ್ರ ಸಿಬ್ಬಂದಿವರ್ಗ ಹಾಗೂ ನ್ಯಾಯಾಲಯ ಮಾಡಲು ಸಾಧ್ಯಾವಾಗುವುದು ಎಂದು ಹೇಳಿದರು.
ಅಜಯಸಿಂಗ್ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಮಾತನಾಡಿ.ಕಲಬುರಗಿಯಲ್ಲಿ ಹೈ ಕೋರ್ಟ ಮಾಡುವಲ್ಲಿ ಮಾನ್ಯ ಧರ್ಮಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಪಾತ್ರ ಮುಖ್ಯವಾಗಿದ್ದು.
ಅದೇ ರೀತಿಯಲ್ಲಿ ನಾನು ಕೂಡ ಈಗಾಗಲೇ ನ್ಯಾಯಾಲಯ ಕಚೇರಿಯ ಸಲವಾಗಿ ನಾಲ್ಕು ಎಕರೆ ಜಮೀನು ಮಂಜುರಾತಿ ಮಾಡಿಕೊಡಲಾಗುವುದು. ಮುಂದಿನ ದಿನಮಾನದಲ್ಲಿ ಕಚೇರಿಗೆ ಲೋಕೋಪಯೋಗಿ ಹಾಗೂ ಕೆ.ಕೆ.ಆರ್.ಡಿ.ಯಿಂದ ಹಣ ಒದಗಿಸಿಕೊಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮಿನಾರಾಯಣ, ಯಡ್ರಾಮಿ ವಕೀಲರ ಸಂಘದ ಅಧ್ಯಕ್ಷ ಪಿ.ಎಸ್. ಮಾಲಿಪಾಟೀಲ್ ಬಾಲಬಟ್ಟಿ, ಜೇವರ್ಗಿ ವಕೀಲರ ಸಂಘದ ಅಧ್ಯಕ್ಷ ಎಸ್.ಎ.ಪಾಟೀಲ್ ನರಿಬೋಳ, ಯಡ್ರಾಮಿ ವಕೀಲರ ಸಂಘದ ಕಾರ್ಯದರ್ಶಿ ಎಂ.ಎಸ್ ಮಂಡೇವಾಳ ಸೇರಿ ನ್ಯಾಯಾಂಗ ಅಧಿಕಾರಿಗಳು, ವಕೀಲರು ಹಾಗೂ ಗಣ್ಯರು ಭಾಗವಹಿಸಿದರು.





















