Home ಜಿಲ್ಲೆ ಕಲಬುರಗಿ ಮಕ್ಕಳ ವಿಜ್ಞಾನ ಕಾಂಗ್ರೆಸ್‍ಗೆ ಎಸ್‍ಆರ್‍ಎನ್ ಮೆಹ್ತಾಶಾಲೆಯ 4 ವಿದ್ಯಾರ್ಥಿಗಳ ಆಯ್ಕೆ

ಮಕ್ಕಳ ವಿಜ್ಞಾನ ಕಾಂಗ್ರೆಸ್‍ಗೆ ಎಸ್‍ಆರ್‍ಎನ್ ಮೆಹ್ತಾಶಾಲೆಯ 4 ವಿದ್ಯಾರ್ಥಿಗಳ ಆಯ್ಕೆ

ಕಲಬುರಗಿ,ನ.14: ನಗರದ ಎಸ್‍ಆರ್‍ಎನ್. ಮೆಹ್ತಾ ಸಿಬಿಎಸ್‍ಇ ಶಾಲೆಯ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಕಾಂಗ್ರೆಸ್‍ಗೆ ಆಯ್ಕೆಯಾಗಿದ್ದಾರೆ. ಈ ಜಿಲ್ಲಾ ಮಟ್ಟದ ಸ್ಪರ್ಧೆಯು ನವೆಂಬರ್ 12 ರಂದು ಕಲಬುರಗಿಯ ಎಸ್.ಜಿ.ಎನ್ ಕಾಲೇಜಿನಲ್ಲಿ ನಡೆಯಿತು.
9ನೇ ತರಗತಿಯ ಚಂದ್ರವೀರ್ ದತ್ ಮತ್ತು ಅಂಶಿಕಾ ಪಾಟೀಲ್, ಹಾಗೂ 7ನೇ ತರಗತಿಯ ಗೋಕುಲ್ ಮತ್ತು ರಚಿತ್ ಆಯ್ಕೆಯಾದ ವಿದ್ಯಾರ್ಥಿಗಳು. ಈ ವಿದ್ಯಾರ್ಥಿಗಳಿಗೆ ಶಾಲೆಯ ಶಿಕ್ಷಕಿಯಾದ ಅಂಬಿಕಾ ಕುಲಕರ್ಣಿ ಅವರು ಮಾರ್ಗದರ್ಶನ ಮತ್ತು ಪೆÇ್ರೀತ್ಸಾಹ ನೀಡಿದ್ದು, ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಅವರ ಪರಿಶ್ರಮ ಹಾಗೂ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂತಸ ವ್ಯಕ್ತಪಡಿಸಿದ ಶಾಲೆಯ ಪ್ರಾಂಶುಪಾಲ ರಾಜಶೇಖರ ರೆಡ್ಡಿ ಅವರು ವಿದ್ಯಾರ್ಥಿಗಳು ಹಾಗೂ ಮಾರ್ಗದರ್ಶಕ ಶಿಕ್ಷಕಿ ಅವರನ್ನು ಅಭಿನಂದಿಸಿದರು. ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಈ ಸಾಧನೆಗಾಗಿ ವಿದ್ಯಾರ್ಥಿಗಳಿಗೆ ಮತ್ತು ಮಾರ್ಗದರ್ಶಕ ಶಿಕ್ಷಕಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂಬರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಕಾಂಗ್ರೆಸ್‍ನಲ್ಲಿ ಯಶಸ್ಸು ದೊರೆಯಲೆಂದು ಶುಭ ಹಾರೈಸಿದ್ದಾರೆ.