
ಔರಾದ್ : ತಾಲೂಕಿನ ಕೊಳ್ಳೂರು ಗ್ರಾಮದ ಹೊರ ವಲಯದಲ್ಲಿರುವ ಭವಾನಿ ಮಂದಿರದಲ್ಲಿ ಪೂಜೆ ಸಲ್ಲಿಸುವುದರ ಮುಖಾಂತರ ಗ್ರಾಮಸ್ಥರು ವಿಜೃಂಭಣೆಯಿAದ ದಸರಾ ಆಚರಣೆ ಮಾಡಿದರು.
ಗ್ರಾಮದಲ್ಲಿ ೧೦ ದಿನ ೯ ದಿನ ೫ ದಿನಗಳ ಘಟ ಸ್ಥಾಪನೆ ಮುಖಾಂತರ ನವರಾತ್ರಿಯನ್ನು ಭಕ್ತಿ ವೈಭವದಿಂದ ಗ್ರಾಮಸ್ಥರು ಆಚರಿಸಿದರು. ಪ್ರತಿ ನಿತ್ಯ ದೇವಿಗೆ ವಿಶೇಷ ಪೂಜೆ, ಮಂಗಳಾರತಿ ಸೇರಿದಂತೆ ದೇವಿ ಜಾಗರಣೆ ಮಾಡಿದ ಗ್ರಾಮಸ್ಥರು ಮಂಗಳವಾರ ಸಾಯಂಕಾಲ ಗ್ರಾಮದ ಹನುಮಾನ ಮಂದಿರ ಹತ್ತಿರ ಹಿರಿಯರು, ಯುವಕರು ಎನ್ನದೆ ಎಲ್ಲರೂ ಸೇರಿ ಗ್ರಾಮದ ಹೊರವಲಯದಲ್ಲಿರುವ ಅಂಬಾ ಭವಾನಿ ಮಂದಿರಕ್ಕೆ ತೆರಳಿ ವಿಷೆಯ ಪೂಜೆಯನ್ನು ಸಲ್ಲಿಸಿ ಬನ್ನಿ ಮುಡಿಯೋ ಮುಖಾಂತರ ದಸರಾ ಆಚರಿಸಿದರು.
ಬನ್ನಿ ಮುಡಿದ ನಂತರ ಪರಸ್ಪರ ಬನ್ನಿ ನೀಡುವ ಮೂಲಕ ಹಬ್ಬದ ಶುಭ ಕೋರಿದರು. ಯುವಕರು ಸಿಮೊಲಂಗನ್ ಆಡಿ ಮನೆಗೆ ತೆರಳಿ ದೇವರ ಜಗಲಿ ಮೇಲೆ ಕೂರಿಸಿದ ಘಟ್ಟಕ್ಕೆ ಬನ್ನಿ ಅರ್ಪಿಸಿ ಹಿರಿಯರಿಗೆ ನೀಡಿ ಆಶೀರ್ವಾದ ಪಡೆದುಕೊಂಡರು. ಇಡೀ ಗ್ರಾಮವೇ ಹಬ್ಬದ ಉತ್ಸಾಹದಲ್ಲಿ ತುಂಬಿ ತುಳುಕಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚಂದ್ರಕಾAತ ಪಾಟೀಲ, ಗುರುನಾಥ ಕೊಳ್ಳುರ, ಸಾಗರ ಪಾಟೀಲ, ಅವಿನಾಶ ಪಾಟೀಲ, ಸೂರ್ಯಕಾಂತ ಮಜ್ಗೆ, ಸೇರಿದಂತೆ ಹಿರಿಯರು ಉಪಸ್ಥಿತರಿದ್ದರು.ಸಹಬಾಳ್ವೆ ಸಂಸ್ಥೆ ಸದಸ್ಯರಿಂದ ಪ್ರತಿ ವರ್ಷದಂತೆ ಈ ವರ್ಷವೂ ಒಂದೇ ತೆರನಾದ ಬಟ್ಟೆಯನ್ನು ಹಾಕುವುದರ ಮುಖಾಂತರ ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರಗನ್ನು ನೀಡಿದರು.























