
ಮುದ್ದೇಬಿಹಾಳ: ಮೈಸೂರು ಕರ್ನಾಟಕ ಕಲಾವಿದರ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ಮೈಸೂರು ಸಿರಿ ದಸರಾ ಸಾಂಸ್ಕöÈತಿಕ ಉತ್ಸವದಲ್ಲಿ ನಾಲತವಾಡದ ಭರತನಾಟ್ಯ ಶಿಕ್ಷಕ ಡಾ. ವೀರೇಶ್ ಸಂಗಪ್ಪ ಬಂಗಾರಗುAಡ ಅವರಿಗೆ ಶ್ರೀ ಚಾಮುಂಡೇಶ್ವರಿ ಸದ್ಭಾವನಾ ಹಾಗೂ ನಾಡಪ್ರಭು ಕೆಂಪೇಗೌಡ ರಾಷ್ಟçಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಅ.೧೮ ರವಿವಾರರಂದು ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ತಿನ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ನಡೆದ ಈ ಸಾಂಸ್ಕöÈತಿಕ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಭರತನಾಟ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಿರುವ ಡಾ. ವೀರೇಶ್ ಸಂಗಪ್ಪ ಬಂಗಾರಗುAಡ ಅವರ ಕಲಾ ಸೇವೆಯನ್ನು ಗುರುತಿಸಿ ಈ ಗೌರವವನ್ನು ನೀಡಲಾಗಿದೆ.
ಈ ದಸರಾ ಸಾಂಸ್ಕೃತಿಕ ಉತ್ಸವದ ಕಾರ್ಯಕ್ರಮವನ್ನು ತೇಜೋಮಯ ಗದ್ದಿ ಉದ್ಘಾಟಿಸಿದರು. ಸಮ್ಮೇಳನದ ಅಧ್ಯಕ್ಷತೆಯನ್ನು ಟಿ. ತ್ಯಾಗರಾಜು ವಹಿಸಿದ್ದರು. ಮೈಸೂರು ಕರ್ನಾಟಕ ಕಲಾವಿದರ ರಕ್ಷಣಾ ವೇದಿಕೆಯ ಸಂಸ್ಥಾಪಕ ಸುರೇಶ್ ಅವರ ನೇತೃತ್ವದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು, ಅತಿಥಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರು ಉಪಸ್ಥಿತರಿದ್ದರು.
ಪ್ರಶಸ್ತಿ ಪುರಸ್ಕöÈತರಾದ ಡಾ. ವೀರೇಶ್ ಸಂಗಪ್ಪ ಬಂಗಾರಗುAಡ ಅವರಿಗೆ ಮುದ್ದೇಬಿಹಾಳದ ಶ್ರೀ ಖಾಸ್ಗತೇಶ್ವರ ಭರತನಾಟ್ಯ ತರಬೇತಿ ಕೇಂದ್ರದ ಅಧ್ಯಕ್ಷರಾದ ನೀಲಮ್ಮತಾಯಿ ವಿರಕ್ತಮಠ, ಹಾಗೂ ನಾಲತವಾಡದ ಸರೋಜಿನಿ ನಾಟ್ಯಕಲಾ ಅಕಾಡೆಮಿಯ ಅಧ್ಯಕ್ಷರಾದ ವೀರೇಂದ್ರ ಪಾಟೀಲ್, ಮುಖ್ಯ ಗುರುಗಳಾದ ಸರೋಜಿನಿ ಪಾಟೀಲ್, ಚಿದಾನಂದ ಕೊಳಾರಿ, ಜಕಾತಿ, ಗೊಳಸಂಗಿ ಗುರುಮಾತೆ, ಮಹಾದೇವಿ ಸಜ್ಜನ್ ಪಟ್ಟಣಶೆಟ್ಟಿ ಗುರುಮಾತೆ ಹಾಗೂ ಕೆಸಾಪುರದ ಸಿದ್ದಾರ್ಥ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷರಾದ ರಾಮಣ್ಣ ಖಾನಾಪುರ, ಶ್ರೀಮತಿ ಸರಸ್ವತಿ ಖಾನಾಪುರ ಹಾಗೂ ಶಾಲೆಯ ಆಡಳಿತಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಸೇರಿದಂತೆ ನೃತ್ಯ ತರಬೇತಿ ಪಡೆಯುತ್ತಿರುವ ಮಕ್ಕಳು ಹಾಗೂ ಅವರ ಪೋಷಕರು ಹಾಗೂ ಗೆಳೆಯರ ಬಳಗದ ಪ್ರವೀಣ್ ಬಾಪುಗೌಡ ಪಾಟೀಲ್, ಮಲ್ಲಿಕಾರ್ಜುನ ಬಿರಾದಾರ ಶಿಕ್ಷಕ ವಿರೇಶ ಬಂಗಾರಗುAಡ ಅವರಿಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ನಾಲತವಾಡದ ಕಲಾವಿದರೊಬ್ಬರು ಮೈಸೂರಿನ ದಸರಾ ಸಾಂಸ್ಕöÈತಿಕ ವೇದಿಕೆಯಲ್ಲಿ ರಾಷ್ಟçಮಟ್ಟದ ಪ್ರಶಸ್ತಿಗಳನ್ನು ಸ್ವೀಕರಿಸಿರುವುದು ಸ್ಥಳೀಯ ಕಲಾವಲಯದಲ್ಲಿ ಸಂತಸ ಮೂಡಿಸಿದ್ದು, ಅವರ ಮುಂದಿನ ಕಲಾ ಪಯಣಕ್ಕೆ ಎಲ್ಲರೂ ಶುಭ ಹಾರೈಸಿದ್ದಾರೆ.























