Home ಜಿಲ್ಲೆ ಅಬ್ಬೆತುಮಕೂರು ಮಠದಲ್ಲಿ ನವರಾತ್ರಿ ಉತ್ಸವ: ಜಗನ್ಮಾತೆ ಭಗಲಾಂಬಿಕೆ ದೇವಿ ದರ್ಶನ ಪಡೆದ ಮಹೇಶರಡ್ಡಿ ಮುದ್ನಾಳ

ಅಬ್ಬೆತುಮಕೂರು ಮಠದಲ್ಲಿ ನವರಾತ್ರಿ ಉತ್ಸವ: ಜಗನ್ಮಾತೆ ಭಗಲಾಂಬಿಕೆ ದೇವಿ ದರ್ಶನ ಪಡೆದ ಮಹೇಶರಡ್ಡಿ ಮುದ್ನಾಳ

ಯಾದಗಿರಿ: ದಸರಾ ಹಬ್ಬದ ನವರಾತ್ರಿ ಉತ್ಸವದ ಅಂಗವಾಗಿ ಅಕ್ಟೋಬರ್ ೧೯ರಂದು ಸುಕ್ಷೇತ್ರ ಅಬ್ಬೆತುಮಕೂರಿನ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದಲ್ಲಿ ಆಯೋಜಿಸಲಾಗಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಅವರು ಪಾಲ್ಗೊಂಡು ಜಗನ್ಮಾತೆ ಭಗಲಾಂಬಿಕೆ ದೇವಿಯ ದರ್ಶನ ಪಡೆದು ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.
ಮಠದ ಜಗನ್ಮಾತೆ ಭಗಲಾಂಬಿಕೆ ದೇವಾಲಯದಲ್ಲಿ ನಡೆದ ದೇವಿ ಪಾರಾಯಣ, ೆÃವಿ ಪುರಾಣ ಹಾಗೂ ಪಂಚಮಹಾ ಮಂಗಳಾರತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಿ ಭಕ್ತಿ ಸಮರ್ಪಿಸಿದರು.
ಬಳಿಕ ಮಠಕ್ಕೆ ಭೇಟಿ ನೀಡಿದ ಮಹೇಶರಡ್ಡಿ ಮುದ್ನಾಳ ಅವರು ವಿಶ್ವಾರಾಧ್ಯರ ಗದ್ದುಗೆ ದರ್ಶನ ಪಡೆದು, ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ. ಗಂಗಾಧರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಕಿರಿಯ ಪೂಜ್ಯರಾದ ಶ್ರೀ ಶಿವಶೇಖರ ಮಹಾಸ್ವಾಮಿಗಳ ದರ್ಶನ ಪಡೆದು ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶರಣಬೋಪಾಲರೆಡ್ಡಿ ಗೋಸ್ವಾಮಿ, ರುದ್ರಗೌಡ ಪಾಟೀಲ, ವೆಂಕಟರೆಡ್ಡಿ ಮಾಲಿ ಪಾಟೀಲ ಅಬ್ಬೆತುಮಕೂರು, ವಿಲಾಸ್ ಪಾಟೀಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ನಾಗರಾಜಗೌಡ ಮಾನಸಗಲ್, ರಮೇಶ ದೊಡ್ಡಮನಿ, ಲಕ್ಷ್ಮೀಪುತ್ರ ಮಾಲಿ ಪಾಟೀಲ, ಶರಣಗೌಡ ಕ್ಯಾತನಾಳ, ನಾನು ರಾಠೋಡ, ಶ್ರೀನಾಥ್ ಜೈನ್, ಬಸಣ್ಣಗೌಡ ನಾಯ್ಕಲ್, ಮಲ್ಲು ಸ್ವಾಮಿ ಗುರಸಣಗಿ, ಸಿದ್ದು ಪೂಜಾರಿ, ಸೂಗುರೇಶ ಚಾಮಾ, ಶಿವು ಗುತ್ತೇದಾರ, ವೀರೇಶ ರಾಮಸಮುದ್ರ, ಪವನ್ ಮಡಿವಾಳ, ಲಕ್ಷ್ಮಣ ಹಾಗೂ ಮಾರುತಿ ಮುದ್ನಾಳ ಸೇರಿದಂತೆ ಅನೇಕ ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.