Home ಮುಖಪುಟ ಸುದ್ದಿ ದಸರಾ ನಂತರ ನಿಗಮ ಮಂಡಳಿ ನೇಮಕಾತಿ ಪೂರ್ಣ

ದಸರಾ ನಂತರ ನಿಗಮ ಮಂಡಳಿ ನೇಮಕಾತಿ ಪೂರ್ಣ

ಬೆಂಗಳೂರು: ಅ. ೧೯ ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಈಗಾಗಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಅವರು ಕೆಲವರ ಹೆಸರನ್ನು ಅಂತಿಮ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಿಗಮ ಮಂಡಳಿ ನೇಮಕ ವಿಚಾರದಲ್ಲಿ ಸುರ್ಜೇವಾಲಾ ಈಗಾಗಲೇ ಕೆಲವರನ್ನು ಕ್ಲಿಯರ್ ಮಾಡಿದ್ದಾರೆ. ಆದಷ್ಟು ಬೇಗ ಅದು ಘೋಷಣೆಯಾಗಬೇಕು. ಮೂರು-ನಾಲ್ಕು ದಿನಗಳಲ್ಲಿ ಕೋಡ್ ಆಫ್ ಕಂಡಕ್ಟ್ ಮುಗಿಯಲಿದ್ದು, ೨೩ನೇ ತಾರೀಖಿನ ಬಳಿಕ ಈ ತಿಂಗಳ ಒಳಗಾಗಿಯೇ ಘೋಷಣೆಯಾಗಲಿದೆ ಎಂಬ ಭರವಸೆ ನನಗಿದೆ” ಎಂದರು.

ಕಾರ್ಯಕರ್ತರಿಗೆ ಆದ್ಯತೆ: ಜಿಲ್ಲಾವಾರು, ಕ್ಷೇತ್ರವಾರು ಘೋಷಣೆ*

ನಿಗಮ ಮಂಡಳಿಗಳಲ್ಲಿ ಸಾಕಷ್ಟು ನಿರ್ದೇಶಕ ಸದಸ್ಯ ಸ್ಥಾನಗಳು ಮತ್ತು ನಿರ್ದೇಶಕ ಸ್ಥಾನಗಳು ಖಾಲಿ ಉಳಿದಿವೆ. ಅವುಗಳನ್ನು ಜಿಲ್ಲಾವಾರು, ಕ್ಷೇತ್ರವಾರು ಕಾರ್ಯಕರ್ತರಿಗೆ ನೀಡಲಾಗುವುದು ೨೩ರ ನಂತರ ಘೋಷಣೆ ಮಾಡುವ ಭರವಸೆ ಇದೆ ಎಂದು ಅವರು ಹೇಳಿದರು.

ಮಹಿಳಾ ಘಟಕದ ಅಧ್ಯಕ್ಷೆ ರಾಜೀನಾಮೆ ಪ್ರಕ್ರಿಯೆ

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸೌಮ್ಯ ರೆಡ್ಡಿ ಅವರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, “ಅವರು ಬಹಳ ಹಿಂದೆಯೇ ಹೇಳಿದ್ದರು. ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಮಾಡಲು ಸಮಯ ಸಿಗುತ್ತಿಲ್ಲ ಎಂದು ನನಗೆ ತಿಳಿಸಿದ್ದರು. ಹಾಗಾಗಿ ನಾನು ಆ ಪದವಿಗೆ ರಾಜೀನಾಮೆ ನೀಡುತ್ತೇನೆ ಎಂದು ಮೊದಲೇ ಹೇಳಿದ್ದರು. ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ ವತಿಯಿಂದ ಹೊಸ ವ್ಯಕ್ತಿಯನ್ನು ಹುಡುಕುವ ಪ್ರಕ್ರಿಯೆ ನಡೆದಿದೆ. ಮುಂದೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ” ಎಂದು ಸ್ಪಷ್ಟಪಡಿಸಿದರು.ವಿಧಾನಪರಿಷತ್ ಚುನಾವಣೆ ವಿಚಾರ

ಮುಂದಿನ ದಿಕ್ಸೂಚಿ
ವಿಧಾನ ಪರಿಷತ್ತಿಗೆ ಶಿಕ್ಷಕರಾಗೋ ಪದವೀಧರ ಕ್ಷೇತ್ರದಿಂದ ನಡೆದಿರುವ ಚುನಾವಣಾ ಫಲಿತಾಂಶಗಳು ಮುಂದಿನ ಚುನಾವಣೆಗೂ ದಿಕ್ಸೂಚಿ ಆಗಿದೆ
ನಮಗಿರುವ ವರದಿಯ ಪ್ರಕಾರ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು
ಒಂದು ಕಾಲದಲ್ಲಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಟ್ಟು ಬೇರೆಯವರೇ ಪ್ರಾಬಲ್ಯವನ್ನು ಸಾಧಿಸಿದರು
ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಅವರ ಮುಖವಾಡ ಕಳಚಿ ಬಿದ್ದಿದೆ
ಆದ್ದರಿಂದ ಪದವೀಧರರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇರತಕ್ಕಂತಹ ಶಿಕ್ಷಕರು
ಅವರು ಕಾಂಗ್ರೆಸ್ ಮತ್ತು ಸಂವಿಧಾನ ವರ ಇವೆಲ್ಲವನ್ನು ಸಹ ಯೋಚನೆ ಮಾಡಿ ಮತ ಹಾಕುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು