
ಯಾದಗಿರಿ: ಕಳೆದುಹೋದ ಮೊಬೈಲ್ ಫೆÇೀನ್ನ್ನು ಪೆÇಲೀಸ್ ಠಾಣೆಗೆ ತಂದು ವಾರಸುದಾರರಿಗೆ ಮರಳಿಸುವ ಮೂಲಕ ಆಟೋ ಚಾಲಕ ಮಲ್ಲಪ್ಪ ತಂದೆ ಭೀಮರಾಯ ಮಡಿವಾಳ ಅವರು ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಅ.18ರಂದು ಬೆಳಗ್ಗೆ ಸುಮಾರು 8:30ರ ವೇಳೆಗೆ ಯಾದಗಿರಿ ನಗರದ ಕನಕ ವೃತ್ತದ ಬಳಿ ಮಂತ್ರಾಲಯದ ನಿವಾಸಿ ಜಗದೀಶ ತಂದೆ ಬಸಣ್ಣ ಅವರು ಆಕಸ್ಮಿಕವಾಗಿ ತಮ್ಮ ಮೊಬೈಲ್ ಫೆÇೀನ್ ಕಳೆದುಕೊಂಡಿದ್ದರು.
ಈ ವೇಳೆ ಮೊಬೈಲ್ ಫೆÇೀನ್ ದೊರೆತ ರಾಮಸಮುದ್ರ ನಿವಾಸಿ ಆಟೋ ಚಾಲಕ ಮಲ್ಲಪ್ಪ ಮಡಿವಾಳ ಅವರು ಅದನ್ನು ತಮ್ಮಲ್ಲಿಯೇ ಇಟ್ಟುಕೊಳ್ಳದೆ, ಯಾದಗಿರಿ ನಗರ ಸಂಚಾರಿ ಪೆÇಲೀಸ್ ಠಾಣೆಗೆ ತಂದು ಪಿಎಸ್ಐ ಗಂಗಮ್ಮ ಅವರಿಗೆ ಒಪ್ಪಿಸಿದ್ದಾರೆ.
ನಂತರ ಪೆÇಲೀಸರು ಮೊಬೈಲ್ನ ವಾರಸುದಾರರನ್ನು ಸಂಪರ್ಕಿಸಿ, ಕಳೆದುಹೋಗಿದ್ದ ಮೊಬೈಲ್ ಫೆÇೀನ್ನ್ನು ಅವರಿಗೆ ಮರಳಿಸಿದ್ದಾರೆ.
ತಮಗೆ ಸೇರದ ವಸ್ತುವನ್ನು ಅದರ ವಾರಸುದಾರರಿಗೆ ಮರಳಿಸುವ ಮೂಲಕ ಮಲ್ಲಪ್ಪ ಮಡಿವಾಳ ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಪ್ರಾಮಾಣಿಕ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.






















