
ಯಾದಗಿರಿ: ಶನಿವಾರ ಯಾದಗಿರಿ ನಗರದ ಹೊರವಲಯದಲ್ಲಿರುವ ಗೋಶಾಲೆಯಲ್ಲಿ ಆಯೋಜಿಸಿದ್ದ ಗೋಮಾತೆಯ ಗೌರವದ ಅಭಿಯಾನದಲ್ಲಿ ಯಾದಗಿರಿ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಯುವ ಮುಖಂಡರು ಹಾಗೂ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾದ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ಶ್ರೀ ಚಗನ್ ಅವರನ್ನು ಕಾರ್ಯಕ್ರಮದ ಪ್ರಭಾರಿಯಾಗಿ ಹಾಗೂ ಶ್ರೀ ಗಣಪತಿ ಯಾದವ್ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌತಮ್ ಚಂದ್ ದೋಖಾ, ಭೀಮನಗೌಡ ಕ್ಯಾತನಾಳ, ಕಾಂತಿಲಾಲ್ ದೋಖಾ ಸೇರಿದಂತೆ ಅನೇಕ ಮುಖಂಡರು ಹಾಗೂ ಗೋಪ್ರೇಮಿಗಳು ಉಪಸ್ಥಿತರಿದ್ದರು.






















