
ಚಿಕ್ಕಬಳ್ಳಾಪುರ, ಅ. ೦೮: ರಾಜ್ಯದ ೨೨೪ ಶಾಸಕರುಗಳಲ್ಲಿ “ಮೆಂಟಲ್ ಶಾಸಕ ಎಂದು ಖ್ಯಾತಿ ಹೊಂದಿರುವ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಸ್ಥಾನದಲ್ಲಿ ಮುಂದುವರಿಯಲು ಅನರ್ಹರಾಗಿದ್ದು, ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಹಿಳಾ ಕಾಂಗ್ರೆಸ್ ಮುಖಂಡ ಉಷಾ ಶ್ರೀನಿವಾಸ್ ಬಾಬು ಒತ್ತಾಯಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಪತ್ರಕರ್ತ ಭವನದಲ್ಲಿ ಬಲಿಜ ಸಮುದಾಯದ ವತಿಯಿಂದ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಪ್ರದೀಪ್ ಈಶ್ವರ್ ಅವರು ತಮ್ಮ ಭಾಷಣಗಳಲ್ಲಿ ’ನನಗೆ ಮುಂದಿನ ಜನ್ಮ ಇದ್ದರೆ ನಾನು ಪರಿಶಿಷ್ಟ ಸಮುದಾಯದಲ್ಲಿ ಹುಟ್ಟುತ್ತೇನೆ’ ಎಂದು ಹೇಳುತ್ತಿರುವುದರಿಂದ, ಬಲಿಜ ಜನಾಂಗದಲ್ಲಿ ಇರುವುದಕ್ಕೆ ಅರ್ಹತೆ ಇಲ್ಲ ಎನ್ನುವುದು ಅವರ ಮಾತಿನ ಅರ್ಥ ಎಂದು ಲೇವಡಿ ಮಾಡಿದರು.
ಬಲಿಜ ಜನಾಂಗದಲ್ಲಿ ಕಲಜ್ಞಾನಿ ಕೈವಾರ ನಾರಾಯಣ ತಾತಯ್ಯನ ನಂತರ ಮಹಾತ್ಮರು ಹುಟ್ಟಿದ ಈ ಜನಾಂಗದಲ್ಲಿ ‘ಮೆಂಟಲ್ ಶಾಸಕ ನನಗೆ ಇಲ್ಲ ಎಂದು ಪ್ರಶ್ನಿಸಿ, ಧಾರ್ಮಿಕ, ಶೈಕ್ಷಣಿಕ, ರಾಜಕೀಯವಾಗಿ ಮಹತ್ವದ ಕೊಡುಗೆ ನೀಡಿರುವ ಎಂ.ಎಸ್. ರಾಮಯ್ಯನ ಮನೆತನದ ಕುಡಿ ರಕ್ಷಾ ರಾಮಯ್ಯ ಬಗ್ಗೆ ಇದೇ ‘ಮೆಂಟಲ್ ಶಾಸಕ ಪ್ರದೀಪ್ ಈಶ್ವರ್ ಹಗುರವಾಗಿ ಮಾತನಾಡಿದ್ದಾರೆ, ಇದು ಅವರ ರಾಜಕೀಯ ದಿವಾಳಿತನವನ್ನು ಸೂಚಿಸುತ್ತದೆ” ಎಂದು ಮತ್ತಷ್ಟು ಪ್ರಸರಿಸಿದರು.
ಶಾಸಕ ಪ್ರದೀಪ್ ಈಶ್ವರ್ ಅವರ ಹೇಳಿಕೆಗಳು ಈಗ ಸ್ವಪಕ್ಷೀಯರಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷದ ಹಿರಿಯ ಮುಖಂಡರ ವಿರುದ್ಧನಿಲ್ಲಿ ಶಾಸಕರು ಮಾಡುತ್ತಿರುವ ವಿವಾದಾತ್ಮಕ ಟೀಕೆಗಳು ಮತ್ತು ನಡೆಗಳಿಂದ ಸಮಾಜ ಕಾಂಗ್ರೆಸ್ ಪಕ್ಷಕ್ಕೆ ಹಾನಿ ಆಗುತ್ತಿದೆ ಎಂದು ಬಲಿಜ ಸಮುದಾಯದ ಮುಖಂಡ ರಾಜಣ್ಣ ಹಾಗೂ ಮತ್ತಿತರರಾದ ಕಾಂಗ್ರೆಸ್ ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.
ಚಿಮುಲ್ ಮಾಜಿ ನಿರ್ದೇಶಕ ಕಾಕಾಲ ಚಿಂತೆ ರಾಜಣ್ಣ, ಡಾ. ಎಂ.ಸಿ. ಸುಧಾಕರ್, ಎನ್.ಎಚ್. ಶಿವಶಂಕರ ರೆಡ್ಡಿ ಹಾಗೂ ರಕ್ಷಾ ರಾಮಯ್ಯ ಮುಂತಾದ ಹಿರಿಯ ನಾಯಕರ ಪರಿಶ್ರಮದಿಂದವೇ ಪ್ರದೀಪ್ ಈಶ್ವರ್ ಅವರು ಶಾಸಕರಾಗಲು ಸಾಧ್ಯವಾಯಿತು ಎಂದು ವಿವರಿಸಿದರು. ಆದರೆ ಇಂದು ಅವರು ಅದೇ ನಾಯಕರ ವಿರುದ್ಧ ಏಕವಚನದಲ್ಲಿ ಮಾತನಾಡುತ್ತಿರುವುದು ಮತ್ತು ಕೀಳುಮಟ್ಟದ ಟೀಕೆಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. “ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಮಂಡಿಕಲ್ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧೆ ಮಾಡಿಸಲು ಯೋಚಿಸುತ್ತೇವೆ” ಎಂದರು.
“ಶಾಸಕನ ಧೋರಣದಿಂದಾಗಿ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಅಥವಾ ಸ್ಪರ್ಧಿಸಲು ಕಾರ್ಯಕರ್ತರು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಶಾಸಕರು ತಮ್ಮ ಉಡಾಫೆ ಮಾತು ಮತ್ತು ಭಾಷೆಯನ್ನು ತಕ್ಷಣ ಸೂಕ್ತ ಗೊಳಿಸಬೇಕು, ಇಲ್ಲದಿದ್ದರೆ ಜಿಲ್ಲೆಯಲ್ಲಿಯೂ ಪಕ್ಷ ಸಂಪೂರ್ಣ ಅಧೋಗತಿಗೆ ತಲುಪಲಿದೆ” ಎಂದು ರಾಜಣ್ಣ, ಪಕ್ಷದ ಹಿರಿಯ ಮುಖಂಡರಿಗೆ ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಎಸ್.ಪಿ. ಶ್ರೀನಿವಾಸ್, ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ತಮ್ಮನ್ನು ಬೆಳೆಸಿದವರ ವಿರುದ್ಧವೇ ಶಾಸಕರು ಹಳ್ಳ ತೋಡು
ತ್ತಿದ್ದಾರೆ” ಎಂದು ಕಿಡಿಕಾರಿದರು. “ಕಳೆದ ವಿಧಾನಸಭಾ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್ ಅವರನ್ನು ಸೋಲಿಸಲು ಹಗಲಿರುಳು ಶ್ರಮಿಸಿದ್ದೇನೆ” ಎಂದರು. ಅಂದು ಪ್ರಸಕ್ತ ಶಾಸಕರಿಗೆ ಗೆಲುವು ಸಾಧಿಸಲು ಎಂ.ಸಿ. ಸುಧಾಕರ್ ಅವರಿಗೆ ನಮಸ್ಕಾರ ಮಾಡುತ್ತಿದ್ದು, ಮಾಧ್ಯಮಗಳ ಮುಂದೆ ‘ಗುರು’ ಎಂದು ಕರೆದು, ಈಗ ಅವರ ವಿರುದ್ಧ ದ್ರೋಹ ಬಗೆಯುತ್ತಿದ್ದಾರೆ ಎಂಬುದಾಗಿ ಆರೋಪಿಸಿದರು.
ರಕ್ಷಾ ರಾಮಯ್ಯ ಹಾಗೂ ಅವರ ತಂದೆ ಸೀತಾರಾಮಣ್ಣ, ಪ್ರದೀಪ್ ಈಶ್ವರ್ ಅವರ ಗೆಲುವಿಗಾಗಿ ಕಷ್ಟಪಟ್ಟು ಶ್ರಮಿಸುವುದರ ವಿರುದ್ಧ, “ಅವರು ಚಿಕ್ಕಬಳ್ಳಾಪುರಕ್ಕೆ ಕಾಲಿಡಬಾರದು ಎಂದು ಹೇಳಲು ಯಾರು?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಅಡಗಲ್ ಗ್ರಾಮ ಪಂಚಾಯತ್ ಸದಸ್ಯ ಶಂಕರ್ ಅವರು, ಪ್ರತಿತ್ಯಂಕ್ಷಣ ಪ್ರದೀಪ್ ಈಶ್ವರ್ ಅಕ್ರಮವಾಗಿ ೧೫ ಕೋಟಿ ರೂ. ಲೂಟಿ ಮಾಡುತ್ತಿರುವುದನ್ನು ಉದಾಹರಿಸಿ, ಆ ಹಣ ಯಾರ ಅಪ್ಪನ ಸ್ವತ್ತು?” ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಬಲಿಜ ಸಮುದಾಯದ ಇತರ ಮುಖಂಡರು ಕೂಡ ಉಪಸ್ಥಿತರಿದ್ದರು.
























