ಕಲಬುರಗಿ: ಜಿಲ್ಲಾಡಳಿತ,ಜಿಪಂ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ನಗರದ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ವಿಭಾಗಮಟ್ಟದ ದಸರಾ ಕ್ರೀಡಾಕೂಟಕ್ಕೆ ಇಂದು ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ ಅವರು ಚಾಲನೆ ನೀಡಿದರು.ಅಂತರಾಷ್ಟ್ರೀಯ ಕ್ರೀಡಾಪಟುಗಳಾದ ಅದಿತಿ ಕಂಠಿ, ಬಸವಪ್ರಸಾದ ಪಾಟೀಲ ಅವರು ಕ್ರೀಡಾಜ್ಯೋತಿ ಸ್ವೀಕರಿಸಿದರು.ಸಂಜಯ ಬಾಣದ,ಪ್ರವೀಣ ಪುಣೆ,ಮುಜಮ್ಮಿಲ್ ಕೆಂಭಾವಿ, ಸೇರಿದಂತೆ ಹಲವಾರು ಕ್ರೀಡಾಪಟುಗಳು, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು