Home ಜಿಲ್ಲೆ ಕಲಬುರಗಿ ಶರಣಬಸವ ವಿವಿಯಲ್ಲಿ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಕ್ಯಾಂಪಸ್ ಡ್ರೈವ್

ಶರಣಬಸವ ವಿವಿಯಲ್ಲಿ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಕ್ಯಾಂಪಸ್ ಡ್ರೈವ್

ಕಲಬುರಗಿ: ಕಲಬುರಗಿ ಶರಣಬಸವ ವಿಶ್ವವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಘಟಕದ ವತಿಯಿಂದ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಸಂಸ್ಥೆಯ ಕ್ಯಾಂಪಸ್ ನೇಮಕಾತಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ ಮಂಗಳವಾರದಂದು ಆಯೋಜಿಸಲಾಗಿತ್ತು.
ಕ್ಯಾಂಪಸ್ ಡ್ರೈವ್‍ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಕೋ ಬ್ರೇನ್ಸ್ ಟೆಕ್ನಾಲಜೀಸ್ ಸಂಸ್ಥೆಯ ಕ್ಯಾಂಪಸ್ ಹೈರಿಂಗ್ ಮುಖ್ಯಸ್ಥ ಆಕಾಶ್ ಪಿ.ಎಂ., ಹಿರಿಯ ಜಾವಾ ಡೆವಲಪರ್ ನಾಗಾರ್ಜುನ ಬಗಾಡಿ, ಬೀದರ್‍ನ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಅಧಿಕಾರಿ ವಿವೇಕ್, ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಲಕ್ಷ್ಮೀ ಪಾಟೀಲ ಮಕಾ, ಮೌಲ್ಯಮಾಪನ ಕುಲಸಚಿವ ಡಾ. ಎಸ್.ಎಚ್. ಹೊನ್ನಳ್ಳಿ, ಡೀನ್ ಡಾ. ಶಿವಕುಮಾರ ಜವಳಿಗಿ, ಹಣಕಾಸು ಅಧಿಕಾರಿ ಡಾ. ಕಿರಣ ಮಕಾ, ರಿಸರ್ಚ್ ಡೀನ್ ಡಾ. ಸುಜಾತಾ ಮಲ್ಲಾಪುರ ಹಾಗೂ ಪ್ಲೇಸ್‍ಮೆಂಟ್ ಅಧಿಕಾರಿ ಪ್ರೊ. ಶೋಭನಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕ್ಯಾಂಪಸ್ ನೇಮಕಾತಿಯಲ್ಲಿ, ಶರಣಬಸವ ವಿಶ್ವವಿದ್ಯಾಲಯದ ಸುಮಾರು 500 ವಿದ್ಯಾರ್ಥಿಗಳು ಹಾಗೂ ಸುರಪುರದ ವೀರಪ್ಪ ಇಂಜಿನಿಯರಿಂಗ್ ಕಾಲೇಜಿನಿಂದ 70 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಆಯೋಜಿಸಲಾದ ಈ ಕ್ಯಾಂಪಸ್ ಡ್ರೈವ್‍ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.