
ವಾಡಿ: ಪಟ್ಟಣದ ಮಹಾತ್ಮಾ ಗಾಂಧಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಮಹ್ಮದ್ ರೆಹಾನ್ ತಂದೆ ಸಮೀರ್ ಇನ್ಸ್ಪೈರ್ ರಾಷ್ಟ್ರಮಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಅವರು ಮಂಡಿಸಿದ ವಿಜ್ಞಾನ ಮಾದರಿಯು ರಾಷ್ಟ್ರಮಟ್ಟದಲ್ಲಿ ಆಯ್ಕೆಯಾಗಿದ್ದು, ಅ.12 ರಿಂದ 14. ರವರೆಗೆ ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಪ್ರದರ್ಶನದಲ್ಲಿ ಈ ವಿದ್ಯಾರ್ಥಿ ಭಾಗವಹಿಸಿ ಪ್ರಶಸ್ತಿ ಪಡೆದೊಕೊಳ್ಳಲಿದ್ದಾನೆ.
ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಅಧ್ಯಕ್ಷೆ ನಾಜ್ ಪರ್ವೀನ್, ಕಾರ್ಯದರ್ಶಿ ಶೇಖ ಅನ್ವರ್ ಖಾನ್, ಮುಖ್ಯಶಿಕ್ಷಕಿ ನಾಗರತ್ನಾ, ಶಿಕ್ಷಕರಾದ ಸೈಯದ್ ಅಲ್ತಾಫ್, ಶಿವಕುಮಾರ್, ಹರ್ಷ ವ್ಯಕ್ತಪಡಿಸಿದ್ದಾರೆ.





















