
ಮಂಗಳೂರು-ಪ್ರತಿ ವರ್ಷ ಸೆಪ್ಟೆಂಬರ್ ೨೮ ರಂದು ಖ್ಯಾತ ವಿಜ್ಞಾನಿ ಲೂಯಿಸ್. ಪ್ಯಾಶ್ಚರ್ ಅವರ ಸ್ಮರಣಾರ್ಥ “ವಿಶ್ವ ರೇಬಿಸ್ ದಿನ” (ಹುಚ್ಚು ರೋಗ)ವನ್ನು ಪ್ರಪಂಚದ ಎಲ್ಲಾ ಮೂಲೆಯಲ್ಲಿ ಆಚರಿಸಲಾಗುತ್ತದೆ.
ರೇಬಿಸ್ ರೋಗ ಸಂಪೂರ್ಣ ಮಾರಣಾಂತಿಕವಾದರೂ ಸಕಾಲದಲ್ಲಿ ಮುಂಜಾಗೃತಾ ಕ್ರಮದಿಂದ ತಡೆಯಬಹುದು. ರೋಗವನ್ನು ನಿರ್ಮೂಲನೆ ಮಾಡಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ವಿಶ್ವ ರೇಬಿಸ್ ದಿನದ ಅಂಗವಾಗಿ ನೂತನವಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಕೊ?ಲದ ಪಶುವೈದ್ಯಕೀಯ ಕಾಲೇಜಿನಲ್ಲಿ ಸೆಪ್ಟೆಂಬರ್ ೨೮ ರಂದು ಬೆಳಿಗ್ಗೆ ೧೦ ಗಂಟೆಯಿಂದ ಮದ್ಯಾಹ್ನ ೧೨ ಗಂಟೆಯವರೆಗೆ ಸಾಕುಪ್ರಾಣಿಗಳಾದ ನಾಯಿ ಬೆಕ್ಕುಗಳಿಗೆ ಉಚಿತವಾಗಿ ರೇಬಿಸ್ ರೋಗದ ವಿರುದ್ಧ ಲಸಿಕೆ ನೀಡಲಾಗುತ್ತದೆ. ಪರಾವಲಂಬಿ ಜೀವಿಗಳ ಜಂತು ನಾಶಕ ಔಷದ ಉಚಿತವಾಗಿ ನೀಡಲಾಗುತ್ತದೆ.
ಸುತ್ತಮುತ್ತಲಿನ ಸಾಕು ಪ್ರಾಣಿಗಳ ಮಾಲೀಕರು/ ಜಾನುವಾರು ಮಾಲೀಕರು ಪ್ರಯೋಜನ ಪಡೆಯಬಹುದು ಎಂದು ಪಶುವೈದ್ಯಕೀಯ ಕಾಲೇಜಿನ ಡೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























