Home Uncategorized ಸೆ.25ರಂದು ‘ಗಿರಿಜಾ ಕಲ್ಯಾಣ’ ನಾಟಕ ಉಚಿತ ಪ್ರದರ್ಶನ

ಸೆ.25ರಂದು ‘ಗಿರಿಜಾ ಕಲ್ಯಾಣ’ ನಾಟಕ ಉಚಿತ ಪ್ರದರ್ಶನ

ಬೆಂಗಳೂರು,ಸೆ.೨೪ : ಅದಮ್ಮ ರಂಗಸಂಸ್ಕೃತಿ ಅಭಿನಯದಲ್ಲಿ ಹಾಗೂ ವಿನೂತನ ಕ್ರಿಯೇಷನ್ ಸಹಯೋಗದಲ್ಲಿ ‘ಗಿರಿಜಾ ಕಲ್ಯಾಣ’ ನಾಟಕ ಪ್ರದರ್ಶನಗೊಳ್ಳಲಿದ್ದು ವೀಕ್ಷಣೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಬಿ. ಸುರೇಶ್ ಅವರ ರಚನೆಯ ಈ ನಾಟಕವನ್ನು ಮಾಲತೇಶ ಬಡಿಗೇರ ನಿರ್ದೇಶಿಸಿದ್ದಾರೆ. ನಾಟಕದ ಪ್ರದರ್ಶನವು ಸೆಪ್ಟೆಂಬರ್ 25, 2026ರಂದು ಶುಕ್ರವಾರ ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ರಂಗಕರ್ಮಿ ಡಾ. ವಿಜಯಮ್ಮ, ನಿರ್ದೇಶಕರಾದ ಬಿ. ಸುರೇಶ್, ಖ್ಯಾತ ಕ್ಯಾನ್ಸರ್ ತಜ್ಞರಾದ ಡಾ. ವಿಶಾಲ್ ರಾವ್, ಅಂತರಾಷ್ಟ್ರೀಯ ಧ್ಯಾನ ತರಬೇತುದಾರ ಡಾ. ಅಯ್ಯಪ್ಪ ಪಿಂಡಿ ಹಾಗೂ ನಟ-ನಿರ್ಮಾಪಕ ನಕುಲ್ ಗೋವಿಂದ್ ಸೇರಿದಂತೆ ಹಲವು ರಂಗಭೂಮಿ ಕಲಾವಿಧರು ಹಾಗೂ ಸಮಾಜದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.