
ಗದಗ,ಸೆ೨೨: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆ, ಗದಗ ಇವರ ಸಂಯುಕ್ತಾಶ್ರಯದಲ್ಲಿ ಮಂಜುನಾಥ ನಗರದಲ್ಲಿರುವ ನÀಗರಸಭೆ ಸಭಾಭವನ ಬೆಟಗೇರಿ ಗದಗÀದಲ್ಲಿ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
೯ನೇ ರಾಷ್ಠಿçÃಯ ಪೋಷಣ ಮಾಸಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ರಾಧಾ ಮಣ್ಣೂರ ಅವರು ಉದ್ಘಾಟಿಸಿ ಮಾತನಾಡಿ ಪೋಷಣ ಮಾಸಾಚರಣೆ ಕಾರ್ಯಕ್ರಮವು ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಇಲಾಖೆಯಿಂದ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಆಚರಿಸಲಾಗುತ್ತಿದ್ದು ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಎತ್ತರ ತೂಕವನ್ನು ಅಳೆಯುವ ಮೂಲಕ ಮಕ್ಕಳ ಬೆಳವಣಿಗೆಯ ಮಟ್ಟವನ್ನು ಗುರುತಿಸಿ ಸೂಕ್ತ ಚಿಕಿತ್ಸೆಗೆ ಓಖಅ ಕೇಂದ್ರಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ. ಪಾಲಕರು ಸಹ ತಮ್ಮ ಮೋಬೈಲನಲ್ಲಿ ಪೋಷಣ ಕ್ಯಾಲ್ಕುöಲೇಟರ್ ಬಳಸಿಕೊಂಡು ಸದರಿ ಮಕ್ಕಳ ಬೆಳವಣಿಗೆ ಮಟ್ಟವನ್ನು ಗುರುತಿಸಬಹುದು ಇದು ಎಲ್ಲರ ಜವಾಬ್ದಾರಿಯಾಗಿದೆ ಈ ಸಾಲಿನ ಪೋಷಣ ಮಾಸಾಚರಣೆಯ ಘೋಷ ವಾಕ್ಯವೂ ಸಹ “ಹಮಾರಿ ಅಂಗನವಾಡಿ, ಹಮಾರಿ ಜಿಮ್ಮೆದಾರಿ” (ನಮ್ಮ ಅಂಗನವಾಡಿ, ನಮ್ಮ ಜವಾಬ್ದಾರಿ) ಎಂಬುದಾಗಿದೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪೂರಕ ಪೌಷ್ಠಿಕ ಆಹಾರ ವಿತರಣಾ ವೇಳಾ ಪಟ್ಟಿಯನ್ನು ಇಲಾಖೆಯಿಂದ ನವೀಕರಿಸಲಾಗಿದೆ ಅದರ ಪ್ರಾತ್ಯಕ್ಷಿಕೆಯನ್ನು ಕೂಡಾ ಈ ಕಾರ್ಯಕ್ರಮದಲ್ಲಿ ಆಯೋಜಿಸಿದೆ ಇದನ್ನು ವೀಕ್ಷಿಸಿ ಅರ್ಹ ಫಲಾನುಭವಿಗಳು ಇದರ ಸದುಪಯೋಗವನ್ನು ಅಂಗನವಾಡಿ ಕೇಂದ್ರಗಳ ಮೂಲಕ ಪಡೆಯಿರಿ ಎಂದು ಸಲಹೆ ನೀಡಿದರು.
ಶ್ರೀಮತಿ ಮಂಜುಳಾ ಕಮತ್, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿ ೨೦೨೬-೨೭ ನೇ ಸಾಲಿನÀ ಪೋಷಣ ಮಾಸಾಚರಣೆಯ ಘೋಷ ವಾಕ್ಯ “ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ” ಎಂಬುದಾಗಿದ್ದು ಅಂದರೆ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ & ನಿರ್ವಹಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ ಇಡೀ ಸಮುದಾಯದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪಂಚಗ್ಯಾರAಟಿ ಸದಸ್ಯರಾದ ಸಂಗಮೇಶ ಹಾದಿಮನಿ ಮಾತನಾಡುತ್ತಾ ಈ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ತುಂಬಾ ಅಚ್ಚುಕಟ್ಟಾಗಿ ಆಯೋಜಿಸಿರುತ್ತಾರೆ ಇದರ ಸದುಪಯೋಗ ಸಮುದಾಯದ ಜನರು ಪಡೆಯಬೇಕು ಎಂದರು. ಶ್ರೀಮತಿ ರೇಣುಕಾ ಮಾಗಡಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಾತನಾಡುತ್ತಾ ಗರ್ಭಿಣಿ, ಬಾಣಂತಿ ಹಾಗೂ ಮಕ್ಕಳ ದಿನನಿತ್ಯದ ಆಹಾರವು ಪೌಷ್ಠಿಕಾಂಶದಿAದ ಕೂಡಿರಬೇಕು ಹಾಗೂ ಮಕ್ಕಳ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೌಷ್ಠಿಕ ಆಹಾರವು ಪ್ರಮುಖವಾಗಿದೆ ಎಂಬುದರ ಬಗ್ಗೆ ವಿವರವಾಗಿ ಮಾತನಾಡಿದರು. ಹೊಳಬಸಪ್ಪ ಅಕ್ಕಿ, ಗಣ್ಯರು ಇವರು ಮಾತನಾಡುತ್ತಾ ಇಲಾಖೆಯ ಕಾರ್ಯಕ್ರಮಗಳು ಜನರಿಗೆ ತಲುಪುವಂತಿವೆ ಆದ್ದರಿಂದ ತಮ್ಮ ಇಲಾಖೆಯಿಂದ ಕಾರ್ಯಕ್ರಮಗಳನ್ನು ಆಯೋಜಿಸಲು ಈ ನಗರಸಭೆ ಸಮುದಾಯ ಭವನವನ್ನು ಉಚಿತವಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಬೂದಪ್ಪ ಹುಣಸಿಮರದ ಅತಿಥಿಗಳಾಗಿ ಆಗಮಿಸಿದ್ದರು.
ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶ್ರೀಮತಿ ಶಕುಂತಲಾ ಅಕ್ಕಿ ವಾರ್ಡನ ಸದಸ್ಯರು ಇವರು ಮಾತನಾಡಿ ೨೦೨೬ರ ಸೆಪ್ಟೆಂಬರ ಮಾಹೆಯಲ್ಲಿ ಆಚರಿಸಲಾಗುತ್ತಿರುವ ಪೋಷಣ ಮಾಸಾಚರಣೆ ಕಾರ್ಯಕ್ರಮ “ನಮ್ಮ ಅಂಗನವಾಡಿ ನಮ್ಮ ಜವಾಬ್ದಾರಿ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದ್ದು ಇದು ಕೇವಲ ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿಯಾಗಿರದೇ ಇಡೀ ಸಮಾಜದ ಜವಾಬ್ದಾರಿಯಾಗಿದೆ. ಸಾರ್ವಜನಿಕರ ಸಹಭಾಗಿತ್ವ ದೇಶವನ್ನು ಸದೃಢವಾಗಿಸಲು ಈ ಜವಾಬ್ದಾರಿ ತುಂಬಾ ಅವಶ್ಯಕವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸುಜಾತಾ ಹಾವನೂರ ಮೇಲ್ವಿಚಾರಕರು, ಕು. ಪವನ ಕಾಟೀಗರ ಪೋಷಣ ಅಭಿಯಾನ ಜಿಲ್ಲಾ ಸಹಾಯಕರು, ಶೀಮತಿ ಕಾವೇರಿ ಚೇಗೂರ ಪೋಷಣ ಅಭಿಯಾನ ತಾಲೂಕು ಸಂಯೋಜಕರು, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರು, ಸಾರ್ವಜನಿಕರು, ಗರ್ಭಿಣಿ, ಬಾಣಂತಿಯರು ಹಾಗೂ ಮುದ್ದು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಲಯ ಮೇಲ್ವಿಚಾರಕರಾದ ಶ್ರೀಮತಿ ವಿಜಯಲಕ್ಷಿö್ಮÃ ಗುರುಬಸನಗೌಡರ ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.























