Home ಜಿಲ್ಲೆ ಕಲಬುರಗಿ ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ

ಗ್ರಾಮ ಲೆಕ್ಕಿಗ ಲೋಕಾಯುಕ್ತ ಬಲೆಗೆ

ಕಲಬುರಗಿ,ಸೆ.24-ಕಂದಾಯ ಇಲಾಖೆಯಲ್ಲಿ ಜಮೀನು ಮುಟೇಷನ್ ಮಾಡಿಕೊಡಲು 10 ಸಾವಿರ ರೂ.ಲಂಚ ಪಡೆಯುತ್ತಿದ್ದ ಗ್ರಾಮ ಲೆಕ್ಕಿಗರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರಾಗಿರುವ ರಮೇಶ್ ಎಂಬುವವರೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಮೀನು ಮುಟೇಷನ್ ಮಾಡಿಕೊಡಲು ಗ್ರಾಮ ಲೆಕ್ಕಿಗ ರಮೇಶ್ ಅವರು ಸತೀಶ್ ಎಂಬುವವರಿಗೆ 10 ಸಾವಿರ ರೂ.ಲಂಚ ಕೇಳಿದ್ದರು ಎನ್ನಲಾಗಿದ್ದು, ರಮೇಶ್ ತಮ್ಮ ಸಹಾಯಕ ಸಾಗರ್ ಎಂಬುವವರ ಮೂಲಕ 10 ಸಾವಿರ ರೂ.ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿ ಅರುಣ್ ಮುರಗುಂದಿ ಮತ್ತು ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ರೆಡ್‍ಹ್ಯಾಂಡಾಗಿ ಹಿಡಿದಿದ್ದಾರೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.