Home Uncategorized ಕಾಮಗಾರಿ ಕಳಪೆಯಾಗದಂತೆ ಎಚ್ಚರವಹಿಸಿ

ಕಾಮಗಾರಿ ಕಳಪೆಯಾಗದಂತೆ ಎಚ್ಚರವಹಿಸಿ


ಚನ್ನಮ್ಮನ ಕಿತ್ತೂರು,ಸೆ.೨೪
ಯಾವುದೇ ಕಾಮಗಾರಿ ಕಳಪೆಯಾಗಬಾರದು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರದ ಹಣ ದುರುಪಯೋಗವಾಗಬಾರದು ಅದು ಉಪಯೋಗ ಆಗುವಂತೆ ಗುತ್ತಿಗೆದಾರರು ಎಚ್ಚರವಹಿಸಿ ಕಾಮಗಾರಿ ಪೂರ್ಣಗೊಳಿಸÀಬೇಕೆಂದು ಶಾಸಕ ವಿಠ್ಠಲ್ ಹಲಗೇಕರ ಹೇಳಿದರು.


ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆ ಬೆಂಗಳೂರ, ಜಿಲ್ಲಾಡಳಿತ, ಜಿಪಂ ಬೆಳಗಾವಿ, ತಾಪಂ ಇವರುಗಳ ಸಂಯೋಗದೊAದಿಗೆ ಸಮೀಪದ ಬೀಡಿ ಗ್ರಾಪಂ ವ್ಯಾಪ್ತಿಯಲ್ಲಿ ರೂ. ೨೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿಗಳ ವಸತಿ ಶಾಲೆ ಭೂಮಿಗೆ ಗುದ್ದಲಿ ಪೂಜೆ ಅಡಿಗಲ್ಲು ಸಮಾರಂಭ ನೇರವೇರಿಸಿ ಮಾತನಾಡಿದರು. ಬೀಡಿ ಗ್ರಾಮದಲ್ಲಿ ಬಹುದಿನಗಳ ಕನಸು ಇಂದು ನನಸಾಗಿದ್ದು ಇಲ್ಲಿ ದೊಡ್ಡ ಮಟ್ಟದ ವಸತಿ ನಿಲಯ ಕಟ್ಟಡ ತಲೆ ಎತ್ತುತ್ತಿದೆ ಇದರ ಸದುಪಯೋಗ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಅಶೋಕ ಚಲವಾದಿ, ಸುನೀಲ ಮಡ್ಡಿಮನಿ, ಸಮಾಜ ಕಲ್ಯಾಣ ಅಧಿಕಾರಿ, ಸಿಬ್ಬಂದಿ, ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ಥಳೀಯರು, ಸುತ್ತಮುತ್ತಲಿನ ಗ್ರಾಮಸ್ಥರು ಇತರರಿದ್ದರು. ಶಾಸಕರಿಗೆ ಅವರ ಭಾವಚಿತ್ರ ನೀಡಿ ಸತ್ಕರಿಸಿದರು.