Home ಮುಖಪುಟ ಸುದ್ದಿ ತ.ನಾಡಿಗೆ ನೀರು ಬಿಡುವುದು ಕಷ್ಟ: ಸಿಎಂ

ತ.ನಾಡಿಗೆ ನೀರು ಬಿಡುವುದು ಕಷ್ಟ: ಸಿಎಂ

ಚಿತ್ರದುರ್ಗ,ಸೆ.೨೪: ಕಾವೇರಿ ನದಿಯಲ್ಲಿ ಒಳ ಹರಿವು ಕಡಿಮೆ ಆಗಿರುವುದರಿಂದ ತಮಿಳುನಾಡಿಗೆ ನೀರು ಬಿಡುವುದು ಕಷ್ಟ. ಈ ಬಗ್ಗೆ ನಾವು ಅಪೀಲ್ ಹಾಕುತ್ತಿದ್ದೇವೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.


ಜಿಲ್ಲೆಯ ಸಿರಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಇಲ್ಲ. ಇದರಿಂದ ನೀರಿನ ಕೊರತೆ ಹೆಚ್ಚಾಗಿದೆ. ನೀರು ಇದ್ದರೆ ಬಿಡುತ್ತೇವೆ. ಇಲ್ಲದಿದ್ದರೆ ಏನು ಮಾಡುವುದು ಎಂದು ಪ್ರಶ್ನಿಸಿದ ಅವರು, ಇಂದು ಸಂಜೆ ಕಾವೇರಿ ವಿಚಾರವಾಗಿ ಚರ್ಚೆ ಮಾಡಲಾಗುವುದು ಎಂದರು.
ಕೆಪಿಎಸ್ಸಿ ವಿಚಾರದಲ್ಲಿ ಕಾನೂನು ಚೌಕಟ್ಟು ನೋಡುತ್ತೇವೆ. ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುನ್ನೆಡೆಯುತ್ತೇವೆ. ನ್ಯಾಯಬದ್ಧ, ಪರಿಶುದ್ಧ ಪರೀಕ್ಷೆ ನಡೆಸೋದು ಎಲ್ಲರ ಜವಬ್ದಾರಿ ಆಗಿರುವುದರಿಂದ ಕಾನೂನಿನಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.


ರೈತರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕೇಂದ್ರದ ಸಹಾಯ ಕುರಿತು ರೂಪುರೇಷೆ ಹಾಕಿಕೊಳ್ಳಲಾಗುವುದು. ವಿಪಕ್ಷದವರು ನಿಯೋಗಕ್ಕೆ ಬರುವುದಾಗಿ ಹೇಳಿದ್ದಾರೆ. ಅವರಿಗೆ ಅಭಿನಂದಿಸ್ತೇನೆ ಎಂದು ಹೇಳಿದರು.


ಗೃಹಲಕ್ಷ್ಮಿ ಯೋಜನೆಯನ್ನು ಬಂದ್ ಮಾಡಿ ನೀರಾವರಿ ಯೋಜನೆಗೆ ಆದ್ಯತೆ ನೀಡಬೇಕು ಎಂದು ಬಿಜೆಪಿ ಶಾಸಕ
ಸುರೇಶ್ ಗೌಡ ಸೇರಿದಂತೆ ಇತರರು ಹೇಳಿದ್ದಾರೆ. ಅಲ್ಲದೆ ಬಹಳಷ್ಟು ಜನ ವಿರೋಧಿಸಿದ್ದಾರೆ. ಉಳ್ಳವರನ್ನು ಬಿಟ್ಟು ಬಡವರಿಗೆ ಕೊಡಿ ಎಂಬ ಸಲಹೆ ನೀಡಿದ್ದಾರೆ. ಅದು ಅವರವರ ಅಭಿಪ್ರಾಯ ತಿಳಿಸಿದ್ದಾರೆ ಎಂದಷ್ಟೆ ತಿಳಿಸಿದರು.


ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ರಘುಮೂರ್ತಿ, ಸಚಿವರಾದ ಚೆಲುವರಾಯಸ್ವಾಮಿ, ಮುನಿಯಪ್ಪ, ಬಸವಂತಪ್ಪ, ಶಾಸಕ ಡಾ.ಎಂ.ಚಂದ್ರಪ್ಪ ಸೇರಿದಂತೆ ಇತರರು ಹಾಜರಿದ್ದರು.