Home ಜಿಲ್ಲೆ ಕಲಬುರಗಿ ಸೆ.23 ರಂದು ಮಂದಿರ ಉದ್ಘಾಟನೆ, ಅಡ್ಡಪಲ್ಲಕ್ಕಿ ಮಹೋತ್ಸವ

ಸೆ.23 ರಂದು ಮಂದಿರ ಉದ್ಘಾಟನೆ, ಅಡ್ಡಪಲ್ಲಕ್ಕಿ ಮಹೋತ್ಸವ

ಆಳಂದ: ತಾಲೂಕಿನ ತಡಕಲ ಗ್ರಾಮದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ತಮ್ಮ ತಾಯಿಯ ಸ್ಮರಣಾರ್ಥ ನಿರ್ಮಿಸಿರುವ ಅಂಬಾ ಭವಾನಿ ಮಂದಿರ ಉದ್ಘಾಟನೆ ಹಾಗೂ ಪಂಚ ಪೀಠಾಧೀಶರ ಅಡ್ಡಪಲ್ಲಕ್ಕಿ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸೆ.23ರಂದು ಜರುಗಲಿವೆ.
ಈಕುರಿತು ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಅಂಬಾ ಭವಾನಿ ಮೂರ್ತಿ ಪ್ರಾಣ ಪ್ರತಿμÁ್ಠಪನೆ, 11 ಗಂಟೆಗೆ ಧರ್ಮಸಭೆ, 1008 ಮುತ್ತೈದೆಯರಿಗೆ ಉಡಿ ತುಂಬುವುದು, ಪುರವಂತರ ಕುಣಿತ, ಡೊಳ್ಳು ಹಾಗೂ ಸಕಲ ವಾದ್ಯಗಳೊಂದಿಗೆ ಪಂಚ ಪೀಠದ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಮಹೋತ್ಸವದ ಭವ್ಯ ಮೆರವಣಿಗೆ ಹಾಗೂ ಮಹಾಪ್ರಸಾದ ವಿತರಣೆ ನಡೆಯಲಿದೆ. ಇದರ ಅಂಗವಾಗಿ ಈಗಾಗಲೇ ಸೆ. 18ರಿಂದ ಮಲ್ಲಿಕಾರ್ಜುನ ಶಾಸ್ತ್ರೀ ಐನಾಪೂರ ಹಾಗೂ ಕುಮಾರ ಯೋಗಿರಾಜೇಂದ್ರ ಶಾಸ್ತ್ರೀ ಖಾನಾಪೂರ ಅವರಿಂದ ದೇವಿ ಪುರಾಣ ಜರುಗುತ್ತಿದೆ.
ಕಾರ್ಯಕ್ರಮದಲ್ಲಿ ರಂಭಾಪುರಿ, ಉಜ್ಜೆಯನಿ, ಕೇದಾರ, ಶ್ರೀಶೈಲ, ಕಾಶಿ ಪೀಠದ ಉಭಯ ಪೂಜ್ಯರು ವಹಿಸಲಿದ್ದು ನೇತೃತ್ವವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಲಿದ್ದು, ಸಮ್ಮುಖವನ್ನು ಹಾರಕೂಡನ ಚೆನ್ನವೀರ ಶಿವಾಚಾರ್ಯರು, ಜಿಡಗಾದ ಮುರುಘರಾಜೇಂದ್ರ ಸ್ವಾಮಿ, ನಂದಗಾಂವನ ರಾಜಶೇಖರ ಸ್ವಾಮಿ, ನಿಂಬಾಳದ ಜಡೆ ಶಾಂತಲಿಂಗ ಸ್ವಾಮಿ, ಮುತ್ತ್ವಾನ, ಬಬಲಾದನ ಗುರುಪಾದಲಿಂಗ ಸ್ವಾಮಿ, ಶರಣಬಸವೇಶ್ವರ ಸಂಸ್ಥಾನದ ಚಿರಂಜೀವಿ ದೊಡ್ಡಪ್ಪ ಅಪ್ಪ ವಹಿಸಲಿದ್ದಾರೆ.
ಬಡದಾಳದ ಚೆನ್ನಮಲ್ಲ ಶಿವಾಚಾರ್ಯ, ಮಾದನಹಿಪ್ಪರ್ಗಾದ ಅಭಿನವ ಶಿವಲಿಂಗ ಸ್ವಾಮಿ, ಅಫಜಲಪೂರನ ಮಳೇಂದ್ರ ಶಿವಾಚಾರ್ಯ, ನಿರಗುಡಿಯ ಹವಾ ಮಲ್ಲಿನಾಥ ಮಹಾರಾಜ, ಮಹಾಂತೇಶ್ವರ ಹಿರೇಮಠದ ಮಹಾಂತಲಿಂಗ ಶಿವಾಚಾರ್ಯ ಸೇರಿ ಅನೇಕ ಮಠಾಧೀಶರು ಆಗಮಿಸಲಿದ್ದಾರೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜಕೀಯ ಧುರೀಣರಾದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಕೇಂದ್ರದ ಮಾಜಿ ಸಚಿವ ಭಗವಂತ ಖುಬಾ, ಮಾಜಿ ಸಂಸದರಾದ ಉಮೇಶ ಜಾಧವ, ರವೀಂದ್ರ ಗಾಯಕವಾಡ, ಮಾಜಿ ಸಚಿವರಾದ ಮಾಲಿಕಯ್ಯ ಗುತ್ತೇದಾರ, ರೇವುನಾಯಕ ಬೆಳಮಗಿ, ಸುನೀಲ ವಲ್ಯಾಪೂರೆ, ರಾಜುಗೌಡ, ಬಾಬುರಾವ ಚವ್ಹಾಣ, ಬಸವರಾಜ ಪಾಟೀಲ ಮುರುಮ,
ಸದರಿ ಕಾರ್ಯಕ್ರಮದಲ್ಲಿ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಜಗದ್ಗುರುಗಳ ಆಶೀರ್ವಾದ ಪಡೆದು, ಪ್ರಸಾದ ಸೇವಿಸಿ, ತಾಯಿ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ
ಸುದ್ದಿಗೋಷ್ಠಿಯಲ್ಲಿ ಅಪ್ಪಾಸಾಬ ಗುಂಡೆ, ಮಲ್ಲಿಕಾರ್ಜುನ ಕಂದಗುಳೆ, ಪ್ರಕಾಶ ಮಾನೆ, ಸೀತಾರಾಮ ಜಮಾದಾರ, ಶಿವುಪುತ್ರ ನಡಗೇರಿ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಮತ್ತಿತರರು ಇದ್ದರು.