Home ಜಿಲ್ಲೆ ಕಲಬುರಗಿ ಅಕ್ಷರಗಳ ಆಟದಲ್ಲಿ ಮಿಂಚಿದ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು – ಸ್ಪೆಲ್ಲಿಂಗ್ ಬೀ ಸರಣಿ-6

ಅಕ್ಷರಗಳ ಆಟದಲ್ಲಿ ಮಿಂಚಿದ ಅಪ್ಪಾ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು – ಸ್ಪೆಲ್ಲಿಂಗ್ ಬೀ ಸರಣಿ-6

ಕಲಬುರಗಿ:ಪ್ರತಿ ವರ್ಷದಂತೆ ಈ ವರ್ಷವೂ ನಗರದಅಪ್ಪಾ ಪಬ್ಲಿಕ್ ಶಾಲೆಯ ಮಿಡಲ್ ಸೆಕ್ಷನ್‍ನಲ್ಲಿಸೆಪ್ಟೆಂಬರ್ 16, 2026ರಂದು 7ನೇ ತರಗತಿಯ ವಿದ್ಯಾರ್ಥಿಗಳಿಗಾಗಿ”ಆಂತರಿಕ ಶಾಲಾ ಸ್ಪೆಲ್ಲಿಂಗ್ ಬೀ – ಅಧ್ಯಾಯ 6″ (Iಟಿಣಡಿಚಿ-Sಛಿhooಟ Sಠಿeಟಟiಟಿg ಃee – ಅhಚಿಠಿಣeಡಿ ಗಿI)ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. 6ನೇ ತರಗತಿಯ ವಿವಿಧ ವಿಭಾಗಗಳಿಂದ ಆಯ್ಕೆಯಾದ52ವಿದ್ಯಾರ್ಥಿಗಳುಎರಡನೇ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಕಾರ್ಯಕ್ರಮಕ್ಕೆ ಶಾಲೆಯ ಪ್ರಾಂಶುಪಾಲರಾದಶ್ರೀ ಶಂಕರಗೌಡ ಹೊಸಮನಿ, ಉಪಪ್ರಾಂಶುಪಾಲರಾದಶ್ರೀ ವಿಜು ಕಲ್ಲರ್ ಜೋಸ್, ವಿಭಾಗ ಸಂಯೋಜಕರಾದಶ್ರೀಮತಿ ಆಶಾರಾಣಿ ಪಾಟೀಲ್, ಸ್ಪೆಲ್ಲಿಂಗ್ ಬೀ ಸಂಯೋಜಕರಾದಶ್ರೀ ಮಂಜುನಾಥ ಪಾಟೀಲ್ ಹಾಗೂ ಶ್ರೀಮತಿ ಸುನೀತಾ ಜುಪ್ಪಳ್ಳಿ, ಕು. ಆರ್ಶೀಮಾ ಪ್ರಸಾದ್ಹಾಗೂ ಕಳೆದ ವರ್ಷದ ವಿಜೇತ ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಸ್ಪರ್ಧೆಯ ಕುರಿತು ಮಾತನಾಡಿದ ಪ್ರಾಂಶುಪಾಲರಾದಶ್ರೀ ಶಂಕರಗೌಡ ಹೊಸಮನಿಯವರು, ವಿದ್ಯಾರ್ಥಿಗಳಿಗೆ, ಕೆಲವು ಇಂಗ್ಲಿಷ್ ಪದಗಳಉಚ್ಚಾರಣೆ ಒಂದೇ ರೀತಿಯಾಗಿದ್ದರೂ ಅವುಗಳ ಸ್ಪೆಲ್ಲಿಂಗ್ ವಿಭಿನ್ನವಾಗಿರಬಹುದು. ಆದ್ದರಿಂದ ಪದದ ಉಚ್ಚಾರಣೆಯನ್ನು ಗಮನವಿಟ್ಟು ಕೇಳಿ, ಅದರ ಸರಿಯಾದ ಸ್ಪೆಲ್ಲಿಂಗ್ ಅನ್ನು ಗುರುತಿಸುವ ಕೌಶಲ್ಯವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೆ, ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರಿಗೆ ಬಹುಮಾನ ದೊರೆಯುತ್ತದೆ; ಆದರೆ ಸೋಲು ಕೂಡ ಒಂದುಪಾಠವಾಗಿದ್ದು, ಮುಂದಿನ ಪ್ರಯತ್ನಕ್ಕೆ ದಾರಿದೀಪವಾಗುತ್ತದೆಎಂದು ಹೇಳಿ, ಸೋಲನ್ನು ಧೈರ್ಯದಿಂದ ಸ್ವೀಕರಿಸಿ ಮುಂದಿನ ಅವಕಾಶಕ್ಕಾಗಿ ಸಿದ್ಧರಾಗುವಂತೆ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಇಂತಹ ಸ್ಪರ್ಧೆಗಳು ವಿದ್ಯಾರ್ಥಿಗಳವಿಮರ್ಶಾತ್ಮಕ ಚಿಂತನೆ, ಭಾಷಾ ಕೌಶಲ್ಯ, ಪದಸಂಪತ್ತು ಹಾಗೂ ಆತ್ಮವಿಶ್ವಾಸವನ್ನುಹೆಚ್ಚಿಸಲು ಸಹಕಾರಿಯಾಗುತ್ತವೆ. ಹೊಸ ಪದಗಳ ಅರ್ಥ, ಬಳಕೆ ಮತ್ತು ವ್ಯಾಖ್ಯಾನಗಳನ್ನು ತಿಳಿದುಕೊಳ್ಳುವುದರ ಜೊತೆಗೆ, ಅವುಗಳನ್ನು ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಭಾಷಾ ಕಲಿಕೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಬಹುದು ಎಂದು ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸ್ಪರ್ಧೆಯ ಮೊದಲ 3 ಹಂತದಲ್ಲಿ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆಬರವಣಿಗೆ ಆಧಾರಿತ ಪರೀಕ್ಷೆನಡೆಸಲಾಯಿತು. ಅದರಲ್ಲಿ ಉತ್ತಮ ಸಾಧನೆ ಮಾಡಿದ 52ವಿದ್ಯಾರ್ಥಿಗಳನ್ನು ಎರಡನೇ ಹಂತಕ್ಕೆ ಆಯ್ಕೆ ಮಾಡಲಾಯಿತು. ವಿದ್ಯಾರ್ಥಿಗಳ ಭಾಷಾ ಕೌಶಲ್ಯ ಮತ್ತು ಪದಸಂಪತ್ತನ್ನು ಮತ್ತಷ್ಟು ವೃದ್ಧಿಸುವ ಉದ್ದೇಶದಿಂದ ಅವರ ಪಠ್ಯಪುಸ್ತಕ ಸೇರಿದಂತೆಎನ್.ಸಿ.ಇ.ಆರ್.ಟಿ. ಪಠ್ಯಪುಸ್ತಕಗಳಿಂದ ಆಯ್ದ ಸುಮಾರು 2,000 ಇಂಗ್ಲಿಷ್ ಪದಗಳನ್ನುಆಧರಿಸಿ ಎರಡನೇ ಹಂತದ ಸ್ಪರ್ಧೆಯನ್ನು ರೂಪಿಸಲಾಗಿತ್ತು.
ಒಟ್ಟು8 ಸುತ್ತುಗಳಲ್ಲಿನಡೆದ ಸ್ಪರ್ಧೆಯು ಕೊನೆಯಲ್ಲಿ ಉಳಿದ ಇಬ್ಬರು ವಿದ್ಯಾರ್ಥಿಗಳ ಮಧ್ಯೆ ನಡೆದ
ರೋಚಕ ಸುತ್ತುಗಳಲ್ಲಿ ಪದಗಳ ಜುಗಲಬಂದಿಯು ಅಂತಿಮವಾಗಿ ರೋಚಕರಾಪಿಡ್ ಫೈರ್ ರೌಂಡ್‍ನೊಂದಿಗೆಮುಕ್ತಾಯಗೊಂಡಿತು. ಪ್ರತಿಯೊಂದು ಸುತ್ತಿನಲ್ಲಿಯೂ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ, ಉತ್ಸಾಹದಿಂದ ಹಾಗೂ ಸ್ಪೂರ್ತಿಯಿಂದ ಭಾಗವಹಿಸಿ ಪ್ರೇಕ್ಷಕರ ಗಮನ ಸೆಳೆದರು. ಸರಳ ಪದಗಳಿಂದ ಆರಂಭವಾದ ಸ್ಪರ್ಧೆ ಕ್ರಮೇಣ ಕಠಿಣ ಪದಗಳತ್ತ ಸಾಗುತ್ತಿದ್ದಂತೆ ಸ್ಪರ್ಧೆಯ ರೋಚಕತೆ ಮತ್ತಷ್ಟು ಹೆಚ್ಚಾಯಿತು.

ವಿಜೇತರು
ಎರಡನೇ ಹಂತದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ 6ನೇ ತರಗತಿಯ ವಿದ್ಯಾರ್ಥಿಗಳು:
ಪ್ರಥಮ ಸ್ಥಾನ:ಕುಮಾರಿವರ್ಷಾ ಸಿಂದಗಿ
ದ್ವಿತೀಯ ಸ್ಥಾನ:ಕುಮಾರನಿಶ್ಚಲ್ ಕಲಶೆಟ್ಟಿ
ತೃತೀಯ ಸ್ಥಾನ:ಕುಮಾರಶರಣ್ ಪಾಟೀಲ್
ವಿಜೇತ ವಿದ್ಯಾರ್ಥಿಗಳ ಸಾಧನೆಗೆ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಸಹಪಾಠಿಗಳು ಅಭಿನಂದನೆಗಳನ್ನು ಸಲ್ಲಿಸಿದರು.