
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಆರ್ಥಿಕ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುವ ಮುಂದಿನ ಹೆಜ್ಜೆಯಾಗಿ ರಾಜ್ಯ ಸರಕಾರವು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಹೊಸ ವಿವರವಾದ ನೀಲನಕ್ಷೆಯನ್ನು (ಬ್ಲೂಪ್ರಿಂಟ್) ಸಿದ್ಧಪಡಿಸಿದೆ ಎಂದು ಗೃಹ ಸಚಿವ ಹಾಗೂ ಸಂವಿಧಾನದ 371(ಜೆ) ವಿಧಿಯ ಅನುμÁ್ಠನಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿಯ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಸಂವಿಧಾನದ 371(ಜೆ) ವಿಧಿಯ ಅನುμÁ್ಠನದಿಂದಾಗಿರುವ ಸಾಧನೆಗಳು ಹಾಗೂ ಭವಿಷ್ಯದ ಆಶಯಗಳನ್ನು ಬಿಂಬಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ವತಿಯಿಂದ ಬುಧವಾರ, ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಆಯೋಜಿಸಿದ್ದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿರುವ ಉಪನ್ಯಾಸ ಮಾಲಿಕೆಗೆ ಚಾಲನೆ ನೀಡಿ ಮಾತನಾಡಿದ ಅವರು, 2026ರ ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ಗುರುವಾರ ಕಲಬುರಗಿ ನಗರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರದೇಶದ ಅಭಿವೃದ್ಧಿಗಾಗಿ ರೂಪಿಸಿರುವ ಹೊಸ ನೀಲನಕ್ಷೆಯ ವಿವರಗಳನ್ನು ಅನಾವರಣಗೊಳಿಸಲಿದ್ದಾರೆ ಎಂದರು.
ಕಲ್ಯಾಣ ಕರ್ನಾಟಕದ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವುದರ ಜೊತೆಗೆ, ವಿಶೇಷವಾಗಿ ಜೆನ್ ಜೀ ಸೇರಿದಂತೆ ಯುವ ಪೀಳಿಗೆಯ ಆಶಯಗಳನ್ನು ಈಡೇರಿಸುವ ಉದ್ದೇಶದಿಂದ ಹೊಸ ನೀಲನಕ್ಷೆಯನ್ನು ರೂಪಿಸಲಾಗಿದೆ. 371(ಜೆ) ವಿಧಿಯ ಅನುμÁ್ಠನದ ಬಳಿಕ ದೊರೆತಿರುವ ಪ್ರಯೋಜನಗಳನ್ನು ಮತ್ತಷ್ಟು ಬಲಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ವೃತ್ತಿಪರ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯ ಮೂಲಕ ಯುವಜನತೆಗೆ ದೊರೆಯುತ್ತಿರುವ ಅವಕಾಶಗಳನ್ನು ಮೀರಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಹಾಗೂ ವಿದ್ಯಾವಂತ ಯುವಕರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಸರ್ಕಾರಿ ಸೇವೆಯ ಹೊರತಾಗಿಯೂ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳನ್ನು ಪಡೆಯುವಂತೆ ಮಾಡುವುದು ಹೊಸ ನೀಲನಕ್ಷೆಯ ಉದ್ದೇಶವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ರೂಪಿಸಿರುವ ಹೊಸ ನೀಲನಕ್ಷೆಯಲ್ಲಿ ಐಟಿ ಕಾರಿಡಾರ್ ಒಳಗೊಂಡ ವಿಶೇಷ ಆರ್ಥಿಕ ವಲಯ, ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧಿತ ಸೇವೆಗಳಿಗೆ ಉತ್ತೇಜನ ನೀಡುವ ಬಯೋ ಎಕಾನಮಿ ಆಕ್ಸಿಲರೇಟರ್ ಕಾರ್ಯಕ್ರಮಗಳು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದು ತಿಳಿಸಿದ ಅವರು, “ಎರಡು ಅಥವಾ ಮೂರು ವರ್ಷಗಳೊಳಗೆ ನಿರೀಕ್ಷಿತ ಫಲಿತಾಂಶಗಳನ್ನು ಸಾಧಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ನೀಲನಕ್ಷೆಯನ್ನು ರೂಪಿಸಿದೆ. ಇದು ದೀರ್ಘಾವಧಿಯ ಕಾರ್ಯಕ್ರಮವಲ್ಲ” ಎಂದು ಹೇಳಿದರು.
ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ವೇಗ ನೀಡುವ ಯೋಜನೆಗಳಲ್ಲಿ ಐಟಿ ಕಾರಿಡಾರ್ ಅಭಿವೃದ್ಧಿ, ಎಂಎಸ್ಎಂಇ ಗಳಿಗೆ ಬೆಂಬಲ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಸೇರಿದೆ. “ಪ್ರದೇಶದ ಶ್ರೀಮಂತ ಪರಂಪರೆಯ ಸ್ಮಾರಕಗಳು ಹಾಗೂ ಪ್ರವಾಸಿ ತಾಣಗಳ ಸಾಮಥ್ರ್ಯವನ್ನು ಸದುಪಯೋಗಪಡಿಸಿಕೊಳ್ಳಲು ಹೆರಿಟೇಜ್ ಟೂರಿಸಂ ಅಭಿವೃದ್ಧಿಗೂ ನಾವು ಯೋಜನೆ ರೂಪಿಸಿದ್ದೇವೆ” ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದರು.
ಸಂವಿಧಾನದ 371(ಜೆ) ವಿಧಿಯ ಅನುμÁ್ಠನದಿಂದ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ದೊರೆತಿರುವ ಪ್ರಯೋಜನಗಳನ್ನು ವಿವರಿಸಿದ ಪ್ರಿಯಾಂಕ್ ಖರ್ಗೆ, 371(ಜೆ) ಜಾರಿಯಾದ ಬಳಿಕ ರಾಜ್ಯ ಬಜೆಟ್ನಲ್ಲಿ ನಿಯಮಿತವಾಗಿ ಮೀಸಲಿಡುವ ಅನುದಾನವನ್ನು ಹೊರತುಪಡಿಸಿ, ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ 24,770 ಕೋಟಿ ರೂಪಾಯಿ ಅನುದಾನ ದೊರೆತಿದೆ ಎಂದು ಹೇಳಿದರು.
ಇದುವರೆಗೆ 1.19 ಲಕ್ಷಕ್ಕೂ ಅಧಿಕ ನಿರುದ್ಯೋಗಿ ಪದವೀಧರರು ಹಾಗೂ ಇತರರಿಗೆ ರಾಜ್ಯ ಸರ್ಕಾರದ ವಿವಿಧ ಇಲಾಖೆಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಗಿದೆ. 371(ಜೆ) ಮೀಸಲಾತಿಯಡಿ ಕಲ್ಯಾಣ ಕರ್ನಾಟಕದ 11,000ಕ್ಕೂ ಹೆಚ್ಚು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪ್ರವೇಶ ದೊರೆತಿದೆ. ಇದರ ಜೊತೆಗೆ ಸಾವಿರಾರು ವಿದ್ಯಾರ್ಥಿಗಳು 371(ಜೆ) ಕೋಟಾದಡಿ ದಂತ ವೈದ್ಯಕೀಯ, ಕೃಷಿ, ಪಶುಸಂಗೋಪನೆ ಹಾಗೂ ಫಾರ್ಮಸಿ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಎಲ್ಲ ಸಾಧನೆಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳು ಹಾಗೂ ಆಡಳಿತ ವ್ಯವಸ್ಥೆಯಲ್ಲಿನ ಕೆಲ ಹಿತಾಸಕ್ತಿಗಳಿಂದ ಎದುರಾದ ಅಡೆತಡೆಗಳನ್ನು ನಿವಾರಿಸಿಕೊಂಡು ಸಾಧಿಸಲಾಗಿದೆ. 371(ಜೆ) ಅನುμÁ್ಠನಕ್ಕೆ ಸಂಬಂಧಿಸಿದ ಸಂಪುಟ ಉಪಸಮಿತಿಯ ಮುಂದೆ ಬಾಕಿ ಇದ್ದ ಹೆಚ್ಚಿನ ಸಂಖ್ಯೆಯ ಕುಂದುಕೊರತೆಗಳನ್ನು ಪರಿಹರಿಸಲಾಗಿದೆ. ಒಟ್ಟು 150ಕ್ಕೂ ಅಧಿಕ ದೂರು, ಕುಂದುಕೊರತೆಗಳ ಪೈಕಿ ಇದೀಗ ಕೇವಲ 68 ಮಾತ್ರ ಬಾಕಿ ಉಳಿದಿವೆ ಎಂದು ಪ್ರಿಯಾಂಕ್ ಹೇಳಿದರು.
“ಸಂವಿಧಾನದ 371(ಜೆ) ವಿಧಿಯ ನಿಬಂಧನೆಗಳ ಅನುμÁ್ಠನಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ನಾವು ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುವುದು ನಮ್ಮ ಕರ್ತವ್ಯವೂ ಹೌದು, ನೈತಿಕ ಹೊಣೆಗಾರಿಕೆಯೂ ಹೌದು” ಎಂದು ಖರ್ಗೆ ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶ ಹಿಂದುಳಿದಿರುವುದಕ್ಕೆ ಕಾರಣವಾದ ಐತಿಹಾಸಿಕ ಹಿನ್ನೆಲೆಯನ್ನು ವಿವರಿಸಿದರು. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಸಂವಿಧಾನಾತ್ಮಕ ಭದ್ರತೆ ಕಲ್ಪಿಸುವ ಸಲುವಾಗಿ ಸಂವಿಧಾನ ತಿದ್ದುಪಡಿಗಾಗಿ ನಡೆದ ದೀರ್ಘ ಹೋರಾಟದ ಇತಿಹಾಸವನ್ನು ಅವರು ವಿವರಿಸಿದರು.
ಸಂವಿಧಾನದ 371ನೇ ವಿಧಿಗೆ ತಿದ್ದುಪಡಿ ತಂದು ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರಗಳಲ್ಲಿ ವಿಶೇಷ ಮೀಸಲಾತಿ ಹಾಗೂ ಅಭಿವೃದ್ಧಿ ಚಟುವಟಿಕೆಗಳಿಗೆ ಅನುದಾನ ಒದಗಿಸುವ ತಿದ್ದುಪಡಿಗೆ ಸರ್ವಾನುಮತದ ಅನುಮೋದನೆ ದೊರಕುವಂತೆ ಎಲ್ಲ ಪ್ರತಿಪಕ್ಷಗಳನ್ನು ಮನವೊಲಿಸುವಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಡಾ. ಶರಣ ಪ್ರಕಾಶ ಪಾಟೀಲ ಹೇಳಿದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಗೌರವಾಧ್ಯಕ್ಷ ಶ್ರೀ ಬಸವರಾಜ ದೇಶಮುಖ ಅವರು ಸ್ವಾಗತಿಸಿದರು. ಸಮಿತಿಯ ಅಧ್ಯಕ್ಷ ಲಕ್ಷ್ಮಣ ದಸ್ತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಶೇಖ್ ಅಜ್ಮಲ್ ಗೋಲಾ, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಕೆಯುಡಿಎ ಅಧ್ಯಕ್ಷ ಮಜರ್ ಆಲಂ ಖಾನ್, ಎಚ್ಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿ ಪೆÇ್ರ. ಅನಿಲಕುಮಾರ ಬಿಡವೆ, ಕೆಬಿಎನ್ ವಿಶ್ವವಿದ್ಯಾಲಯದ ಪೆÇ್ರ ಚಾನ್ಸಲರ್ ಡಾ. ಸೈಯದ್ ಶಾ ಮುಸ್ತಫಾ ಹುಸೇನಿ ಹಸನಿ, ಗುಲಬರ್ಗಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಶಶಿಕಾಂತ ಎಸ್. ಉಡಕೇರಿ, ಪೆÇ್ರ. ಆರ್. ಕೆ. ಹುಡಗಿ, ಮಾಜಿ ಸಚಿವ ರೇವೂ ನಾಯಕ್ ಬೆಳಮಗಿ, ನೀಲಾ ಕೆ. ಸೇರಿದಂತೆ ಹಲವರು ಉಪಸ್ಥಿತರಿದ್ದರು.






















