Home ಜಿಲ್ಲೆ ಬೆಂಗಳೂರು ಮತದಾರರ ಪಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ದಾಖಲೆ

ಮತದಾರರ ಪಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ದಾಖಲೆ

ಹಾರೋಹಳ್ಳಿ.ಸೆ.೧೦-ಮತದಾರರ ಪಟ್ಟಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ ಎಂದು ಹಾರೋಹಳ್ಳಿ ತಾಲೂಕು ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಅಪೂರ್ವ ತಿಳಿಸಿದ್ದಾರೆ.


ತಾಲೂಕಿನ ಕಗ್ಗಲಹಳ್ಳಿ ಮತ್ತು ದ್ಯಾವಸಂದ್ರ ಗ್ರಾಮ ಪಂಚಾಯತಿವ್ಯಾಪ್ತಿಯ ಮತದಾರರ ಪಟ್ಟಿ ಶುದ್ಧೀಕರಿಸಿ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.


ಚುನಾವಣೆಯ ಸಂದರ್ಭದಲ್ಲಿ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಯಾವುದ ತೊಂದರೆಯಿಲ್ಲದೆ,ಚಲಾಯಿಸಲು ಮತದಾರರ ಪಟ್ಟಿ ನಿಖರವಾಗಿರುವುದು ಅಗತ್ಯವಾಗಿದೆ.ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯವನ್ನು ನಿಯಮಾನುಸಾರ ನಡೆಸಲಾಗುತ್ತಿದೆ ಎಂದು ಹೇಳಿದರು.


ಮತದಾರರ ಪಟ್ಟಿಯಲ್ಲಿ ಹೆಸರು ಇರುವ ಪ್ರತಿಯೊಬ್ಬರೂ ತಮ್ಮ ಹೆಸರು, ವಿಳಾಸ ವಯಸ್ಸು ಸೇರಿದಂತೆಇತರ ವಿವರಗಳು ಸರಿಯಾಗಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು ಯಾವುದೇ ತಪ್ಪು ಕಂಡು ಬಮದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.


ಹೊಸದಾಗಿ ೧೮ ವರ್ಷ ಪೂರ್ಣಗೊಳಿಸಿರುವ ಯುವ ಮತದಾರರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶವಿದೆ ಅರ್ಹ ಯುವಜನರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.


ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಯಾವುದೇ ಲೋಪ ದೋಷ ಕಂಡು ಬಂದರೆ ನಿಗದಿತ ಅವಧಿಯೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಗತ್ಯ ತಿದ್ದುಪಡಿ ಮಾಡಿಸಿಕೊಳ್ಳಬೇಕು.ಈ ಮೂಲಕ ಶುದ್ಧ ನಿಖರ ಮತ್ತು ವಿಶ್ವಾಸಾರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾರ್ವಹನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು. ಇದೇ ತಿಂಗಳ ೬ನೇ ತಾರೀಖಿನಿಂದ ಸರ್ಕಾರವು ಮತದಾರರ ಪಟ್ಟಿ ಪರಿಶೀಲನಾ ಕಾರ್ಯವನ್ನು ಆರಂಭಸಿದ್ದು ಅಷ್ಟು ಬೇಗ ತಮ್ಮ ತಮ್ಮ ದಾಖಲಾತಿಗಳನ್ನು ನೀಡುವಂತೆ ಮನವಿ ಮಾಡಿದರು.


ಕಗ್ಗಲಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೊಟ್ಟಿಗೆಹಳ್ಳಿ,ಕಾಡುಜಕ್ಕಸಂದ್ರ,ಬಟ್ಟಹಳ್ಳಿಕಾವಲ್, ಗುಳಟ್ಟಿಕಾವಲ್,ದ್ಯಾವಸಂದ್ರ , ಭೀಮಸಂದ್ರ, ಅತ್ತಿಗುಪ್ಪೆ, ಹಾಗೂ ಬನವಾಸಿ ಗ್ರಾಮಗಳ ಮತದಾರರ ಪಟ್ಟಿಯಲ್ಲಿ ಕೈ ಬಿಡಲಾಗಿದ್ದವರ ದಾಖಲಾತಿಗಳನ್ನು ಪರಿಶೀಲನೆ ಮಾಡಿ ಮರು ಜೊಡಣೆ ಮಾಡಲಾಯಿತು. ವಿಎಗಳದ ವೈ ಸಿ, ಅಜಯ್ , ಬಿ ಎಲ್ ಒಗಲಾದ ಮುರಳಿಕೃಷ್ಣ, ಎಸ್.ಡಿ ಎ ಯೋಗೇಶ್, ಮತ್ತು ನಿರಂಜನ್, ಎಫ್ ಡಿ ಎ, ಝಿಶನ್, ಪಿಡಿಒ ಸಮಂತಾ, ಅಪರೇಟರ್ ಸವಿತಾ, ರಾಜೇಶೇಖರ್ ಉಪಸ್ಥಿತರಿದ್ದರು.