
ಆನೇಕಲ್.ಸೆ.೧೦-ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.ಉತ್ತಮ ಶಿಕ್ಷಣದ ಮೂಲಕ ಜ್ಞಾನವಂತ, ಜವಾಬ್ದಾರಿಯುತ ಹಾಗೂ ದೇಶದ ಬಗ್ಗೆ ಕಾಳಜಿ ಹೊಂದಿರುವ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಬಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂರ್ಣಿಮ ಮದುಕುಮಾರ್ ತಿಳಿಸಿದರು.
ಅತ್ತಿಬೆಲೆ ಸರ್ಜಾಪುರ ಮುಖ್ಯ ರಸ್ತೆಯಲ್ಲಿರುವ ಶ್ರೀ ಬ್ರೂ ಅರಿ ಅಂಡ್ ಕಿಚನ್ ಹೋಟೆಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಂದಿನ ವಿದ್ಯಾರ್ಥಿಗಳೇ ನಾಳಿನ ದೇಶದ ಭವಿಷ್ಯವಾಗಿರುವುದರಿಂದ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಮಾರ್ಗದರ್ಶನ ನಿರ್ಣಾಯಕವಾಗಿದೆ ಎಂದು ಹೇಳಿದರು.
ಶಿಕ್ಷಕರ ದಿನಾಚರಣೆ ಅಂಗವಾಗಿ ೨೫ಕ್ಕೂ ಶಿಕ್ಷಕರನ್ನು ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಿಕಟ ಪೂರ್ವ ಅಭ್ಯರ್ಥಿ ಹುಲ್ಲಳ್ಳಿ ಶ್ರೀನಿವಾಸ್. ಪ್ರಾಥಮಿಕ ಶಿಕ್ಷಕರ ಮಾಜಿ ಅದ್ಯಕ್ಷೆ ಪ್ರೇಮ ಕುಮಾರಿ. ಜಯಭಾರತಿ ಶಾಲೆಯ ಆಂಗ್ಲ ಮಾಧ್ಯಮ ವಿಭಾಗದ ಪ್ರಾಂಶುಪಾಲರಾದ ಪ್ರವೀಣ್. ಸಹ ಶಿಕ್ಷಕರಾದ ಅನಿತಾ. ಮೀನಾಕ್ಷಿ ಮಲ್ಲೇಶ್. ಆನೇಕಲ್ ದಿವ್ಯ. ಮರಸೂರು ಅನುಷಾ ರಾಮರೆಡ್ಡಿ. ರಾಧ. ಗೀತಾ ಸೋಮಶೇಖರ್ ರೆಡ್ಡಿ. ಯುವ ಮುಖಂಡರಾದ ರಾಮಸಾಗರ ಸೋಮಶೇಖರ್. ಬಳ್ಳೂರು ಅನಿಲ್ ಕುಮಾರ್. ಶ್ರೀ ಬ್ರೂ ಅರಿ ಅಂಡ್ ಕಿಚನ್ ಹೋಟೆಲ್ ನ ಮಾಲೀಕರಾದ ಬಳ್ಳೂರು ಮದುಕುಮಾರ್. ಶಿಕ್ಷಕರು ಬಾಗವಹಿಸಿದ್ದರು
































