Home ಜಿಲ್ಲೆ ಬೆಂಗಳೂರು ಮಠದ ದಾಸೋಹಕ್ಕೆ ದಿನಸಿ ಪದಾರ್ಥಗಳು

ಮಠದ ದಾಸೋಹಕ್ಕೆ ದಿನಸಿ ಪದಾರ್ಥಗಳು

ಕೋಲಾರ.ಸೆ,೯- ತಾಲ್ಲೂಕಿನ ನಾಗಲಾಪುರದಲ್ಲಿನ ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದಲ್ಲಿ ೧೪ನೇ ವರ್ಷದ ಮನೆ ಮನಗಳಲ್ಲಿ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮದ ಸಮಾರೋಪ ಸಮಾರಂಭವು ಸೆ,೧೦ರ ಗುರುವಾರ ಸಂಜೆ ೫ ಗಂಟೆಗೆ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ ಮಠದಲ್ಲಿ ಭಕ್ತಾಧಿಗಳಿಗೆ ಏರ್ಪಡಿಸಿರುವ ದಾಸೋಹಕ್ಕೆ ತಾಲ್ಲೂಕಿನ ವೀರಶೈವ ಲಿಂಗಾಯತ ಸಮಾಜದವರು ಅಕ್ಕಿ ಬೇಳ ಇನ್ನಿತರ ದಿನಸಿ ಪದಾರ್ಥಗಳನ್ನು ದಾನಿಗಳಿಂದ ಕ್ರೋಡೀಕರಿಸಿ ಕೊಂಡು ಮಂಗಳವಾರ ಮಠಕ್ಕ ನೀಡುವ ಮೂಲಕ ತಮ್ಮ ಸೇವೆ ಸಲ್ಲಿಸಿದರು.


ಈ ಸಂದರ್ಭದಲ್ಲಿ ಮಠದ ಪೀಠಾಧಿಪತಿಗಳಾದ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಂದ ಸಮಸ್ತರಿಗೂ ಮಠದ ವೀರಭದ್ರಸ್ವಾಮಿ ,ಕತೃಗದ್ದುಗಗಳ ಆರ್ಶೀವಾದ ಸದಾಕಾಲ ಇರಲಿ ಎಂದು ಹಾರಸಿದರು.


ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರಾದ ಕಳ್ಳಿಪುರ ನಟರಾಜ್, ಸಚ್ಚಿದಾನಂದ, ಅಮರನಾಥ್, ನಾಗರಾಜ್, ಎ.ಎಸ್.ಐ. ಶೇಖರ್, ಮಲ್ಲಿಕಾರ್ಜುನ್, ಮುಂತಾದವರು ಇದ್ದರು.