
ಕನಕಪುರ.ಸೆ.೯-ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಕಾರ್ಯವನ್ನು ತಾಲೂಕಿನ ಚೀಲೂರು ಗ್ರಾಮ ಪಂಚಾಯತಿಯಲ್ಲಿ ತಹಶೀಲ್ದಾರ್ ಹರ್ಷವರ್ಧನ್ ಮತ್ತು ತಂಡವು ನಡೆಸಿತು.
ಹಾರೋಹಳ್ಳಿ ತಾಲೂಕಿನ ಹಾರೋಹಳ್ಳಿ,ಮರಳವಾಡಿ, ಹೋಬಳಿ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತಿಗಳಿಗೆ ಬೇಟಿಕೊಟ್ಟು ಅರ್ಹ ಫಲಾನುಭವಿಗಳ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯನ್ನು ನಡೆಸಿದರು.
ಎಸ್.ಐ.ಆರ್‌ನಲ್ಲಿ ಮತದಾರರ ಪೌರತ್ವ ಮತ್ತು ವಿಳಾಸ ದೃಢೀಕರಣಕ್ಕೆಂದು ಚುನಾವಣಾ ಆಯೋಗವು ಪಟ್ಟಿ ಮಾಡಿರುವ ೧೧ ದಾಖಲೆಗಳಲ್ಲಿ ಪಿಆರ್‌ಸಿ.ಯಡಿಯಲ್ಲಿ ಬರುವ ಎಸ್‌ಐಆರ್. ಕರಡು ಮತದಾರರ ಪಟ್ಟಿಯನ್ನು ಫಲಾನುಭವಿಗಳ ಪರಿಶೀಲನೆ ಮಾಡಲಾಯಿತು.
೨೦೦೨ರಲ್ಲಿ ಮತದಾರರ ಪಟ್ಟಿಯಲ್ಲಿ ಇರುವ ಮತದಾರರನ್ನು ೨೦೨೬ರ ಪಟ್ಟಿಗೆ ಮ್ಯಾಪಿಂಗ್‌ಮಾಡುವ ಪ್ರಕ್ರಿಯೆ ಇದಾಗಿತ್ತು.
ಈ ಹಂತದಲ್ಲಿ ಮರಳವಾಡಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಚೀಲೂರು ಕಾಳೇಗೌಡನ ದೊಡ್ಡಿ,ಯಡವನಹಳ್ಳಿ, ಹನುಮನಹಳ್ಳಿ, ಹನುಮಂತಪುರ, ಮರಳವಾಡಿ ಹೋಬಳಿ,ಹಾರೋಹಳ್ಳಿ ಹೋಬಳಿ ವ್ಯಾಪ್ತಿಯ ಗಿರೇನಹಳ್ಳಿ, ಬನ್ನಿಕುಪ್ಪೆ, ಹೆಬ್ಬಿದರ ಮೆಟ್ಟಲು, ದೇವರಕಗ್ಗಲಹಳ್ಳಿ, ಕೊಳ್ಳಿಗನಹಳ್ಳಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನಾಲಗನದೊಡ್ಡಿ, ಹುಳಗೊಂಡನಹಳ್ಳಿ, ರಾಮಸಾಗರ ವ್ಯಾಪ್ತಿಯ ಮತದಾರರ ಪಟ್ಟಿಯ ಪರಿಶೀಲನೆ ನಡೆಸಲಾಯಿತು.
ಈ ವೇಳೆ ಆರ್.ಐ ಪ್ರಕಾಶ್, ವಿ.ಎ ಗಳಾದ ಮಂಜುಕುಮಾರ್, ಆಶೋಕ್,ಮನ್ಸೂರ್, ತಂಡವು ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತ್ತು.
































