Home ಜಿಲ್ಲೆ ಬೆಂಗಳೂರು ಶಿಕ್ಷಕರ ದಿನಾಚರಣೆ

ಶಿಕ್ಷಕರ ದಿನಾಚರಣೆ

ಕೋಲಾರ, ಸೆ,೭ – ನಗರದ ಬುದ್ಧ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ ಎಸ್‌ಟಿ ನೌಕರರ ಸಮನ್ಮಯ ಸಮಿತಿ ಕೋಲಾರ ಜಿಲ್ಲಾ ಸಮಿತಿ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಅತ್ಯುತ್ತಮ ಶಿಕ್ಷಕರಿಗೆ ಸನ್ಮಾನ ಮಾಡುವುದರೊಂದಿಗೆ ಸರಳವಾಗಿ ಆಚರಣೆ ಮಾಡಲಾಯಿತು.


ಜಿಲ್ಲೆಯಲ್ಲಿ ಅತ್ಯುತ್ತಮ ಶಿಕ್ಷಕರಾದ ಮುಳಬಾಗಿಲು ತಾಲೂಕಿನ ರತ್ನಮ್ಮ, ಮಾಲೂರು ತಾಲೂಕಿನ ಅಮರಾವತಿ, ಬಂಗಾರಪೇಟೆ ತಾಲೂಕಿನ ಅರುಣ, ಜಿಲ್ಲಾಧ್ಯಕ್ಷ ಎನ್ ಮುನಿರಾಜು ಜಿಲ್ಲಾ ಪದಾಧಿಕಾರಿಗಳಾದ ಡಾ. ಪ್ರಸನ್ನ ಕುಮಾರಿ, ಶ್ರೀಮತಿ ಸುನಿತಾ, ವಿ ಲೋಕೇಶ್ ಜಗನ್ನಾಥ, ಮುಕುಂದ ಅಶೋಕ ಇನ್ನಿತರರು ಭಾಗವಹಿಸಿದ್ದರು