
ಬಾದಾಮಿ, ಸೆ೨: ಶ್ರೀ ಗುರು ರಾಘವೇಂದ್ರ ಗುರು ಸಾರ್ವಭೌಮರ ೩೫೫ ನೇ ಆರಾಧನಾ ಮಹೋತ್ಸವದ ಉತ್ತರರಾಧನೆ ಅಂಗವಾಗಿ ಸೋಮವಾರ ಇಲ್ಲಿನ ಶ್ರೀ ಮಠದಲ್ಲಿ ಮಹಾ ರಥೋತ್ಸವವು ಸಡಗರ ಸಂಭ್ರಮದಿAದ ಜರಗುವ ಮೂಲಕ ಮೂರು ದಿನಗಳ ಆರಾಧನಾ ಮಹೋತ್ಸವವು ಸಂಪನ್ನಗೊAಡಿತು.
ತಳಿರು ತೋರಣ ಹಾಗೂ ಪುಷ್ಪಗಳಿಂದ ಅಲಂಕೃತಗೊAಡಿದ್ದ ರಥೋತ್ಸವದಲ್ಲಿ ಪ್ರಲ್ಹಾದ ರಾಯರ ಉತ್ಸವ ಮೂರ್ತಿಯನ್ನಿಟ್ಟು ಪ್ರದಕ್ಷಿಣೆಯು ಮಠದ ಆವರಣದಲ್ಲಿ ಭಕ್ತರ ವೃಂದದ ಸ್ವಸ್ಥಿವಾಚನಾದಿಗಳ, ಜೊತೆಗೆ ರಾಯರ ಭಜನೆ ಮೂಲಕ ಭಕ್ತಿ ಭಾವದಿಂದ ನಡೆಯಿತು.
ಬೆಳಗ್ಗೆ ಪಂಚಾಮೃತ, ಅಷ್ಟೋತ್ತರ, ಮಹಾಪೂಜೆ, ಸರ್ವಸೇವಾ, ಅಲಂಕಾರ, ಮಹಾನೈವೇಧ್ಯ, ಹಸ್ತೋದಕ, ಮಹಾಮಂಗಳಾರತಿ ನಡೆದವು.
ರಥೋತ್ಸವದಲ್ಲಿ ಈ ಸಂದರ್ಭದಲ್ಲಿ ಸೇರಿದ್ದ ಭಕ್ತಾಧಿಗಳ ತಾಳ ಮೇಳದೊಂದಿಗೆ ಹೆಜ್ಜೆ ಹಾಕಿದರು. ಪುಷ್ಪ ಮತ್ತು ತಳಿರು ತೋರಣಗಳಿಂದ ರಥವನ್ನು ಅಲಂಕೃತಗೊಳಿಸಲಾಗಿತ್ತು. ರಾಯರಿಗೆ ನೈವೇದ್ಯೆ, ಮಹಾ ಮಂಗಳಾರತಿ ಜರುಗಿತು. ನಂತರ ಪಂಡಿತರಿಗೆ ಅಲಂಕಾರ ಸೇವೆ ಮತ್ತು ಭಕ್ತರಿಗೆ ಅನ್ನ ಪ್ರಸಾದ ಜರುಗಿತು. ಕಳೆದ ಮೂರು ದಿನಗಳಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ವಿಶೇಷ ಪೂಜಾ ಕೈಂಕರ್ಯಗಳು ಶ್ರೀ ಮಠದಲ್ಲಿ ಜರುಗಿದವು.
ಅಧ್ಯಕ್ಷ ಕೃಷ್ಣ ಕೆರೂರ, ಕಾರ್ಯದರ್ಶಿ ಅಡವೀಂದ್ರ ಇನಾಮದಾರ, ಡಾ. ವೆಂಕಟೇಶ್ ಭಾಗವತ, ಎಸ್. ಜಿ ಕುಲಕರ್ಣಿ, ವಿ. ಎಲ್. ಇನಾಮದಾರ, ಜಯತೀರ್ಥ್ ಇನಾಮದಾರ, ಗುರುರಾಜ ಪುರೋಹಿತ, ಶ್ರೀಹರಿ, ವಿಷ್ಣುತೀರ್ಥ ಗುಡಿ, ಅನಿರುದ್ಧ ದೇಸಾಯಿ, ಪ್ರಸನ್ನ ಮುಗಳಿ, ನಂದಕುಮಾರ್ ಕಟ್ಟಿ, ಪವಮಾನ, ಬದರೀಶ, ಮಾರುತಿ ಬಿಂಗೇರಿ, ಭಗಿನಿಯರಾದ ವೀಣಾ ಕೆರೂರ, ಪರಿಮಳಾ ಇನಾಮದಾರ, ಪ್ರತಿಭಾ ಕುಲಕರ್ಣಿ, ಶುಭಾ ಮಾಹುಲಿ, ಭಾಗ್ಯಶ್ರೀ ಗುಡಿ, ಪದ್ಮಾವತಿ ಭಾಗವತ, ಸವಿತಾ, ರೇವತಿ, ವೈಷ್ಣವಿ, ವಂದನಾ, ಸೇರಿದಂತೆ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.































